Thursday, December 4, 2025

Latest Posts

ಜೈಲಿನಲ್ಲಿ ದಾಸ ಕಳೆದುಕೊಂಡ ದೇಹದ ತೂಕ ಎಷ್ಟು ಗೊತ್ತಾ?

- Advertisement -

ನಟ ದರ್ಶನ್ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಎರಡನೇ ಬಾರಿಗೆ ಜೈಲು ಸೇರಿ ಈಗಾಗಲೇ ಎರಡೂವರೆ ತಿಂಗಳು ಕಳೆದಿದೆ. ಆಗಸ್ಟ್ 14ರಂದು ಅವರು ಬಂಧಿತರಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರಿಸಲಾಗಿತ್ತು. ಈ ಅವಧಿಯಲ್ಲಿ ದರ್ಶನ್ ಅವರ ದೇಹದ ತೂಕ ಸುಮಾರು 13 ಕಿಲೋ ಇಳಿದಿದೆ ಎಂಬ ಮಾಹಿತಿ ವರದಿಯಾಗಿದೆ.

ಜೈಲಿನಲ್ಲಿರುವಾಗ ದರ್ಶನ್ ತಮ್ಮ ಬೇಡಿಕೆಗಳಿಗಾಗಿ ಕೋರ್ಟ್ ಮೊರೆ ಹೋಗಿದ್ದರು. ಬೆಡ್‌ಶೀಟ್ ಮತ್ತು ಬಟ್ಟೆ ಬೇಕೆಂದು ಮನವಿ ಮಾಡಿದ ಬಳಿಕ, ಕೋರ್ಟ್ ತಿಂಗಳಿಗೆ ಒಮ್ಮೆ ಈ ವಸ್ತುಗಳನ್ನು ನೀಡಲು ಅನುಮತಿ ನೀಡಿದೆ. ಈಗ ಅವರು ಹೇಗೆ ವಾಸಿಸುತ್ತಿದ್ದಾರೆ ಎಂಬ ವಿವರಗಳು ಹೊರಬಿದ್ದಿವೆ. ಸದ್ಯ ದರ್ಶನ್ ಕ್ವಾರಂಟೈನ್ ಸೆಲ್‌ನಲ್ಲಿ ಇದ್ದು, ಅವರ ಜೊತೆ ಇದೇ ಪ್ರಕರಣದ ಆರೋಪಿಗಳಾದ ಅನು, ಜಗದೀಶ್, ಪ್ರದೋಶ್, ನಾಗರಾಜ್ ಹಾಗೂ ಲಕ್ಷ್ಮಣ್ ಇದ್ದಾರೆ. ಈ ಸೆಲ್‌ನಲ್ಲಿ ಟಿವಿ ಸೌಲಭ್ಯ ಇಲ್ಲದೆ, ಭದ್ರತೆಗಾಗಿ ಎರಡು ಸಿಸಿಟಿವಿ ಕ್ಯಾಮೆರಾಗಳು ಅಳವಡಿಸಲಾಗಿದೆ.

ಪ್ರತಿ ದಿನ ಬೆಳಗ್ಗೆ 4.30 ಕ್ಕೆ ದರ್ಶನ್ ಎದ್ದು ದಿನಚರಿಯನ್ನು ಪ್ರಾರಂಭಿಸುತ್ತಾರೆ. ಬೆಳಗ್ಗೆ 6.30 ಕ್ಕೆ ಸಿಬ್ಬಂದಿ ತಪಾಸಣೆ ನಡೆಸುತ್ತಾರೆ. 7.30 ಕ್ಕೆ ಬ್ರೇಕ್‌ಫಾಸ್ಟ್ ನೀಡಲಾಗುತ್ತದೆ. 11.30 ಕ್ಕೆ ಸೆಲ್ ತೆರೆಯಲಾಗುತ್ತಿದ್ದು, ಒಂದು ಗಂಟೆ ತೆರೆಯೇ ಇರುತ್ತದೆ. ಸಂಜೆ 4.30ರಿಂದ 5.30ರವರೆಗೆ ಮತ್ತೊಮ್ಮೆ ಹೊರಬರುವ ಅವಕಾಶ ಸಿಗುತ್ತದೆ. ಜೈಲಿನ ಆಹಾರ ವ್ಯವಸ್ಥೆ ಸರಿಹೋಗದ ಕಾರಣದಿಂದ ಅವರು ದಿನಕ್ಕೆ ಒಮ್ಮೆ ಮಾತ್ರ ಊಟ ಮಾಡುತ್ತಿದ್ದಾರೆ ಎನ್ನಲಾಗಿದೆ. ಇದರ ಪರಿಣಾಮವಾಗಿ ಅವರ ದೇಹದ ತೂಕದಲ್ಲಿ ಗಣನೀಯ ಇಳಿಕೆ ಕಂಡಿದೆ.

ಭದ್ರತೆಯ ದೃಷ್ಟಿಯಿಂದ ದರ್ಶನ್ ಬ್ಯಾರಕ್‌ನಲ್ಲಿ ಕೆಲಸ ಮಾಡುವ ನಾಲ್ವರು ಸಿಬ್ಬಂದಿಗೆ ಬಾಡಿ ಕ್ಯಾಮೆರಾ ಅಳವಡಿಸಲಾಗಿದೆ. ಪ್ರತಿ ಶಿಫ್ಟ್‌ ಮುಗಿದ ಬಳಿಕ ಆ ಕ್ಯಾಮೆರಾದ ವಿಡಿಯೋವನ್ನು ಅಪ್ಲೋಡ್ ಮಾಡಬೇಕೆಂಬ ಕಠಿಣ ನಿಯಮ ಜಾರಿಯಲ್ಲಿದೆ. ಜೈಲಿನಲ್ಲಿದ್ದರೂ ಓದಿನ ಮೇಲೆ ದರ್ಶನ್ ಆಸಕ್ತಿ ತೋರಿದ್ದಾರೆ. ದಿನಪತ್ರಿಕೆ, ಶಿವನ ಕುರಿತ ಪುಸ್ತಕಗಳು ಮತ್ತು ರವಿ ಬೆಳಗೆರೆ ಬರೆದ ಅಮ್ಮ ಸಿಕ್ಕಿದ್ಲು ಕೃತಿಯನ್ನು ಓದುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss