Sunday, October 5, 2025

Latest Posts

ಕರೂರ್ ರ್ಯಾಲಿ ಕಾಲ್ತುಳಿತ ಕಾರಣ ಏನು ಗೊತ್ತಾ?

- Advertisement -

ತಮಿಳುನಾಡಿನ ಕರೂರ್ ನಲ್ಲಿ ನಟ ಹಾಗು ರಾಜಕಾರಣಿ ವಿಜಯ್ ಅವರ ಪ್ರಚಾರ ರ್ಯಾಲಿ ನಡೆದಿತ್ತು. ಸೆಪ್ಟೆಂಬರ್ 27, ಶನಿವಾರ ಸಂಜೆ ನಡೆದಂತಹ ಈ ರ್ಯಾಲಿ ಯಲ್ಲಿ ಇದ್ದಕ್ಕಿದ್ದಂತೆ ಕಾಲ್ತುಳಿತ ಸಂಭವಿಸಿದೆ. ಈ ದುರಂತದಲ್ಲಿ ಮಕ್ಕಳು, ಮಹಿಳೆಯರು ಸೇರಿ ೩೦ ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ. ಹಲವಾರು ಜನ ಗಂಭೀರ ಗಾಯಗೊಂಡಿದ್ದಾರೆ. ಹಾಗಾದ್ರೆ ಈ ಕರೂರ್ ಕಾಲ್ತುಳಿತ ಯಾಕ ಸಂಭವಿಸಿತು? ಟಿವಿಕೆ ನಾಯಕ ವಿಜಯ್ ಅವರ ರ್ಯಾಲಿಯಲ್ಲಿ ಏನು ತಪ್ಪಾಯಿತು? ಬನ್ನಿ ಏನು ಕಾರಣಗಳು ಅಂತ ಒಂದೊಂದಾಗೆ ನೋಡ್ತ ಹೋಗೋಣ.

ಕಾರಣ 1
ವಿಜಯ್ ಅವರ ಪ್ರಚಾರ ಸಭೆಗಾಗಿ ಸಾವಿರಾರು ಅಲ್ಲ ಲಕ್ಷಾಂತರ ಜನರು ಜಮಾಯಿಸಿದ್ದರು. ಸುಮಾರು 30 – 60 ಸಾವಿರ ಜನರಿಗೆ ಭಾಗವಹಿಸೋಕೆ ಮಾತ್ರ ಅವಕಾಶ ಇತ್ತು. ಆದ್ರೆ ವಿಜಯ್ ಅವರ ಈ ರ್ಯಾಲಿಯಲ್ಲಿ ಲಕ್ಷಕ್ಕೂ ಅಧಿಕ ಜನ ಭಾಗಿಯಾಗಿದ್ರು. ವಿಜಯ್ ಅವರನ್ನ ನೋಡೋಕೆ ಜನ ಮುಗಿ ಬಿದ್ದಿದ್ದರು. ಬ್ಯಾರಿಕೇಡಗಳನ್ನ ದಾಟಿ ಹೋಗೋಕೆ ಯತ್ನಿಸುತ್ತಿದ್ರು. ಹಲವಾರು ಜನರು ಮೂರ್ಛೆ ಹೋದರು. ಇದರಿಂದ ಕಾಲ್ತುಳಿತ ಸಂಭವಿಸಿದೆ. ನೂಕು ನುಗ್ಗಲಿನಲ್ಲಿ, ಜನದಟ್ಟಣೆ ಪ್ರಮುಖ ಕಾರಣವೆಂದು ಹೇಳಲಾಗುತ್ತಿದೆ.

ಕಾರಣ 2
ರ್ಯಾಲಿ ಯಲ್ಲಿ ಲಕ್ಷಾಂತರ ಜನ ಭಾಗಿಯಾಗಿದ್ದರು. ಅಲ್ಲಿ ಲಕ್ಷಾಂತರ ಜನ ಸೇರಿದ್ದರಿಂದ ಜಾಗ ಸಾಕಾಗಿಲ್ಲ. ಉಸಿರಾಟದ ಸಮಸ್ಯೆ ಹೆಚ್ಚಾಗಿದೆ. ಅತಿಯಾದ ಬಿಸಿ ಹೆಚ್ಚಾಗಿದೆ. ಶಾಖ ಹೆಚ್ಚಾಗಿದೆ. ಹೀಗಾಗಿ ಉಸಿರಾಟದ ಸಮಸ್ಯೆಯಿಂದ ಜನ ಒದ್ದಾಡಿದ್ದಾರೆ. ಸರಿಯಾದ ಉಸಿರಾಟ ಕ್ರಿಯೆ ಆಗದೆ ಮಕ್ಕಳು, ಮಹಿಳೆಯರು ಅಸುನೀಗಿದ್ದಾರೆ. ಹಲವಾರು ಜನ ಗಂಭೀರ ಗಾಯಗೊಂಡಿದ್ದಾರೆ.

ಕಾರಣ 3
ನಟ ವಿಜಯ್ ಅವರು ಮಧ್ಯಾಹ್ನ 12 ಗಂಟೆಗೆ ರ್ಯಾಲಿಗೆ ಬರಬೇಕಿತ್ತು ಆದರೆ ಸಂಜೆ 7 ಗಂಟೆಗೆ ಮಾತ್ರ ತಲುಪಿದರು. ಇದರಿಂದಾಗಿ ಜನಸಮೂಹ ಏಳು ಗಂಟೆಗಳ ಕಾಲ ಆಹಾರ ಅಥವಾ ನೀರಿಲ್ಲದೆ ಕಾಯಬೇಕಾಯಿತು. ವೀಕ್ಷಕರು ವಿಜಯ್ ಅವರ ಚುನಾವಣಾ ಯೋಜನೆ ಮತ್ತು ಸಮಯವನ್ನು ಪ್ರಶ್ನಿಸಿದ್ದಾರೆ. ಜನಸಂದಣಿ ಸಮಸ್ಯೆಗಳನ್ನು ದೂಷಿಸಿದ್ದಾರೆ.

ಕಾರಣ 4
ರ್ಯಾಲಿಗಾಗಿ ಮುಂಜಾಗ್ರತವಾಗಿ ಯಾವುದೇ ಕ್ರಮ ಕೈಗೊಳ್ಳದೇ ಇರೋದು ಮುಖ್ಯ ಕಾರಣ ಅಂತ ಹೇಳಲಾಗುತ್ತಿದೆ. ವೇದಿಕೆಯ ಸುತ್ತಲೂ ಬಫರ್ ವಲಯಗಳ ಕೊರತೆಯಿತ್ತು. ಇದರಿಂದಾಗಿ ಜನರು ವಿಜಯ್ ಅವರನ್ನು ನೋಡಲು ಹತ್ತಿರಕ್ಕೆ ಬರುತ್ತಿದ್ದರು. ಜೊತೆಗೆ ವ್ಯವಸ್ಥಿತ ಪೊಲೀಸ್ ಸಿಬ್ಬಂದಿಗಳ ಕೊರತೆ ಇತ್ತು. ನಿರ್ಬಂಧಗಳು ಜಾರಿಯಲ್ಲಿದ್ದವು, ಆದರೆ ಅವು ಅಸಮರ್ಪಕವೆಂದು ಸಾಬೀತಾಯಿತು. ಇದು ಕೂಡ ಈ ಕ್ರಷ್‌ಗೆ ಕಾರಣ ಎಂದು ಸ್ಥಳೀಯ ತಮಿಳು ವರದಿಗಳು ತಿಳಿಸಿವೆ.

ವರದಿ : ಲಾವಣ್ಯ ಅನಿಗೋಳ

 

- Advertisement -

Latest Posts

Don't Miss