ಬೆಂಗಳೂರು: 2ನೇ ದಿನದ 2021-22ನೇ ಸಾಲಿನ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯನ್ನು ಇಂದು ರಾಜ್ಯಾಧ್ಯಂತ 3,444 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಯಿತು. ದ್ವಿತೀಯ ಭಾಷಾ ವಿಷೆಯವನ್ನು ಇಂದು 2ನೇ ದಿನ ಬರೆದಂತ ವಿದ್ಯಾರ್ಥಿಗಳು ಎಷ್ಟು ಎನ್ನುವ ಅಂಕಿ ಅಂಶದ ಮಾಹಿತಿ ಮುಂದಿದೆ.
ಇಂದು ನಡೆದಂತ 2ನೇ ದಿನದ ಎಸ್ ಎಸ್ ಎಲ್ ಸಿ ಪರೀಕ್ಷೆಗಾಗಿ ನೋಂದಾಯಿಸಿಕೊಂಡ ವಿದ್ಯಾರ್ಥಿಗಳು 8,68,206 ಆಗಿದೆ. ಈ ದಿನ ಪರೀಕ್ಷೆಗೆ ಹಾಜರಾದದ್ದು 8,46,143 ವಿದ್ಯಾರ್ಥಿಗಳು. ಪರೀಕ್ಷೆಗೆ ಗೈರು ಹಾಜರಾದ ವಿದ್ಯಾರ್ಥಿಗಳ ಸಂಖ್ಯೆ 22,063 ಆಗಿದೆ.
ಮೊದಲಬಾರಿಗೆ ಪರೀಕ್ಷೆಗೆ ಹಾಜರಾದ ಶಾಲಾ ವಿದ್ಯಾರ್ಥಿಗಳ ಸಂಖ್ಯೆ 8,04,923 ಆಗಿದೆ. ಪರೀಕ್ಷೆಗೆ ಹಾಜರಾದ ಒಟ್ಟು ಪುನರಾವರ್ತಿತ ಅಭ್ಯರ್ಥಿಗಳ ಸಂಖ್ಯೆ 2,5988 ಆಗಿದೆ. ಮೊದಲ ಬಾರಿಗೆ ಪರೀಕ್ಷೆಗೆ ಹಾಜರಾದ ಖಾಸಗಿ ಅಭ್ಯರ್ಥಿಗಳ ಸಂಖ್ಯೆ 38,622 ಆಗಿದೆ.




