Tuesday, April 15, 2025

Latest Posts

ಬಾಡಿಗೆ ಮನೆಯಲ್ಲಿ ಕ್ಯಾಮೆರಾ ಫಿಕ್ಸ್ ಮಾಡಿದ್ದ ಮಾಲೀಕನ ಮಗ ಸಿಕ್ಕಿ ಬಿದ್ದಿದ್ದು ಹೇಗೆ ಗೊತ್ತಾ..?

- Advertisement -

Delhi News: ಇತ್ತೀಚಿನ ದಿನಗಳಲ್ಲಿ ಯಾರ ಮೇಲೆಯೂ ನಂಬಿಕೆ ಇಡುವಂತಿಲ್ಲ. ಅಷ್ಟು ಕೆಟ್ಟುಹೋಗಿದೆ ಕಾಲ. ಯಾವುದಾದರೂ ಹೊಟೇಲ್, ಸಾರ್ವಜನಿಕ ಶೌಚಾಲಯ, ಅಥವಾ ಬಾಡಿಗೆ ಮನೆಗೆ ಹೋಗಲು ಕೂಡ, ಹತ್ತು ಬಾರಿ ಯೋಚಿಸಬೇಕಾಗಿದೆ.

ಈ ಮಾತು ಹೇಳಿದ್ದೇಕೆ ಎಂದರೆ, ದೆಹಲಿಯ ಬಾಡಿಗೆ ಮನೆಯೊಂದರಲ್ಲಿ ಇಂಥ ಘಟನೆ ನಡೆದಿದೆ. ಓರ್ವ ಯುವತಿ ಯುಪಿಎಸ್‌ಸಿ ಪರೀಕ್ಷೆಗೆ ತರಬೇತಿ ಪಡೆಯಲು ದೆಹಲಿಗೆ ಬಂದು, ಅಲ್ಲೊಂದು ಮನೆಯಲ್ಲಿ ಬಾಡಿಗೆಗೆ ಇದ್ದಳು.

ಆ ಮನೆಯ ಮಾಲೀಕನ ಮಗ ಅಂಗವಿಕಲನಾಗಿದ್ದು, ಈ ಯುವತಿ ಎಲ್ಲೆ ಹೊರಗಡೆ, ಅಥವಾ ತರಬೇತಿಗೆ ಹೋಗುವಾಗ, ಮನೆಯ ಕೀ ಅವನ ಬಳಿ ಕೊಟ್ಟು ಹೋಗುತ್ತಿದ್ದಳು. ಒಮ್ಮೆ ಆಕೆ ತನ್ನ ತವರೂರಿಗೆ ಹೋದಾಗ, ಆಕೆಯ ಲ್ಯಾಪ್‌ಟಾಪ್‌ ಮೂಲಕ, ಇನ್ನೊಬ್ಬರ ತನ್ನ ಲ್ಯಾಪ್‌ಟಾಪ್ ವಿವರವನ್ನು ಕದ್ದಿದ್ದಾರೆ. ಮತ್ತು ಅದನ್ನು ಬೇರೆಡೆ ಬಳಸುತ್ತಿದ್ದಾರೆಂದು ಗೊತ್ತಾಯಿತು.

ತಕ್ಷಣ ಲ್ಯಾಪ್‌ಟಾಪ್‌ನಲ್ಲಿ ಎಲ್ಲಾ ಖಾತೆಗಳಿಂದ ಆಕೆ ಲಾಗೌಟ್ ಆದಳು. ಬಳಿಕ, ಯಾರೋ ಆಕೆಯನ್ನು ಟ್ರ್ಯಾಪ್ ಮಾಡುತ್ತಿದ್ದಾರೆ ಎಂದು ಅರಿತ ಜಾಣೆ, ರೂಮಿಗೆ ಹೋಗಿ, ಎಲ್ಲ ಕಡೆ ಹುಡುಕಾಡಿದ್ದಾಳೆ. ಆಗ ಆಕೆಗೆ, ಮಾಲೀಕನ ಮಗ ಆಗಾಗ ಮನೆಗೆ ಬಂದು, ಬಲ್ಬ್ ರಿಪೇರಿ ಮಾಡುತ್ತಿದ್ದುದು ನೆನಪಿಗೆ ಬಂದಿದೆ.

ಸ್ಥಳೀಯ ಪೊಲೀಸರಿಗೆ ಈ ಬಗ್ಗೆ ಎಲ್ಲ ಮಾಹಿತಿ ನೀಡಿದಾಗ, ಅವರು ತನಿಖೆ ನಡೆಸಿದಾಗ,. ಬೆಡ್‌ರೂಮ್ ಮತ್ತು ಬಾತ್‌ರೂಮ್‌ನ ಬಲ್ಬ್ ಬಳಿ, ಕ್ಯಾಮೆರಾ ಫಿಕ್ಸ್ ಮಾಡಿರುವುದು ಬೆಳಕಿಗೆ ಬಂದಿದೆ. ಆ ಮಾಲೀಕನ ಮಗ, ಈ ಯುವತಿ ಇಲ್ಲದಿದ್ದಾಗ, ಮನೆಗೆ ಬಂದು, ಬಲ್ಬ್ ಓಪನ್‌ ಮಾಡಿ, ಚಿಪ್ ತೆಗೆದು, ವೀಡಿಯೋವನ್ನು ತನ್ನ ಲ್ಯಾಪ್‌ಟಾಪ್‌ನಲ್ಲಿ ಅಪ್ಲೋಡ್ ಮಾಡಿಕೊಳ್ಳುತ್ತಿದ್ದ. ಬಳಿಕ ಮತ್ತೆ ಅದನ್ನು ಅಳವಡಿಸುತ್ತಿದ್ದ.

ಇದೀಗ ಆತನ ಬಳಿ ಇದ್ದ ಎಲ್ಲ ಸಾಧನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆತನ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆತ ಅಂಗವಿಕಲನಾಗಿರುವ ಕಾರಣ, ಒಂದು ವರ್ಷವಷ್ಟೇ ಅವನ ಈ ತಪ್ಪಿಗೆ ಅವನಿಗೆ ಜೈಲು ಶಿಕ್ಷೆ ಸಿಗುತ್ತದೆ.

- Advertisement -

Latest Posts

Don't Miss