- Advertisement -
ಕರ್ನಾಟಕ ಟಿವಿ : ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಡಿಕೆ ಶಿವಕುಮಾರ್ ಇಡಿ ಬಂಧನದಲ್ಲಿದ್ದಾರೆ. ಈ ಹಿನ್ನೆಲೆ ನಾಳೆ ರಾಜ್ಯದಲ್ಲಿ ಒಕ್ಕಲಿಗ ಸಂಘಟನೆಗಳು ನಾಳೆ ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನ ಮಾಡ್ತಿದ್ದಾರೆ.. ಈ ಹಿನ್ನೆಲೆ ಡಿಕೆ ಶಿವಕುಮಾರ್ ಟ್ವೀಟ್ ಮಾಡಿದ್ದಾರೆ. ನೀವು ನನ್ನನ್ನ ಬೆಂಬಲಿಸಿ ಪ್ರತಿಭಟನೆ ಮಾಡ್ತಿರೋದು ಸ್ವಾಗತಾರ್ಹ, ನಾನು ಯಾವುದೇ ತಪ್ಪು ಮಾಡಿಲ್ಲ, ದ್ವೇಷ ರಾಜಕಾರಣಕ್ಕೆ ನಾನು ಬಲಿಯಾಗಿದ್ದೇನೆ ಅಂತ ಡಿಕೆ ಶಿವಕುಮಾರ್ ಟ್ವೀಟ್ ಮಾಡಿದ್ದಾರೆ. ಅಲ್ಲದೆ ನಾಳಿನ ಪ್ರತಿಭಟನೆ ಶಾಂತಿಯುತವಾಗಿರಲಿ ಅಂತ ಡಿಕೆಶಿ ಕರೆ ಕೊಟ್ಟಿದ್ದಾರೆ.
- Advertisement -