Tamilnadu News: ಸಿಟಿಗಳಲ್ಲಿ ಕಾಮನ್ ಆಗಿ ಒಬ್ಬರ ಮನೆಯ ಟಿವಿ ಸೌಂಡ್ ಇನ್ನೊಬ್ಬರ ಮನೆಗೆ ಕೇಳುತ್ತದೆ. ಅದು ಸ್ವಲ್ಪ ಕಿರಿಯುಂಟು ಮಾಡಿದರೂ, ಅವರವರ ಮನೆಯಲ್ಲಿ ಅವರು ಟಿವಿ ಹಾಕಿಕೊಂಡಿದ್ದು ಅಂತಾ ಕೆಲವರು ಸುಮ್ಮನಿರುತ್ತಾರೆ. ಆದರೆ ನಿಮ್ಮ ಮನೆಯಲ್ಲಷ್ಟೇ ಸೌಂಡ್ ಕೇಳುವ ಹಾಗೆ ಟಿವಿ ಹಾಕಿಕೊಳ್ಳಿ ಎಂದು ಕೆಲವರು ಜಗಳ ಮಾಡುತ್ತಾರೆ.
ಈ ರೀತಿ ನಡೆದ ಜಗಳ, ಕೊಲೆಯಲ್ಲಿ ಅಂತ್ಯವಾಗಿದೆ. ಟಿವಿ ಸೌಂಡ್ ಕಡಿಮೆ ಮಾಡು ಎಂದು ಜಗಳ ಮಾಡಿದ್ದ ಗೋಕುಲಕೃಷ್ಣನ್ ಎಂಬಾತನ್ನು ಐವರು ಕೊಲೆ ಮಾಡಿದ್ದಾರೆ. ತಮಿಳುನಾಡಿನ ಸೆಲ್ವಪುರಂನಲ್ಲಿ ಈ ಘಟನೆ ನಡೆದಿದ್ದು, 5 ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸಂಜಯ್, ಸೂರ್ಯ, ಚಂದ್ರು, ನಾಗರಾಜನ್, ಪ್ರವೀಣ್ ಬಂಧಿತ ಆರೋಪಿಗಳಾಗಿದ್ದಾರೆ. ಮತ್ತು ಈ ಆರೋಪಿಗಳೆಲ್ಲರೂ ಯುವಕರಾಗಿದ್ದಾರೆ.
24 ವರ್ಷದ ಪ್ರವೀಣ್, ಸೆಲ್ವಪುರ ನಿವಾಸಿಗೋಕುಲಕೃಷ್ಣನ್ ಮನೆಯ ಎದುರು ವಾಸವಾಗಿದ್ದ. ಪ್ರತಿದಿನ ದೊಡ್ಡದಾಗಿ ಟಿವಿ ವಾಲ್ಯೂಮ್ ಇಟ್ಟು, ಟಿವಿ ನೋಡುತ್ತಿದ್ದ. ಇದರಿಂದ ಗೋಕುಲಕೃಷ್ಣನ್‌ಗೆ ಕಿರಿಕಿರಿಯಾಗುತ್ತಿತ್ತು. ಒಂದೆರಡು ಸಲ ಗೋಕುಲಕೃಷ್ಣನ್ ಸಮಾಧಾನವಾಗಿ ಟಿವಿ ವಾಲ್ಯೂಮ್ ಕಡಿಮೆ ಮಾಡುವಂತೆ ಹೇಳಿದ್ದಾರೆ. ಆದರೂ ಪ್ರವೀಣ್ ಮಾತು ಕೇಳದೇ, ತಮ್ಮ ಚಾಳಿ ಮುಂದುವರಿಸಿದ್ದಾರೆ.
ಬಳಿಕ ಈ ವಿಷಯಕ್ಕೆ ದೊಡ್ಡ ಜಗಳವಾಗಿದ್ದು, ಅದೇ ದ್ವೇಷವನ್ನು ಇರಿಸಿಕೊಂಡಿದ್ದ ಪ್ರವೀಣ್, ತನ್ನ ಸ್ನೇಹಿತರನ್ನು ಮನೆಗೆ ಕರೆಸಿ, ಗೋಕುಲಕೃಷ್ಣನ್ ಜೊತೆ ಜಗಳ ಮಾಡಿದ್ದಾರೆ. ಗೋಕುಲಕೃಷ್ಣನ್ ಕೂಡ ಈ ವೇಳೆ ಸಹಾಯಕ್ಕಾಗಿ ತಮ್ಮ ಸ್ನೇಹಿತರನ್ನು ಕರೆದಿದ್ದರು. ಆದರೆ ಜಗಳ ತಾರಕಕ್ಕೇರುತ್ತಿದ್ದಂತೆ, ಗೋಕುಲನ ಗೆಳೆಯರು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಬಳಿಕ ಇವರೆಲ್ಲ ಸೇರಿ ಗೋಕುಲಕೃಷ್ಣನ್ ಕೊಲೆ ಮಾಡಿದ್ದಾರೆ.
ಬಳಿಕ ಎಲ್ಲರೂ ಪರಾರಿಯಾಗಿದ್ದಾರೆ. ಸ್ಥಳೀಯರು ಪೊಲೀಸರು ರೌಂಡ್ಸ್‌ಗೆ ಬಂದಿದ್ದಾಗ, ಮೃತದೇಹವನ್ನು ಪತ್ತೆಹಚ್ಚಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಬಳಿಕ ತನಿಖೆ ಮುಂದುವರೆಸಿ, ಆರೋಪಿಗಳನ್ನು ಬಂಧಿಸಿದ್ದಾರೆ.