ಮೈಸೂರಲ್ಲಿ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ವಜ್ರಮಹೋತ್ಸವ ಕಾರ್ಯಕ್ರಮ ನಡೀತು. ಈ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮೆಡಮ್, ಯು ನೊ ಕನ್ನಡ? ಅಂತಾ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಳಿದ್ರು. ಅದಕ್ಕೆ ದ್ರೌಪದಿ ಮುರ್ಮು ಕೊಟ್ಟ ಉತ್ತರ ವ್ಯಾಪಕ ಚರ್ಚೆಗೆ ಪಾತ್ರವಾಗಿದೆ. ಮೆಚ್ಚುಗೆ ಪಡೆದಿದೆ.
ಭಾರತದಲ್ಲಿ ಎಷ್ಟೋ ಭಾಷೆಗಳಿವೆ, ಸಂಸ್ಕೃತಿಗಳು, ಪರಂಪರೆಗಳಿವೆ. ಅವೆಲ್ಲವೂ ನನಗೆ ಇಷ್ಟ. ಕನ್ನಡ ನನಗೆ ಸ್ವಲ್ಪ ಸ್ವಲ್ಪ ಅರ್ಥವಾಗುತ್ತದೆ. ಮುಂದಿನ ಬಾರಿ ಬಂದಾಗ, ಇನ್ನಷ್ಟು ಕನ್ನಡ ಕಲಿಯುತ್ತೇನೆ ಎಂಬ ರಾಷ್ಟ್ರಪತಿಗಳ ಹೃದಯಸ್ಪರ್ಶಿ ಮಾತು ಜನಮನ್ನಣೆಗೆ ಪಾತ್ರವಾಗಿವೆ. ಇದನ್ನ ಸಾಕಷ್ಟು ಮಂದಿ ಶ್ಲಾಘಿಸಿದರೆ, ಇನ್ನು ಕೆಲವರು ಸಿಎಂ ನಡವಳಿಕೆಯನ್ನು ಪ್ರಶ್ನಿಸಿದ್ದಾರೆ.
ಬಿಜೆಪಿ ಶಾಸಕ ಎಸ್. ಸುರೇಶ್ ಕುಮಾರ್ ಅವರು ಈ ಕುರಿತಾಗಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸಿಎಂ ವಿರುದ್ಧ ಟೀಕೆ ಮಾಡಿದ್ದಾರೆ. ಸಿದ್ದರಾಮಯ್ಯನವರೇ, ನೀವು ರಾಷ್ಟ್ರಪತಿ ಮುರ್ಮು ಅವರಿಗೆ ‘ಯು ನೊ ಕನ್ನಡ’ ಎಂದು ಕೇಳಿದ್ದೀರಿ. ಇದೇ ಪ್ರಶ್ನೆಯನ್ನು ನೀವು ನಿಮ್ಮ ಪಕ್ಷದ ಹೈಕಮಾಂಡ್ ಸೋನಿಯಾ ಗಾಂಧಿಗೆ ಎಂದಾದರೂ ಕೇಳಿದ್ದೀರಾ? ಅಥವಾ ಕೇಳುವ ಧೈರ್ಯವಿದೆಯೆ? ಅಂತ ಪ್ರಶ್ನಿಸಿದ್ದಾರೆ
ಸೋನಿಯಾ ಗಾಂಧಿಗೆ ಈ ಪ್ರಶ್ನೆ ಕೇಳದಿದ್ದರೆ, ಅದು ನೀವು ಅವರನ್ನ ರಾಷ್ಟ್ರಪತಿಗಿಂತ ಎತ್ತರದವರೆಂದು ಪರಿಗಣಿಸುತ್ತೀರಿ ಎಂಬುದನ್ನ ತೋರಿಸುತ್ತದೆ ಎಂದು ಸುರೇಶ್ ಕುಮಾರ್ ತಮ್ಮ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಮಿಸ್ಟರ್ ಸಿದ್ದರಾಮಯ್ಯ ರಾಷ್ಟ್ರಪತಿಗಳ ಹತ್ರ ಕನ್ನಡ ಬರುತ್ತಾ ಅಂತ ಕೇಳಿದ್ರಲ್ಲಿ ತಪ್ಪೇನು ಇಲ್ಲ. ಆದ್ರೆ ಮೊನ್ನೆ ಬಿಹಾರ ರಾಜ್ಯಕ್ಕೆ ಹೋಗಿ ನೀವು ಕನ್ನಡದಲ್ಲೇ ಮಾತಾಡಿದ್ದಾ ಅಥವಾ ಮಾತಾಡೋಕೆ ಅವಕಾಶ ಸಿಕ್ಕಿಲ್ವಾ? ರಾಹುಲ್ ಗಾಂಧಿ ವೇದಿಕೆ ಅಥವಾ ಮೈಕ್ ಕೊಟ್ರಾ? ಯಾವ ಭಾಷೇಲಿ ಸಂವಹನ ಮಾಡಿದ್ದು ಅಂತ ಸುರೇಶ್ ಕುಮಾರ್ ಹಾಕಿರುವಂತಹ ಪೋಸ್ಟಿಗೆ ಕಾಮೆಂಟ್ ಬಂದಿದೆ.