Monday, October 20, 2025

Latest Posts

‘ಡೆಲಿವರಿ ಜಾಬ್‌’ ಮಾಡಿದ್ರೆ ಇಷ್ಟು ಹಣ ಸಿಗತ್ತಾ?

- Advertisement -

ಆನ್‌ಲೈನ್ ಫುಡ್ ಡೆಲಿವರಿ ಹಾಗೂ ಇ-ಕಾಮರ್ಸ್ ಸೇವೆಗಳ ಬಳಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸ್ವಿಗ್ಗಿ, ಫ್ಲಿಪ್‌ಕಾರ್ಟ್‌, ಜೊಮ್ಯಾಟೋ, ಜೆಪ್ಟೋ ಸೇರಿದಂತೆ ಹೆಸರಾಂತ ಇ ಕಾಮರ್ಸ್‌ ಅಪ್ಲಿಕೇಶನ್ ಮೂಲಕ ಹೆಚ್ಚಿನವರು ಫುಡ್ ಸೇರಿದಂತೆ ಪ್ರಾಡಕ್ಟ್‌ಗಳನ್ನು ಖರೀದಿ ಮಾಡ್ತಾರೆ. ಈ ಪೈಕಿ ಗ್ರಾಹಕರ ಮನೆಬಾಗಿಲಿಗೆ ತಲುಪುವ ಆರ್ಡರ್‌ಗಳ ಹಿಂದೆ ಅಡಗಿರುವ ಮಹತ್ವದ ಶ್ರಮ ಇರೋದೇ ಡೆಲಿವರಿ ಬಾಯ್‌ಗಳದ್ದು.

ಇತ್ತೀಚೆಗೆ, ಬೆಂಗಳೂರಿನ Zepto ಡೆಲಿವರಿ ಬಾಯ್ ಒಬ್ಬರು ತಮ್ಮ ವಾರದ ಆದಾಯ ಬಗ್ಗೆ ರಿವೀಲ್ ಮಾಡಿದ್ದಾರೆ. ಸ್ವತಃ ಅವರೇ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ನಾಂದಿ ಹಾಡಿದೆ. ಹೌದು ‘SideHustlePaglu’ ಎಂಬ ರೆಡ್ಡಿಟ್ ಖಾತೆಯ ಮೂಲಕ ತಮ್ಮ ವಾರದ ಸಂಪಾದನೆಯ ಸ್ಕ್ರೀನ್‌ಶಾಟ್‌ ಅನ್ನು ಹಂಚಿಕೊಂಡಿದ್ದಾರೆ.

ಅವರು ಪ್ರತಿದಿನ ಬೆಳಿಗ್ಗೆ 10 ರಿಂದ ರಾತ್ರಿ 10ರ ವರೆಗೆ ಅಂದರೆ 12 ಗಂಟೆಗಳ ಕಾಲ ಕೆಲಸ ಮಾಡುವುದಾಗಿ ತಿಳಿಸಿದ್ದಾರೆ. ಇದರಲ್ಲಿ ಅವರು ಒಂದೇ ವಾರದಲ್ಲಿ ಸುಮಾರು 387 ಆರ್ಡರ್‌ಗಳನ್ನು ತಲುಪಿಸಿ, ಇಂಧನ ಸೇರಿದಂತೆ ವಿವಿಧ ವೆಚ್ಚಗಳನ್ನು ಕಳೆಯುವ ಬಳಿಕ ₹18,906 ರೂ. ನಿವ್ವಳ ಆದಾಯ ಗಳಿಸಿದ್ದಾಗಿ ಹೇಳಿದ್ದಾರೆ.

ಮಳೆಯಾಗುತ್ತಿರುವುದರಿಂದ ಆರ್ಡರ್‌ಗಳ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳ ಕಂಡುಬಂದಿದೆ. ಇದರಿಂದಾಗಿ ಕೆಲವೇ ದಿನಗಳಲ್ಲಿ ₹21,000 ರೂಪಾಯಿ ಸಂಪಾದನೆಯಾಗಿದ್ದು, ಕೆಲ ದಿನಗಳಲ್ಲಿ ರಾತ್ರಿ 6 ರಿಂದ 11ರ ವರೆಗೆ ಕೆಲಸ ಮಾಡುವ ಮೂಲಕ ಮೂರು ದಿನಗಳಲ್ಲಿ ₹12,000 ರೂ. ಗಳಿಸಿದ್ದಾರೆ ಎಂದು ವಿವರಿಸಿದ್ದಾರೆ.

ಸದ್ಯ ಈ ಪೋಸ್ಟ್‌ ಸೋಶಿಯಲ್ ಮೀಡಿಯಾದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಹಲವರು ಆಶ್ಚರ್ಯ ವ್ಯಕ್ತಪಡಿಸಿದ್ದು, ಒಂದೇ ವಾರಕ್ಕೆ ಇಷ್ಟು ಸಂಪಾದನೆ ಸಾಧ್ಯವೇ? ಎಂಬ ಪ್ರಶ್ನೆಗಳನ್ನ ಕೇಳಿದ್ದಾರೆ. ಮತ್ತೊಬ್ಬರು ಕಂಪನಿಗಳಲ್ಲಿ 9-5 ಗಂಟೆಯವರೆಗೆ ಜಾಬ್ ಮಾಡುವಕ್ಕಿಂತ ಇದು ಹೆಚ್ಚು ಲಾಭದಾಯಕವಾಗಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss