Devotional tips:
ದೀಪಾವಳಿಯ ದಿನ ಎಲ್ಲರೂ ಲಕ್ಷ್ಮಿ ಪೂಜೆಯನ್ನು ಮಾಡುತ್ತಾರೆ ,ತಮ್ಮ ತಮ್ಮ ಜೀವನ ಸುಖ ಸಂತೋಷದಿಂದ ನೆಮದ್ದಿ ಕೂಡಿಬರಬೇಕೆಂದು ಆ ದಿನ ಲಕ್ಷ್ಮಿ ದೇವಿಯ ಪೂಜೆಯನ್ನು ಮಾಡುತ್ತಾರೆ ,ಆದರೆ ಆ ಒಂದು ದಿನವಲ್ಲದೆ ಹಬ್ಬದ ಹಿಂದಿನ ವಾರ ಲಕ್ಷ್ಮೀದೇವಿಯನ್ನು ಪೊಜೆಸಿದರೆ ನಿಮಗೆ ಲಕ್ಷ್ಮಿ ಕಟಾಕ್ಷೆ ಲಭಿಸುತ್ತದೆ ಎಂಬ ನಂಬಿಕೆ ಇದೆ .
ಹಾಗಾದರೆ ಯಾವರೀತಿ ಪೂಜಿಸಬೇಕು ಎಂಬುವುದನ್ನು ನೋಡೋಣ ಬನ್ನಿ ,
ಹಬ್ಬದ ಹಿಂದಿನ ದಿನ ಲಕ್ಷ್ಮಿಯನ್ನು ಪೂಜಿಸುವುದು ಹೂ ಹಣ್ಣುಗಳಿಂದ ಅಲ್ಲ ಅದರ ಬದಲಾಗಿ ಕೇವಲ ಹಾಲಿನಲ್ಲಿ ಲಕ್ಷ್ಮಿ ದೇವಿಯನ್ನು ಪೂಜಿಸಬೇಕು ,ನಿಮಗೆ ಆಶ್ಚರ್ಯವಾಗ ಬಹುದು ಆದರೆ ಈ ರೀತಿ ಪೂಜಿಸುವುದರಿಂದ ನಿಮ್ಮ ಮೇಲೆ ಲಕ್ಷ್ಮೀದೇವಿಯ ಕೃಪೆ ಖಂಡಿತವಾಗಿ ಇರುತ್ತದೆ ಎಂದು ನಂಬಲಾಗಿದೆ.
ಹಾಗಾದರೆ ದೇವಿಯನ್ನು ಹಾಲಿನಲ್ಲಿ ಹೇಗೆ ಪೂಜಿಸಬೇಕು ,ಈ ರೀತಿ ಪೂಜಿಸುವುದರಿಂದ ಅದರ ಪರಿಣಾಮಗಳು ಏನು ಎಂದು ತಿಳಿದುಕೊಳ್ಳೋಣ ಬನ್ನಿ .ಸರಿಯಾಗಿ ದೀಪಾವಳಿಯ ವಾರಕ್ಕೆ ಮೊದಲು ಒಂದು ದಿನ ಸಾಯಂಕಾಲ ಒಂದು ಲೀಟರ್ ಹಸಿ ಹಾಲನ್ನು ತೆಗೆದು ಕೊಳ್ಳಬೇಕು , ಅದರಲ್ಲಿ ಸ್ವಲ್ಪ ಜೇನುತುಪ್ಪ ಹಾಗು ಗಂಗಾಜಲವನ್ನು ಮಿಶ್ರಣ ಮಾಡಬೇಕು ನಂತರ ಈ ಮಿಶ್ರಣವನ್ನು ಎರಡು ಭಾಗಗಳಾಗಿ ವಿಂಗಡಿಸಿ ಕೊಳ್ಳಬೇಕು , ನಂತರ ಒಂದು ಭಾಗದಲ್ಲಿ ದೇವಿಗೆ ಅಭಿಷೇಕವನ್ನು ಆಚರಿಸಬೇಕು ಹಾಗು ಇನ್ನೊಂದು ಭಾಗವನ್ನು ತೆಗೆದುಕೊಂಡು ಮನೆಯ ಮುಖ್ಯ ದ್ವಾರದಲ್ಲಿ ,ಹಾಗು ಮನೆಯಲ್ಲಿ ಎಲ್ಲಕಡೆ ಚುಮುಕರಿಸಬೇಕು ,ಅದರಲ್ಲಿ ಸ್ವಲ್ಪ ಮಿಶ್ರಣವನ್ನು ಮನೆಯ ಮುಖ್ಯ ದ್ವಾರದ ಮುಂದೆ ಹಾಕಬೇಕು ,ಈ ರೀತಿ ದೀಪಾವಳಿ ಒಂದು ವಾರದ ಮುಂಚೆ ದೀಪಾವಳಿ ಬರುವವರೆಗೂ ಇದನ್ನು ಆಚರಿಸಬೇಕು , ಹೀಗೆ ಮಾಡಿದರೆ ನಿಮಗೆ ತುಂಬಾ ಒಳ್ಳೆಯ ಫಲಗಳು ದೊರೆಯುತ್ತದೆ ,ಹಾಗು ಲಕ್ಷ್ಮಿ ದೇವಿಯ ಕೃಪೆ ಖಂಡಿತ ನಿಮ್ಮ ಮೇಲೆ ಇರುತ್ತದೆ ,ಹೀಗೆ ಮಾಡುವುದರಿಂದ ಮನೆಯಲ್ಲಿ ನೆಗೆಟಿವ್ ಎನರ್ಜಿ ಹೋಗಿ ಪಾಸಿಟಿವ್ ಎನರ್ಜಿ ಬರುತ್ತದೆ ,ಮನೆಯಲ್ಲಿರುವವರಿಗೆ ಎಲ್ಲ ಶುಭ ಫಲಗಳು ದೊರೆಯುತ್ತದೆ ,ಹಾಗು ಆಸ್ತಿ ಐಶ್ವರ್ಯಗಳಿಗೆ ಎಂದಿಗೂ ಕೊರತೆ ಉಂಟಾಗುವುದಿಲ್ಲ .
ಹೆಣ್ಣು ಮಕ್ಕಳು ಮನೆಯಲ್ಲಿ ಅಪ್ಪಿ ತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ…!
ದೀಪಾವಳಿಯ ಅಮಾವಾಸ್ಯೆ ಹಾಗು ಸೂರ್ಯಗ್ರಹಣ ಒಟ್ಟಿಗೆ ಬಂದಿದೆ ಹಾಗಾದರೆ ದೀಪಾವಳಿ ಹೇಗೆ ಆಚರಿಸಬೇಕು ….?