Friday, October 17, 2025

Latest Posts

ರೌಡಿ ಡಿಕೆಶಿ: ಬಿಜೆಪಿ ಆಕ್ರೋಶ

- Advertisement -

www.karnatakatv.net ಮಂಡ್ಯ: ಮದ್ದೂರು ತಾಲೂಕಿನ ಕೆಎಂ ದೊಡ್ಡಿಯಲ್ಲಿ ಮಾಜಿ ಸಂಸದ ಜಿ. ಮಾದೇಗೌಡರ ಆರೋಗ್ಯ ವಿಚಾರಿಸಲು ತೆರಳಿದ್ದ ಡಿಕೆಶಿವಕುಮಾರ್. ಈ ವೇಳೆ ಸೆಲ್ಫಿ ತೆಗೆದುಕೊಳ್ಳಲು ಹೋದ ಕಾಂಗ್ರೆಸ್ ಕಾರ್ಯಕರ್ತನಿಗೆ ಕಪಾಳಕ್ಕೆ ಹೊಡೆದಿದ್ದಾರೆ. ಹೆಗಲ ಮೇಲೆ ಕೈ ಹಾಕ್ತೀಯ ಕಾಮನ್ ಸೆನ್ಸ್ ಇಲ್ವಾ ಎಂದು ಆರೋಪಿಸಿ ಕಾರ್ಯಕರ್ತನ ತಲೆ ಮೇಲೆ ಬಾರಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯ ಬಿಜೆಪಿ ಡಿಕೆಶಿಗೆ ಗತಕಾಲದಲ್ಲಿ ರೌಡಿ ಕೊತ್ವಾಲನೊಂದಿಗೆ ಇದ್ದ ಸ್ನೇಹ ನೆನಪಾಯಿತೆ? ಸಾರ್ವಜನಿಕವಾಗಿ ಒಬ್ಬ ವ್ಯಕ್ತಿಯ ಮೇಲೆ ಈ ರೀತಿ ಹಲ್ಲೆ ಮಾಡುವುದು ಅಕ್ಷಮ್ಯ ಎಂದು ಟ್ವಿಟರ್ ನಲ್ಲಿಆಕ್ರೋಶ ವ್ಯಕ್ತಪಡಿಸಿದ್ದಾರೆ. ರೌಡಿ ಡಿಕೆಶಿ, ಕೆಪಿಸಿಸಿ ಅಧ್ಯಕ್ಷನಾಗಿದ್ದುಕೊಂಡು ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ ಎಂದು ಕಿಡಿ ಕಾರಿದ್ದಾರೆ.

- Advertisement -

Latest Posts

Don't Miss