Saturday, July 27, 2024

Latest Posts

ಸಿಡಿ ಮಾಸ್ಟರ್ ಡಿಕೆಶಿ ಪುಕ್ಕಲ, ಮೋಸಗಾರ; ಈ ಕಾರಣಕ್ಕೆ ಸರ್ಕಾರ ಪತನ ಆಗುತ್ತೆ ಎಂದ ಸಾಹುಕಾರ್

- Advertisement -

ಬೆಳಗಾವಿ: ವಿಧಾನಸಭಾ ಚುನಾವಣೆ ಬಳಿಕ ಮೊದಲ ಬಾರಿಗೆ ಸುದ್ದಿಗೋಷ್ಠಿ ನಡೆಸಿದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿ, ಕಾಂಗ್ರೆಸ್ ಸರ್ಕಾರ ಪತನವಾಗುವ ಭವಿಷ್ಯವನ್ನು ನುಡಿದರು.

ಡಿಸಿಎಂ ಡಿಕೆ ಶಿವಕುಮಾರ್ ನಾಟಕ ಮಂಡಳಿ ಬಿಜೆಪಿ ನಾಯಕರ ಹೆಸರು ಕೆಡಸುತ್ತಿದ್ದಾರೆ. 50, 100 ಕೋಟಿ ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. 2019ರಲ್ಲಿ ಡಿಕೆಶಿ ಸೊಕ್ಕು, ದುರಾಡಳಿತದಿಂದ ಪಕ್ಷಾಂತರ ಮಾಡಿದ್ವಿ. ಆಪರೇಷನ್ ಕಮಲ ನಡೆಯುತ್ತಿಲ್ಲ ಎಲ್ಲವೂ ಸುಳ್ಳು ಎಂದು ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡಿದರು.

ಕಾಂಗ್ರೆಸ್ ಗ್ಯಾರಂಟಿ ಯೋಜನೆ ಫೇಲ್ ಆಗಿದೆ. ಜನರ ದಿಕ್ಕು ಬದಲು ಮಾಡಲು ಈ ರೀತಿಯಲ್ಲಿ ಮಾಡುತ್ತಿದ್ದಾರೆ. ಶಿವಕುಮಾರ್ ಅಷ್ಟೇ ಯಾಕೆ ಆಪರೇಷನ್ ಕಮಲದ ಬಗ್ಗೆ ಮಾತನಾಡುತ್ತಿದ್ದಾರೆ. ಅನಿವಾರ್ಯವಾಗಿ ನಿನ್ನೆ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದಾರೆ ಎಂದರು.

ಸರ್ಕಾರ ಪತನದ ಭವಿಷ್ಯ

ಜೆಡಿಎಸ್, ಬಿಜೆಪಿ ಮೈತ್ರಿ ಹಿನ್ನೆಲೆಯಲ್ಲಿ ಎಚ್ ಡಿ ಕುಮಾರಸ್ವಾಮಿ ಭೇಟಿ ಮಾಡಿದ್ದೇನೆ. ಸರ್ಕಾರ ಬೀಳಬಾರದು, ಮುಂದುವರಿಯಬೇಕು. ಈ ಹಿಂದಿನ ಸಿದ್ದರಾಮಯ್ಯ ಈಗ ಇಲ್ಲ. 6 ತಿಂಗಳು ಏನು ಮಾತಾಡಲ್ಲ ಎಂದು ಸಂಕಲ್ಪ ಮಾಡಿದೆ. ನಮ್ಮ ಹೆಸರು ಕೆಡಸಿದ್ದರಿಂದ ನಾನು ಅನಿವಾರ್ಯವಾಗಿ ಮಾತನಾಡುತ್ತಿದ್ದೇನೆ ಎಂದು ಹೇಳಿದರು.

ಹಿರಿಯ ಶಾಸಕನಾಗಿ ಸರ್ಕಾರದ ವಿರುದ್ಧ ಮಾತನಾಡಲ್ಲ. ಸಮ್ಮಿಶ್ರ ಸರ್ಕಾರ ಸಂದರ್ಭದಲ್ಲಿ ಅಜ್ಮೀರ್ ಪ್ರವಾಸದಿಂದ ಇದು ಆರಂಭವಾಯಿತು. ಅಧಿಕಾರಕ್ಕೆ ಬಂದಾಗ ಬೇರೆ ಇರ್ತಾರೆ, ಇಲ್ಲದಾಗ ಡಿಕೆ ಬೇರೆಯೇ ಇರ್ತಾರೆ. ಬೆಳಗಾವಿ ರಾಜಕಾರಣ ಮತ್ತು ‌ಡಿಕೆಯಿಂದ ಸರ್ಕಾರ ಬೀಳಲಿದೆ ಎಂದು ಭವಿಷ್ಯ ನುಡಿದರು.

ಶೆಟ್ಟರ್ ಭೇಟಿಗೆ ಸ್ಪಷ್ಟನೆ: ಲಾಟರಿ ಮಂತ್ರಿ, ಶಾಸಕರು ಯಾವಾಗಲೂ ಡೇಂಜರ್. ಸಿದ್ದರಾಮಯ್ಯ ಬಿಟ್ಟು ಡಿಕೆಶಿ ಸಿಎಂ ಆಗಿದ್ದೇನೆ ಒಂದು ಕೈ ನೋಡುತ್ತೇನೆ. ಎರಡು ವರ್ಷ ದೇವಾಲಯ, ಮನೆಯ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ಮಾಜಿ ಸಿಎಂ ಜಗದೀಶ್ ಶೆಟ್ಟರ್ ಒಬ್ಬ ಒಳ್ಳೆಯ ವ್ಯಕ್ತಿ. ಹಿರಿಯರು ಅವರಿಗೆ ಸಲಹೆ ನೀಡುವ ಶಕ್ತಿ ಇಲ್ಲ. ಖಾಸಗಿಯಾಗಿ ಕುಳಿತು ಚರ್ಚೆ ಮಾಡುತ್ತಿರುತ್ತೇವೆ ಎಂದು ಶೆಟ್ಟರ್ ಭೇಟಿಯ ಬಗ್ಗೆ ಸ್ಪಷ್ಟನೆ ನೀಡಿದರು.

ಡಿಕೆ ಶಿವಕುಮಾರ್ ಒಬ್ಬ ಪುಕ್ಕಲ : ಸಿಡಿ ಮಾಸ್ಟರ್ ಡಿ ಕೆ ಶಿವಕುಮಾರ್ ಸಿಡಿ ಅವರೇ ಶಕ್ತಿ. ಡಿಕೆ ಶಿವಕುಮಾರ್ ಒಬ್ಬ ಪುಕ್ಕುಲ, ಮೋಸಗಾರ ಎಂದು ವಾಗ್ದಾಳಿ ನಡೆಸಿದರು. ಜನರ ಗಮನ ಬೇರೆಡೆ ಸೆಳೆಯಲು ಆಪರೇಷನ್ ಕಮಲದ ಆರೋಪ ಮಾಡುತ್ತಿದ್ದಾರೆ.

ಸಿದ್ದರಾಮಯ್ಯ, ಪರಮೇಶ್ವರ್ ಅವರನ್ನು ಭೇಟಿಯಾಗಿ ಸಿಡಿ ಪ್ರಕರಣ ಸಿಬಿಐ ವಹಿಸಲಿ ಎಂದು ಮನವಿ ಮಾಡುವೆ. ಶೀಘ್ರದಲ್ಲೇ ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾಗಲಿರೋ ವಿಷಯವನ್ನು ತಿಳಿಸಿದರು.

ಶೀಘ್ರದಲ್ಲಿಯೇ ಡಿಕೆಶಿ ಮಾಜಿ ಮಂತ್ರಿ ಆಗ್ತಾರೆ

ರಾಜ್ಯಕ್ಕೆ ಡಾ. ಬಿ ಆರ್ ಅಂಬೇಡ್ಕರ್ ಹೆಸರು ಇಡಬೇಕು. ಅಂಬೇಡ್ಕರ್ ಜೀವನ ಸಾಧನೆ ನಮ್ಮ ಕಣ್ಣಮುಂದೆ ಇದೆ. ಅಂಬೇಡ್ಕರ್ ಹೆಸರು ಇಡಬೇಕು ಎಂದು ಆಗ್ರಹಿಸಿದರು. ಅತಿ ಶೀಘ್ರದಲ್ಲೇ ಡಿಕೆ ಶಿವಕುಮಾರ್ ಮಾಜಿ ಮಂತ್ರಿ ಆಗಲಿದ್ದಾರೆ. ನನಗೆ ಆಗಿರೋ ಕಷ್ಟ ಪಕ್ಷದಲ್ಲಿ ಸತೀಶ್ ಜಾರಕಿಹೊಳಿಗೆ ಆಗಲ್ಲ ಎಂದು ಹೇಳಿದರು.

ಡಿಕೆಶಿ ಹೊರಗಿಟ್ಟು ಕೈ ನಾಯಕರ ಡಿನ್ನರ್ ಪಾಲಿಟಿಕ್ಸ್; ಆಪ್ತ ಸಚಿವರ ಜತೆ ಸಿದ್ದರಾಮಯ್ಯ ಚರ್ಚೆ

ಬಳ್ಳಾರಿ ಕಾಂಗ್ರೆಸ್‌ನಲ್ಲಿ ಅಸಮಾಧಾನ ಸ್ಫೋಟ..

‘ಲೋಕಸಭೆ ಚುನಾವಣೆಯಲ್ಲಿ ನಾವೆಲ್ಲ ಗೆಲ್ಲುವುದು, ನಮ್ಮ ದೇವರು ನರೇಂದ್ರ ಮೋದಿ ಅವರ ಹೆಸರಿನಿಂದ’

- Advertisement -

Latest Posts

Don't Miss