ಕರ್ನಾಟಕ ಟಿವಿ : ಐಟಿ, ಇಡಿಯಿಂದ ಅಕ್ರಮ ಆಸ್ತಿಗಳಿಗೆ ಆರೋಪ ಹೊತ್ತು ತಿಹಾರ್ ಜೈಲು ಸೇರಿದ್ದ ಡಿಕೆ ಶಿವಕುಮಾರ್ ಇದೀಗ ದಕ್ಷಿಣ ದಂಡಯಾತ್ರೆ ಶುರು ಮಾಡಿದ್ದಾರೆ. ತಿಹಾರ್ ಜೈಲಿನಿಂದ ಕರ್ನಾಟಕಕಕ್ಕೆ ಕಾಲಿಟ್ಟ ಡಿಕೆ ಶಿವಕುಮಾರ್ ಗೆ ಮೊದಲ ದಿನದಿಂದಲೂ ಭರ್ಜರಿ ಸ್ವಾಗತ ಸಿಗ್ತಿದೆ. ಡಿಕೆಶಿ ಬೆಂಗಳೂರಿಗೆ ಕಾಲಿಡ್ತಿದ್ದ ಹಾಗೆಯೇ ಸ್ವತಃ ಕುಮಾರಸ್ವಾಮಿ ಕೈಕುಲುಕಿ ವೆಲ್ ಕಂ ಮಾಡಿದ್ದಾರೆ.. ಬೆಂಗಳೂರು ಏರ್ ಪೋರ್ಟ್ ನಿಂದ ಸಾವಿರಾರು ಅಭಿಮಾನಿಗಳು ಭವ್ಯ ಮೆರವಣಿಗೆ ಮೂಲಕ ಬೆಂಗಳೂರಿಗೆ ಹೊತ್ತು ತಂದಿದ್ದನ್ನ ಇಡೀ ದೇಶವೇ ನೋಡಿದೆ.. ಸ್ವಾಮೀಜಿಗಳು, ಒಕ್ಕಲಿಗ ಸಂಘಟನೆಗಳೂ ಸೇರಿದಂತೆ ತಾನು ಜೈಲು ಸೇರಿದಾಗ ಬೀದಿಗಿಳಿದು ಪ್ರತಿಭಟಿಸಿದ ಎಲ್ಲರಿಗೂ ಡಿಕೆ ಶಿವಕುಮಾರ್ ಥ್ಯಾಂಕ್ಸ್ ಹೇಳಿದ್ದಾರೆ.. ಕಳೆದೆರಡು ದಿನಗಳಿಂದ ಬೆಂಬಲಿಗರು ಮೈಸೂರು, ಮಂಡ್ಯದಲ್ಲಿ ಡಿಕೆಶಿಯನ್ನ ಭರ್ಜರಿಯಾಗಿ ಮೆರವಣಿಗೆ ಮಾಡಿದ್ದಾರೆ.. ಚಾಮುಂಡಿ ಬೆಟ್ಟದಲ್ಲಿ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರು ಡಿಕೆಶಿವಕುಮಾರ್ ಹೆಗಲ ಮೇಲೆ ಕೈಹಿಟ್ಟು ಡೋಂಟ್ ವರಿ ಶಿವಕುಮಾರ್ ನಿಮ್ಮ ಜೊತೆ ನಾವಿದ್ದೇವೆ ಅಂತ ಹೇಳಿದ್ದಾರೆ.. ಮೈಸೂರು, ಮಂಡ್ಯದಲ್ಲಿ ಕಾಂಗ್ರೆಸ್ ನಾಯಕರಿಗಿಂತ ಜೆಡಿಎಸ್ ಶಾಸಕರು, ಕಾರ್ಯಕರ್ತರು ಡಿಕೆ ಶಿವಕುಮಾರ್ ಗೆ ಅದ್ದೂರಿ ಸ್ವಾಗತ ನೀಡಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣ ಕಂಪ್ಲೀಟ್ ಕನಕಪುರದ ಬಂಡೆ ಹಿಂದೆ ಗಟ್ಟಿಯಾಗಿ ನಿಂತಿದೆ.. ಒಕ್ಕಲಿಗ ಸ್ವಾಮೀಜಿಗಳು ಡಿಕೆಶಿಗೆ ಆಶಿರ್ವಾದ ಮಾಡಿದ್ದಾರೆ.. ಬಿಜೆಪಿ ಹಿರಿಯ ನಾಯಕ ಮಾಜಿ ಸಿಎಂ ಸ್ . ಎಂ ಕೃಷ್ಣ ಸ್ವತಃ ಡಿಕೆಶಿ ಮನೆಗೆ ತೆರಳು ಧೈರ್ಯ ತುಂಬಿದ್ದಾರೆ.. ಒಕ್ಕಲಿಗ ಜನಾಂಗದಲ್ಲಿ ಸರ್ವರೂ ಡಿಕೆಶಿಗೆ ಶಕ್ತಿ ತುಂಬಿದ್ದಾರೆ..
ಡಿಕೆಶಿ ಮುಂದೆ ಮಂಡಿಯೂರಿದ ಜೆಡಿಎಸ್..!
ಇನ್ನು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಖತಂ ಆಗಿದೆ ಅಂತ ಸಿದ್ದರಾಮಯ್ಯ ಘೋಷಣೆ ಮಾಡಿಬಿಟ್ಟಿದ್ದಾರೆ.. ಆದ್ರೆ, ಜೆಡಿಎಸ್ ಕಾರ್ಯಕರ್ತರು ಹಾಗೂ ಶಾಸಕರು ಮಾತ್ರ ಡಿಕೆಶಿ ಮೇಲೆ ಹೆಚ್ಡಿ ಕುಮಾರಸ್ವಾಮಿಯಷ್ಟೆ ಸ್ವಾಮಿ ನಿಷ್ಠೆಯನ್ನ ಶಿವಕುಮಾರ್ ಗೆ ತೋರ್ತಿದ್ದಾರೆ.. ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ಇನ್ನು ಒಂದು ಹೆಜ್ಜೆ ಮುಂದೆ ಹೋಗಿರುವ ಜೆಡಿಎಸ್ ಮುಖಂಡರು ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಸೀಟು ಹಂಚಿಕೆ ಮಾಡಿಕೊಂಡು ಚುನಾವಣೆ ಎದುರಿಸುತ್ತಿದ್ದಾರೆ.. ಮೈಸೂರು, ಹಾಸನ, ಮಂಡ್ಯ, ರಾಮನಗರದಲ್ಲಿ ಡಿಕೆ ಶಿವಕುಮಾರ್ ಒಂದು ರೀತಿ ಜೆಡಿಎಸ್ ನಾಯಕರಾಗಿಬಿಟ್ಟಿದ್ದಾರೆ.. ಜೆಡಿಎಸ್ ಕಾರ್ಯಕರ್ತರು ಡಿಕೆಶೀ ಹೋದ ಕಡೆಯಲ್ಲೆಲ್ಲಾ ಸಾಗರೋಪಾದಿಯಲ್ಲಿ ಸೇರುತ್ತಿರೋದು ಕಾಂಗ್ರೆಸ್ ನಾಯಕರಿಗೆ ಕಸಿವಿಸಿಯಾಗುವಂತೆ ಮಾಡಿದೆ.. ಶ್ರೀರಂಗಪಟ್ಟಣ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಡಿಕೆಶಿಯನ್ನ ಕಾರಿನಲ್ಲಿ ಕೂರಿಸಿಕೊಂಡು ತಾವೇ ಡ್ರೈವ್ ಮಾಡಿದ್ದಾರೆ.. ಈ ವೇಳೆ ಮಂಡ್ಯದ ಪ್ರಭಾವಿ ಕಾಂಗ್ರೆಸ್ ಮುಖಂಡ ಚಲುವರಾಯಸ್ವಾಮಿ ಅಂಡ್ ಟೀಂ ಸೈಡಿಗೆ ಹೋಗಿ ನಿಲ್ಲುವ ಮಟ್ಟಿಗೆ ಈಗಾಗಲೇ ಅಸಮಾಧಾನ ಶುರುವಾಗಿದೆ..
ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಗೆ ಡಿಕೆಶಿ ಭಯ
ಡಿಕೆಶಿ ಜೈಲು ಸೇರಿದಾಗ ಪ್ರತಿಭಟನೆ ಜೋರಾಗಿ ನಡೆದಿದ್ದು ಹಳೇ ಮೈಸೂರು ಭಾಗದಲ್ಲಿ ಮಾತ್ರ.. ಉಳಿದೆಡೆ ಕಾಂಗ್ರೆಸ್ ನಾಯಕರು ಸಾಂಕೇತಿಕ ಪ್ರತಿಭಟನೆ ಮಾಡಿದ್ದಾರೆ.. ಜೈಲು ಸೇರಿ ವಾಪಸ್ ಆಗಿರುವ ಡಿಕೆಶಿ ಮೇಲೆ ಒಕ್ಕಲಿಗ ಮತದಾರರು ಅನುಕಂಪದ ಗಾಳಿ ಬೀಸ್ತಿದೆ.. ಇದೇ ಅಲೆ ವಿಧಾನಸಭಾ ಚುನಾವಣೆ ಬರುವ ವರೆಗೂ ಇದ್ದರೆ ಖಂಡಿತ ಹಳೇ ಮೈಸೂರು ಭಾಗದ 46 ಕ್ಷೇತ್ರಗಳಲ್ಲಿ ಕಾಂಗ್ರೆಸ್ 30 ಸ್ಥಾನಗಳನ್ನ ಬಾಚಿಕೊಳ್ಳಲಿದೆ.. ಬಿಜೆಪಿ ತನ್ನ ಸಾಂಪ್ರದಾಯಿಕ 6-10 ಸ್ಥಾನಗಳನ್ನ ಮಾತ್ರ ಉಳಿಸಿಕೊಳ್ಳಲಿದೆ. ಆದ್ರೆ, ಜೆಡಿಎಸ್ ಈ ಪ್ರಸ್ತುತ 27 ಶಾಸಕರನ್ನ ಹೊಂದಿದ್ದು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 4 ರಿಂದ 5 ಸ್ಥಾನಕ್ಕೆ ಕುಸಿದರೂ ಆಶ್ಚರ್ಯ ಪಡಬೇಕಿಲ್ಲ.. ಜೆಡಿಎಸ್ ತನ್ನ ಭದ್ರಕೋಟೆಯಲ್ಲೇ ನೆಲೆಕಳೆದುಕೊಳ್ಳಲು ಕಾರಣ ಡಿಕೆ ಶಿವಕುಮಾರ್ ಪರ ಬೀಸುತ್ತಿರುವ ಸುನಾಮಿ.. ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಆರೇಳು ಕ್ಷೇತ್ರವನ್ನ ಹೊರತು ಪಡಿಸಿದ್ರೆ ಉಳಿದ ಕಡೆ ಠೇವಣಿ ಕೂಡ ಬರಲ್ಲ.. 28 ರಿಂ 30 ಕ್ಷೇತ್ರಗಳಲ್ಲಿ ಕಾಂಗ್ರೆಸ್, ಜೆಡಿಎಸ್ ಪಕ್ಷವೇ ಎದುರಾಳಿಗಳು.. ಹೀಗಾಗಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಹಳೇ ಮೈಸೂರು ಭಾಗದ ಒಕ್ಕಲಿಗರು ಸಾರಾಸಗಟಾಗಿ ಡಿಕೆ ಶಿವಕುಮಾರ್ ಬೆನ್ನಿಗೆ ನಿಲ್ಲೋದು ಪಕ್ಕಾ.. ಈ ಲೆಕ್ಕಾಚಾರ ಜೆಡಿಎಸ್ ಶಾಸಕರ ಎದೆಯಲ್ಲಿ ನಡುಕ ಉಂಟು ಮಾಡಿದೆ..
ರಾಮನಗರ ಜಿಲ್ಲೆಯ ಕನಕಪುರ, ಮಾಗಡಿ ವಿಧಾನಸಭಾ ಕ್ಷೇತ್ರಗಳ ಲ್ಲಿ ಕಾಂಗ್ರೆಸ್ ಗೆಲುವು ಫಿಕ್ಸ್, ಇನ್ನು ರಾಮನಗರ, ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಹಾಗೂ ಅವರ ಪತ್ನಿಗೆ ಡಿಕೆಶಿವಕುಮಾರ್ ನೆರವು ನೀಡ್ತಾರೆ.. ಇನ್ನು ಮಂಡ್ಯದಲ್ಲಿ 7 ವಿಧಾನಸಭಾ ಕ್ಷೇತ್ರಗಳಲ್ಲೂ ಜೆಡಿಎಸ್ ಶಾಸಕರಿದ್ದಾರೆ.. ಆದ್ರೆ, ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಮತಗಳು ಡಿಕೆಶಿ ನಾಯಕತ್ವದಡಿಯಲ್ಲಿ ಕಾಂಗ್ರೆಸ್ ಬುಟ್ಟಿಗೆ ಬೀಳೋದು ಪಕ್ಕಾ.. ಹೀಗಾಗಿ ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ ಕಾಂಗ್ರೆಸ್ ಬೆಂಬಲಿತ ರೈತಸಂಘದ ದರ್ಶನ್ ಪುಟ್ಟಣ್ಣಯ್ಯ ಗೆಲುವು ಸಾಧಿಸಿದ್ರೆ ಉಳಿದ 6 ಕ್ಷೇತ್ರಗಳು ಕಾಂಗ್ರೆಸ್ ಅಭ್ಯರ್ಥಿಗಳ ಪಾಲಾಗೋದು ಗ್ಯಾರಂಟಿ..
ಇನ್ನು ಮೈಸೂರಿನಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆಶಿ ಫ್ಯಾಕ್ಟರ್ ಕೆಲಸ ಮಾಡಲಿದ್ದು ಹನ್ನೋಂದು ಕ್ಷೇತ್ರಗಳಲ್ಲಿ ಒಂದೆರಡು ಕ್ಷೇತ್ರ ಬಿಟ್ಟು ಉಳಿದ ಕಡೆ ಕಾಂಗ್ರೆಸ್ ದಿಗ್ವಿಜಯ ಸಾಧಿಸಲಿದೆ.. ಹಾಗೆಯೇ ಚಾಮರಾಜನಗರ ಸಾಂಪ್ರದಾಯಿಕವಾಗಿ ಕಾಂಗ್ರೆಸ್ ಭದ್ರಕೋಟೆ.. ಆದ್ರೆ, ಕೊಳ್ಳೆಗಾಲ ಹೊರತುಪಡಿಸಿದ್ರೆ ಗುಂಡ್ಲುಪೇಟೆ, ಚಾಮರಾಜನಗರ, ಹನೂರಿನಲ್ಲಿ ಬಿಜೆಪಿ ಕಾಂಗ್ರೆಸ್ ಜಿದ್ದಾಜಿದ್ದಿನ ಸ್ಪರ್ಧೇ ನಡೆಯಲಿದ್ದು ಅಂತಿಮವಾಗಿ ಕಾಂಗ್ರೆಸ್ ಮೇಲುಗೈ ಸಾಧಿಸೋದು ಪಕ್ಕ.. ಆದ್ರೆ, ಕೊಡಗಿನ 2 ಕ್ಷೇತ್ರಗಳಲ್ಲಿ ಬಿಜೆಪಿ ವಿರುದ್ಧ ಡಿಕೆಶಿ ಪರವಾದ ಅಲೆ ಕೆಲಸ ಮಾಡೋದು ಡೌಟು. ಹೀಗಾಗಿ ಕೊಡಗಿನಲ್ಲಿ ಕಮಲದಾಟ ಮುಂದುವರೆಯಲಿದೆ. ಇನ್ನು ಅಂತಿಮವಾಗಿ ಹಾಸನ ಜಿಲ್ಲೆಯಲ್ಲಿ ಡಿಕೆಶಿ ಪ್ರಭಾವ ದೊಡ್ಡ ಪಟ್ಟದಲ್ಲಿ ಇಲ್ಲ.. ಆದ್ರೆ, ಎ ಮಂಜು ವಾಪಸ್ ಕಾಂಗ್ರೆಸ್ ಗೆ ಬಂದು ಡಿಕೆಶಿ ಪ್ಲಾನ್ ವರ್ಕೌಟ್ ಆದ್ರೆ, ಹಾಸನದಲ್ಲಿ ದಳದಲ್ಲಿ ತಳಮಳ ಗ್ಯಾರಂಟಿ.. ಅಂತಿಮವಾಗಿ ಡಿಕೆ ಶಿವಕುಮಾರ್ ಕಣ್ಣೀಟ್ಟಿರೋದು ಮತ್ತೊಂದು ಜೆಡಿಎಸ್ ಭದ್ರಕೋಟೆ ಎಂದು ಕರೆಸಿಕೊಳ್ಳುವ ತುಮಕೂರು ಜಿಲ್ಲೆ.. ಈಗಾಗಲೇ ಡಾ. ಜಿ ಪರಮೇಶ್ವರ್, ಜಯಚಂದ್ರ, ಡಿಕೆಶಿ ಸಂಬಂಧಿ ಕುಣಿಗಲ್ ಶಾಸಕ ರಂಗನಾಥ್ ಜಿಲ್ಲೆಯಲ್ಲಿ ಪ್ರಬಲರಾಗಿದ್ದಾರೆ.. ತುಮಕೂರಿನ ಒಕ್ಕಲಿಗರು ಡಿಕೆಶಿ ಬೆನ್ನಿಗೆ ನಿಲ್ಲುವ ಲಕ್ಷಣ ಗೋಚರಿಸುತ್ತಿದೆ.. ಒಂದು ವೇಳೆ ಡಿಕೆಶಿ ಪರವಾಗಿ ಪ್ರಸ್ತುತ ಇರುವ ಅನುಕಂಪ ಮುಂದುವರೆದರೆ ಖಂಡಿತ ಮುಂದಿನ ಚುನಾವಣೆಯಲ್ಲಿ ತುಮಕೂರು ಜಿಲ್ಲೆಯ 11 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸಿಂಹ ಪಾಲು ತನ್ನದಾಗಿಸೋದು ಗ್ಯಾರಂಟಿ..
ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಕಾರ್ಯಕರ್ತರು ಹಾಗೂ ಒಕ್ಕಲಿಗ ಸಮುದಾಯ ಡಿಕೆ ಶಿವಕುಮಾರ್ ರನ್ನ ಈಗ ಬಿಗಿದಪ್ಪಿಕೊಂಡಂತೆ ವಿಧಾನಸಭಾ ಒಪ್ಪಿಕೊಂಡ್ರೆ ಜೆಡಿಎಸ್ ಶಾಸಕರ ಸಂಖ್ಯೆ ರಾಜ್ಯದಲ್ಲಿ ಎರಡಂಕಿಗಿಂತ ಕೆಳಗೆ ಕುಸಿಯೋದು ಗ್ಯಾರಂಟಿ.. ಇದು ಸ್ವತಃ ಜೆಡಿಎಸ್ ಶಾಸಕರು ಹಾಗೂ ವರಿಷ್ಠರಿಗೆ ಗೊತ್ತಿರುವ ವಿಷಯ.. ಹೀಗಾಗಿ ಕಾಂಗ್ರೆಸ್ ಪಕ್ಷವನ್ನ ಈಗಿನಿಂದಲೇ ವಿರೋಧಿಸಲು ಶುರು ಮಾಡಿದ್ದಾರೆ.. ಆದ್ರೆ, ಲಕ್ಷಾಂತರ ಸಂಖ್ಯೆಯಲ್ಲಿ ಜೆಡಿಎಸ್ ನ ಒಕ್ಕಲಿಗ ಮತದಾರರು ಡಿಕೆಶಿ ಪರವಾಗಿ ಅನುಕಂಪ ಹೊಂದಿರೋದು ಮತವಾಗಿ ಕಾಂಗ್ರೆಸ್ ಗೆ ಪರಿವರ್ತನೆ ಆದ್ರೆ ರಾಜಕೀಯವಾಗಿ ಜೆಡಿಎಸ್ ಕಳೆಗುಂದಲಿದೆ.. ದಕ್ಷಿಣ ಕರ್ನಾಟಕದಲ್ಲಿ ಡಿಕೆಶಿ ಅಲೆ ಎದ್ದಿರೋದು ಎಷ್ಟು ಸತ್ಯವೋ, ಉತ್ತರ ಕರ್ನಾಟಕ, ಮಧ್ಯಕರ್ನಾಟಕ ಹಾಗೂ ಕರಾವಳಿ ಕರ್ನಾಟಕದಲ್ಲಿ ಡಿಕೆ ಶಿವಕುಮಾರ್ ಮೇಲೆ ದೊಡ್ಡ ಮಟ್ಟದ ಪ್ರೀತಿ ಕಾಣಿಸದೆ ಇರೋದು ಅಷ್ಟೆ ಸತ್ಯ..
ಯಸ್ ವೀಕ್ಷಕರೆ ನಿಮ್ಮ ಪ್ರಕಾರ ಡಿಕೆಶಿ ದಕ್ಷಿಣ ದಂಡಯಾತ್ರೆ ಜೆಡಿಎಸ್ ಗೆ ಮುಳುವಾಗುತ್ತಾ..? ಇಡೀ ಒಕ್ಕಲಿಗರು ಡಿಕೆಶಿಯನ್ನ ಸಂಪೂರ್ಣವಾಗಿ ಬೆಂಬಲಿಸ್ತಾರಾ..? ಈ ಬಗ್ಗೆ ನಿಮ್ಮಅಭಿಪ್ರಾಯ ಕಾಮೆಂಟ್ ಮಾಡಿ..