Sunday, April 20, 2025

Latest Posts

ನಿಮ್ಮ ಮನೆಯಲ್ಲಿ ಸದಾ ಲಕ್ಷ್ಮೀ ನೆಲೆಸಬೇಕಾದರೆ ಹೀಗೆ ಮಾಡಿ :

- Advertisement -

Devotional story:

ಎಲ್ಲರಿಗು ಅವರ ಮನೆಯಲ್ಲಿ ಸದಾ ಲಕ್ಷ್ಮೀ ನೆಲೆಸಬೇಕೆಂಬ ಅಸೆ ಇರುತ್ತದೆ ಲಕ್ಶ್ಮಿದೇವಿಯನ್ನು ಸಂಪತ್ತಿನ ಆದಿದೇವತೆ ಎಂದು ಪರಿಗಣಿಸುತ್ತಾರೆ. ಲಕ್ಷ್ಮೀದೇವಿ ನೆಲೆಸಿರುವ ಮನೆಯಲ್ಲಿ ಆಸ್ತಿ ಐಶ್ವೇರ್ಯಗಳಿಗೆ ತೊಂದರೆ ಉಂಟಾಗುವುದಿಲ್ಲ ಎಂಬ ನಂಬಿಕೆ ನಮಗೆ ಪ್ರಾಚೀನ ಕಾಲದಿಂದಲೂ ಬಂದಿದೆ ,ಆದರೆ ಎಲ್ಲರಿಗು ತಿಳಿದಿರುವ ಹಾಗೆ ಲಕ್ಷ್ಮೀ ಚಂಚಲೆ ಸ್ವಭಾವದವಳು ನಿಂತಲ್ಲಿ ನಿಲ್ಲುವುದಿಲ್ಲ ,ಲಕ್ಷ್ಮಿಯನ್ನು ಆರಾಧಿಸುವ ಸ್ಥಳಕ್ಕೆ ದೇವಿಯು ತಾನಾಗಿಯೇ ಹುಡುಕಿಕೊಂಡು ಬರುತ್ತಾಳೆ ಎಂಬ ನಂಬಿಕೆ ಇದೆ. ಆದಕಾರಣ ಭಕ್ತರು ಲಕ್ಷ್ಮಿಯನ್ನು ಆಕರ್ಷಿಸುವುದಕ್ಕೆ ಹಲವಾರು ಪೂಜೆ ವೃತ ಹೋಮಗಳನ್ನು ಮಾಡುತ್ತಾರೆ. ವ್ರತ ಪೂಜೆಗಳಲ್ಲದೆ ಹಿಂದೂ ಧರ್ಮದಲ್ಲಿ ಲಕ್ಷ್ಮೀದೇವಿಯನ್ನು ಸಂತೃಪ್ತಿ ಗೊಳಿಸಲು ದೇವಿಗೆ ಇಷ್ಟವಾದ ವಸ್ತುಗಳಿದೆ ,ಈ ವಸ್ತುಗಳು ಲಕ್ಷ್ಮೀದೇವಿಯನ್ನು ಪ್ರಸನ್ನ ಗೊಳಿಸುತ್ತದೆಯಂತೆ ಹಾಗು ಲಕ್ಷ್ಮೀದೇವಿಯನ್ನು ಆಕರ್ಷಿಸುವಂತೆ ಮಾಡುತ್ತದೆ ಎಂಬ ಉಲ್ಲೇಖವಿದೆ ,ಆ ಗ ಲಕ್ಷ್ಮೀದೇವಿಯು ಮನೆಗೆ ಬಂದು ನೆಲಸಿ ಸುಖ ,ಶಾಂತಿ ,ನೆಮದ್ದಿ ಸಂಪತ್ತು ಕೊಡುತ್ತಾರೆ ಎಂಬುವುದು ನಂಬಿಕೆಯಾಗಿದೆ .ಹಾಗಾದರೆ ಲಕ್ಷ್ಮಿಯನ್ನು ಆಕರ್ಷಿಸುವ ಆ ವಸ್ತುಗಳು ಯಾವುದು ಎಂದು ತಿಳಿದು ಕೊಳ್ಳೋಣ ಬನ್ನಿ …

ಲಕ್ಷ್ಮೀಯು ನಿಮ್ಮ ಮನೆಯಲ್ಲಿ ನೆಲಸಬೇಕೆಂದರೆ ಮನೆಯನ್ನು ಶುಚಿಯಾಗಿರಿಸಬೇಕು ಯಾವ ಮನೆಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವುದಿಲ್ಲವೋ ಅವರ ಮನೆಗೆ ಲಕ್ಷ್ಮೀದೇವಿ ಪ್ರವೇಶಿಸುವುದಿಲ್ಲ. ತುಳಸಿ ಗಿಡದಲ್ಲಿ ಲಕ್ಷ್ಮೀ ವಾಸವಿರುತ್ತಾಳೆ ಎಂಬ ನಂಬಿಕೆ ಇದೆ , ಆದಕಾರಣ ತುಳಸಿ ಗಿಡಕ್ಕೆ ನೀರನ್ನುಹಾಕಿ ದೂಪ ದೀಪ ಬೆಳಗಿಸಬೇಕು ಆನಂತರ ಮನಸ್ಸಿನ ಇಚ್ಛೆಯನ್ನು ಕೇಳಿಕೊಂಡರೆ ಪ್ರಾರ್ಥನೆಯನ್ನು ಆಲಿಸಿ ಲಕ್ಷ್ಮೀದೇವಿಯು
ಪ್ರಸನ್ನಳಾಗುತ್ತಾಳೆ.

ಮೊದಲನೆಯದಾಗಿ ತೆಂಗಿನಕಾಯಿ :
ತೆಂಗಿನಕಾಯಿಯ ಮೊತ್ತೊಂದು ಹೆಸರು ಶ್ರೀಫಲ ಅಂದರೆ ಲಕ್ಷ್ಮೀದೇವಿ ಎಂದು ಅರ್ಥ ಲಕ್ಷ್ಮೀದೇವಿಯನ್ನು ಮನೆಗೆ ಆಕರ್ಷಿಸಲು ಯಾವಾಗಲೂ ತೆಂಗಿನಕಾಯಿಯನ್ನು ಮನೆಯಲ್ಲಿ ಇಡಬೇಕೆಂದು ಹೇಳಲಾಗಿದೆ ಇದು ಅತ್ಯಂತ ಪವಿತ್ರವಾದ ಫಲ ಹಾಗು ಲಕ್ಷ್ಮೀದೇವಿಯನ್ನು ಬಹುಬೇಗ ಆಕರ್ಷಿಸುತ್ತದೆ . ಆದಕಾರಣ ಇದನ್ನು ಪೂಜೆಗಳಿಗೆ ಬಳಸಲಾಗುತ್ತದೆ.

ಎರಡನೆಯದು ಕವಡೆಗಳು :
ಕವಡೆಗಳು ನಮಗೆ ಸಮುದ್ರದಲ್ಲಿ ಸಿಗುತ್ತದೆ ಲಕ್ಷ್ಮೀದೇವಿಯು ಸಮುದ್ರದಲ್ಲಿ ಉದ್ಬವಿಸಿದ ಕಾರಣ ಲಕ್ಷ್ಮಿಗೆ ಕವಡೆಗಳೆಂದರೆ ಬಹಳ ಪ್ರೀತಿ ಎನ್ನಲಾಗಿದೆ ಆದಕಾರಣ ಮನೆಯಲ್ಲಿ ಕವಡೆ ಇಡುವ ಮೂಲಕ ದೇವಿಯನ್ನು ಆಕರ್ಷಿಸ ಬಹುದು ಎಂದು ಹೇಳಲಾಗಿದೆ .

ಮೂರನೆಯದ್ದು ಲಕ್ಷ್ಮೀ ಮತ್ತು ಗಣಪತಿಯರ ಮೂರ್ತಿ :
ಲಕ್ಷ್ಮಿ ಮತ್ತು ಗಣಪತಿಯರ ಮೂರ್ತಿಯನ್ನು ಒಟ್ಟಿಗೆ ಇಟ್ಟು ಪೂಜಿಸಿದರೆ ಶುಭ ಎಂದು ಪರಿಗಣಿಸುತ್ತಾರೆ ಲಕ್ಷ್ಮಿ ದೇವಿ ಹಾಗು ಗಣಪತಿಯರ ವಿಗ್ರಹವನ್ನು ಒಟ್ಟಿಗೆ ಇಟ್ಟು ಪೂಜಿಸಿದರೆ ದೇವಿಯು ತೃಪ್ತಳಾಗುತ್ತಾಳೆ. ಅದರಲ್ಲೂ ಬೆಳ್ಳಿಯ ಮೂರ್ತಿಗಳನ್ನು ಇಟ್ಟು ಪೂಜಿಸಿದರೆ ಆ ಮನೆಯಲ್ಲಿ ಸಂಪತ್ತು ಕಡಿಮೆಯಾಗುವುದಿಲ್ಲ ಎನ್ನಲಾಗಿದೆ .

“ಶ್ರೀ” ಯಂತ್ರವನ್ನು ಮನೆಯಲ್ಲಿಡಬೇಕು:
ಶ್ರೀ ಯಂತ್ರದಲ್ಲಿ ಲಕ್ಷ್ಮೀ ದೇವಿಯು ವಾಸವಾಗಿರುತ್ತಾಳೆ ಎಂಬ ನಂಬಿಕೆ ಇದೆ ಹಾಗಾಗಿ ಲಕ್ಷ್ಮೀಯು ತಮ್ಮ ಮನೆಯಲ್ಲಿ ವಾಸಿಸಬೇಕು ಧನ-ಧಾನ್ಯಗಳು ಸಮೃದ್ಧಿಯಾಗಿರಬೇಕೆಂದು ಬಯಸುವವರು ಮನೆಯಲ್ಲಿ ಶ್ರೀ ಯಂತ್ರವನ್ನು ಇಟ್ಟು ಕ್ರಮ ಬದ್ದವಾಗಿ ಪೂಜಿಸಬೇಕು ಶ್ರೀಯಂತ್ರವನ್ನು ಮನೆಯ ಪೂರ್ವ ಅಥವಾ ಈಶಾನ್ಯ ದಿಕ್ಕಿನಲ್ಲಿ ಇಡಬೇಕು ಮನೆಯಲ್ಲಿರುವ ಸದಸ್ಯರು ಈ ಚಕ್ರಕ್ಕೆ ಪೂಜಿಸಿ ಆರಾಧಿಸಿದರೆ ಉತ್ತಮ ಫಲ ಸಿಗುತ್ತದೆ .

ಕಮಲಬೀಜದ ಜಪಮಾಲೆ:
ಲಕ್ಷ್ಮೀದೇವಿಯು ಕಮಲದ ಹೂವಿನಿಂದ ಉದ್ಭವಿಸಿದ್ದಾಳೆ ಎಂಬ ಉಲ್ಲೇಖಗಳು ನಾವು ನಮ್ಮ ಪುರಾಣದಲ್ಲಿ ಕಾಣ ಬಹುದು ಆದಕಾರಣ ಲಕ್ಷ್ಮೀದೇವಿಗೆ ಕಮಲದ ಬೀಜವೆಂದರೆ ತುಂಬಾ ಪ್ರಿಯ ಈ ಕಮಲದ ಜಪಮಾಲೆಯನ್ನು ನಿಮ್ಮ ಮನೆಯಲ್ಲಿ ಇರಿಸಿದರೆ ಲಕ್ಷ್ಮೀದೇವಿಯು ನಿಮ್ಮ ಮನೆಯೆಯಲ್ಲಿ ಸ್ಥಿರವಾಗಿರುತ್ತಾಳೆ.

ಮಹಾ ವಿಷ್ಣು ಪ್ರತಿಮೆ ಅಥವಾ ಫೋಟೋ
ಯಾವ ಮನೆಯಲ್ಲಿ ಪ್ರತಿದಿನ ವಿಷ್ಣುವಿಗೆ ಪೂಜೆ ಮಾಡುತ್ತಾರೋ ಅವರ ಮನೆಯಲ್ಲಿ ಧನ ಧಾನ್ಯಗಳಿಗೆ ಎ೦ದಿಗೂ ಕೊರತೆ ಉಂಟಾಗುವುದಿಲ್ಲ ಎಂದು ಹೇಳಲಾಗುತ್ತದೆ. ಲಕ್ಷ್ಮೀ ಸಹಿತ ನಾರಾಯಣನ ಆರಾಧನೆ, ಪೂಜೆ ಮಾಡಿದವರಿಗೆ ಆರ್ಥಿಕ ತೊಂದರೆಗಳು ಎದುರಾಗುವುದಿಲ್ಲ ಮುಂಜಾನೆ ಮತ್ತು ಸಂಜೆ ಲಕ್ಷ್ಮೀನಾರಾಯಣನನ್ನು ಆರಾಧಿಸಿದರೆ ಹಣದ ಸಮಸ್ಯೆ ದೂರಾಗುತ್ತದೆ.

ಲಕ್ಷ್ಮೀದೇವಿಯ ಹೆಜ್ಜೆ ಗುರುತುಗಳು:
ಲಕ್ಷ್ಮೀದೇವಿಯ ಬೆಳ್ಳಿಯ ಹೆಜ್ಜೆಗುರುತುಗಳನ್ನು ಮನೆಯಲ್ಲಿ ಇಡುವುದರಿಂದ ದೇವಿಯನ್ನು ಸುಲಭವಾಗಿ ಆಕರ್ಷಿಸಬಹುದು ಹಣವಿಡುವ ದಿಕ್ಕಿಗೆ ಮುಖಮಾಡಿ ಹೆಜ್ಜೆ ಗುರುತುಗಳನ್ನು ಇಡುವುದರಿಂದ ಲಕ್ಷ್ಮೀದೇವಿಯು ಅಲ್ಲಿ ನೆಲೆಸುತ್ತಾಳೆ ಎಂಬ ನಂಬಿಕೆ ಇದೆ.

ನೋಡಿದ್ರಲ್ಲಾ ವೀಕ್ಷಕರೇ ಮೇಲೆ ಹೇಳಿರುವ ವಸ್ತುಗಳನ್ನು ನಿಮ್ಮ ಮನೆಯಲ್ಲಿ ಇಟ್ಟರೆ ಖಂಡಿತ ಲಕ್ಷ್ಮೀ  ದೇವಿಯ ಕೃಪೆಗೆ ಪಾತ್ರರಾಗಬಹುದು .

ಶ್ರೀಕೃಷ್ೞನ ಬಳಿ ಎಂಥೆಂಥ ಅಸ್ತ್ರಗಳಿದ್ದವು ಗೊತ್ತೇ..? ದಿವ್ಯಾಸ್ತ್ರದ ಶಕ್ತಿಯ ವಿವರಣೆ..

ಓರ್ವ ವೇಶ್ಯೆಯನ್ನು ಯಮರಾಜ ಸ್ವರ್ಗಕ್ಕೆ ಕಳುಹಿಸಿದ್ದನಂತೆ, ಯಾಕೆ ಗೊತ್ತೇ..?

ಸಾವಿರ ವರ್ಷ ಮೊಸಳೆಯ ಜೊತೆ ಗಜೇ೦ದ್ರನ ಕಾದಾಟ…!

- Advertisement -

Latest Posts

Don't Miss