Devotional tips:
ದೇವಾಲಯದ ಗರ್ಭ ಗೃಹವನ್ನು ಸುತ್ತುವುದು ಹಿಂದೂ ಧರ್ಮದ ಒಂದು ಸಾಂಪ್ರದಾಯಿಕ ಆಚರಣೆ ಹಾಗು ಪದ್ಧತಿಯಾಗಿದೆ.ಭಕ್ತರು ಗರ್ಭ ಗುಡಿಯನ್ನು ಸುತ್ತುವುದರಿಂದ ದೇವರಿಗೆ ಶರಣಾಗಿರುತ್ತಾರೆ ಹಾಗು ಇದರ ಫಲವಾಗಿ ನಮ್ಮ ಕಷ್ಟಗಳನ್ನು ನಿವಾರಿಸು ಎನ್ನುವ ಅರ್ಥವನ್ನು ಇದು ನೀಡುತ್ತದೆ. ಪ್ರದಕ್ಷಿಣೆ ಹಾಕುವುದು ಧಾರ್ಮಿಕ ವಿಧಿ, ಗರ್ಭಗೃಹದ ಒಳಗೆ ವಿಶೇಷವಾದ ದೈವ ಶಕ್ತಿ ಇರುವ ಕಾರಣ ಸುತ್ತಲು ಧನಾತ್ಮಕ ಶಕ್ತಿಯ ಹರಿವು ಇರುತ್ತದೆ .ಆದ್ದರಿಂದ ದೇವರ ಗರ್ಭಗೃಹದ ಸುತ್ತ ಸುತ್ತುವ ಪ್ರದಕ್ಷಿಣೆಯ ಪರಿಯು ಅತ್ಯಂತ ಮಹತ್ವವನ್ನು ಪಡೆದುಕೊಂಡಿದೆ. ಗರ್ಭ ಗೃಹದಿಂದ ಹೊರಹೊಮ್ಮುವ ದೈವಿಕ ಶಕ್ತಿಯು ಮನುಷ್ಯನ ಮೇಲೆ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ.
ದೇವಸ್ಥಾನದಲ್ಲಿ ಬಲಭಾಗದಿಂದ ಪ್ರದಕ್ಷಿಣೆ ಯನ್ನು ಹಾಕಬೇಕು.ಎಕೆಂದರೆ ಗರ್ಭಗುಡಿಯಲ್ಲಿ ಇರುವ ದೇವರ ಮೂರ್ತಿಯ ಪಾಸಿಟಿವ್ ಎನರ್ಜಿಯು ಉತ್ತರದಿಂದ ದಕ್ಷಿಣ ದಿಕ್ಕಿಗೆ ಹರಿಯುತ್ತಿರುತ್ತದೆ. ಹೀಗಾಗಿ ಈ ರೀತಿಯಲ್ಲಿ ಪ್ರದಕ್ಷಿಣೆ ಹಾಕಿದಲ್ಲಿ ಧನಾತ್ಮಕ ಅಂಶಗಳು ದೇಹದೊಳಗೆ ಪ್ರವಹಿಸುವುದಲ್ಲದೆ ಮಾನಸಿಕ ನೆಮ್ಮದಿ ಪ್ರಾಪ್ತಿಯಾಗುತ್ತದೆ. ಪ್ರದಕ್ಷಿಣೆ ಮಾಡುವಾಗ ಕೆಲವೊಂದು ನಿಯಮಗಳನ್ನು ಅನುಸರಿಸಬೇಕು ಅದೇನೆಂದರೆ ,ಪ್ರದಕ್ಷಿಣೆಯನ್ನು ಪ್ರಾರಂಭಿಸಿದ ನಂತರ, ಮದ್ಯದಲ್ಲಿ ನಿಲ್ಲಬಾರದು, ಪ್ರದಕ್ಷಿಣೆ ಸಮಯದಲ್ಲಿ ಮಾತನಾಡುತ್ತಾ ಪ್ರದಕ್ಷಿಣೆ ಮಾಡಬಾರದು, ಹಾಗು ನಿಮ್ಮ ಪೂರ್ತಿ ಗಮನ ದೇವರಕಡೆ ಇರಬೇಕು .
ಸಾಮಾನ್ಯವಾಗಿ ಎಲ್ಲಾ ದೇವರುಗಳಿಗೆ ನಾವು ಒಂದೇ ರೀತಿಯಲ್ಲಿ ಪ್ರದಕ್ಷಿಣೆಯನ್ನು ಮಾಡುತ್ತೇವೆ,ಆದರೆ ಧರ್ಮಗ್ರಂಥಗಳ ಪ್ರಕಾರ ಹೀಗೆ ಮಾಡಬಾರದು ,ಹಾಗಾದರೆ ಯಾವ ಯಾವ ದೇವರಿಗೆ ಎಷ್ಟು ಪ್ರದಕ್ಷಿಣೆಯನ್ನುಹಾಕಬೇಕು ಎಂದು ತಿಳಿದು ಕೊಳ್ಳೋಣ ಬನ್ನಿ .
ಹನುಮಂತನಿಗೆ ಮೂರು ಬಾರಿ ಪ್ರದಕ್ಷಿಣೆ ಮಾಡಬೇಕು, ಸೂರ್ಯ ದೇವರಿಗೆ ಏಳು ಬಾರಿ ಮತ್ತು ಗಣಪತಿಗೆ ನಾಲ್ಕು ಬಾರಿ ಪ್ರದಕ್ಷಿಣೆ ಮಾಡಬೇಕು.ವಿಷ್ಣುವಿಗೆ ನಾಲ್ಕು ಬಾರಿ ಪ್ರಕ್ಷಿಣೆ ಹಾಕಿದರೆ, ದುರ್ಗೆಗೆ ಒಂದು ಪ್ರದಕ್ಷಿಣೆಯನ್ನು ಮಾತ್ರ ಮಾಡಬೇಕು. ಶಿವನಿಗೆ ಅರ್ಧ ಪ್ರದಕ್ಷಣೆ ಹಾಕಬೇಕು .
ಶಿವನ ದೇವಾಲಯದಲ್ಲಿ ಅರ್ಧ ಪ್ರದಕ್ಷಿಣೆ ಏಕೆ ಹಾಕಬೇಕು…? ಎಂಬ ಅನುಮಾನ ಸಾಮಾನ್ಯವಾಗಿ ಎಲ್ಲರಲ್ಲೂ ಮೂಡುತ್ತದೆ ನಿಮ್ಮ ಅನುಮಾನಕ್ಕೆ ಉತ್ತರ ಇಲ್ಲಿದೆ .
ಶಿವನ ಕೆಲವು ದೇವಸ್ಥಾನಗಳಲ್ಲಿ ಹೊರಸುತ್ತಿನಲ್ಲಿ ಪೂರ್ಣ ಪ್ರದಕ್ಷಿಣೆಯನ್ನು ಹಾಕಬಹುದಾದರೂ ,ಒಳಸುತ್ತಿನಲ್ಲಿ ಪ್ರದಕ್ಷಿಣಾಕಾರವಾಗಿ ಗೋಮುಖಿ ಯವರೆಗೆ ಮಾತ್ರ ಬಂದು ಅಲ್ಲಿಂದ ಹಿಂತಿರುಗಿ ಅಪ್ರದಕ್ಷಿಣಾಕಾರವಾಗಿ ಗೋಮುಖಿಯ ಇನ್ನೊಂದು ಬದಿಯವರೆಗೆ ಹೋಗಿ ಅಲ್ಲಿಂದ ನಿರ್ಗಮಿಸುತ್ತೇವೆ. ಗೋಮುಖಿ ಅಂದರೆ ಶಿವಲಿಂಗದ ಮೇಲೆ ಅಭಿಷೇಕ ಮಾಡಿದ ಜಲವು ಪಾಣಿಪೀಠದ ಮೇಲೆ ಬಿದ್ದು ಅಲ್ಲಿಂದ ಕೆಳಗೆ ಹರಿದುಹೋಗುವ ಮಾರ್ಗ. ಇದು ಕೂಡಾ ಶಿವಲಿಂಗದ ಒಂದು ಭಾಗವೇ ಆಗಿದೆ. ಇದಕ್ಕೆ ಕೆಲವರು “ಗೋಮುಖಿ” ಎಂದರೆ ಇನ್ನು ಕೆಲವರು “ಸೋಮಸೂತ್ರ” ಎನ್ನುತ್ತಾರೆ ,ಮತ್ತೆ ಕೆಲವರು ಹರಿನಾಳ ಎನ್ನುತ್ತಾರೆ. ಈ ಗೋಮುಖಿಯಿಂದ ಹರಿದುಹೋಗುವ ತೀರ್ಥವನ್ನು ದಾಟಬಾರದು ಎಂದು ಶಾಸ್ತ್ರ ಹೇಳುತ್ತದೆ.
ದೀಪಾವಳಿಯ ಅಮಾವಾಸ್ಯೆ ಹಾಗು ಸೂರ್ಯಗ್ರಹಣ ಒಟ್ಟಿಗೆ ಬಂದಿದೆ ಹಾಗಾದರೆ ದೀಪಾವಳಿ ಹೇಗೆ ಆಚರಿಸಬೇಕು ….?
ಹೆಣ್ಣು ಮಕ್ಕಳು ಮನೆಯಲ್ಲಿ ಅಪ್ಪಿ ತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ…!