Friday, November 22, 2024

Latest Posts

ಹೋಳಿ ಹಬ್ಬದ ಮಹತ್ತ್ವವೇನು ಗೊತ್ತಾ…?

- Advertisement -

State news

ಬೆಂಗಳೂರು(ಫೆ.28): ಭಾರತೀಯ ಸಂಪ್ರದಾಯಗಳಲ್ಲಿ ಹೋಳಿ ಹಬ್ಬ ಒಂದು.  ಆ ದಿನ ಬಣ್ಣ ಬಣ್ಣ ಗಳದ್ದೆ ಕಾರುಬಾರು. ಭಾರತೀಯ ಸಂಪ್ರದಾಯದಲ್ಲಿ ಹೋಳಿ ಹಬ್ಬ ಬಹಳ ಪುರಾತನವಾದದ್ದು. ಇದು ವಸಂತ ಋತುವನ್ನು ಸ್ವಾಗತಿಸುವ ವರ್ಣರಂಜಿತ ಹಬ್ಬವಾಗಿದೆ.

ಹೋಳಿ ಹಬ್ಬ ಎನ್ನುವುದು ಭಾರತದ ಸಂಸ್ಕೃತಿಯ ಸಂಕೇತ. ಈ ಹಬ್ಬವನ್ನು  ತುಂಬಾ ವಿಶಿಷ್ಟ ಹಾಗು ಅದ್ಧೂರಿಯಾಗಿ ಆಚರಣೆ ಮಾಡ್ತಾರೆ. ರಂಗು ರಂಗಿನ ಹೋಳಿ ಹಬ್ಬ, ಎಲ್ಲರ ಮನ-ಮನಸ್ಸು ಪುಳಕಿತಗೊಳಿಸುವ ಹಬ್ಬ..  ಧರ್ಮ, ದೀಪೋತ್ಸವಗಳು ಮತ್ತು ಬಣ್ಣದ ಸೀಮೆಸುಣ್ಣದ ಸಮೃದ್ಧಿ  ಎಲ್ಲವೂ  ಭಾರತದ ಹೋಳಿ ಹಬ್ಬವು ಪ್ರಪಂಚದ ಅತ್ಯಂತ ಸುಂದರವಾದ ಆಚರಣೆಗಳಲ್ಲಿ ಒಂದಾಗಿದೆ. ಒಬ್ಬರು ಇನ್ನೊಬ್ಬರಿಗೆ ಬಣ್ಣದಿಂದ ಹೋಳಿ ಹಾಕುವುದು , ಮೈಗೆಲ್ಲ ಬಣ್ಣದ  ಕಲರವ ಆ ದಿನದ ಹೋಳಿ ಹಬ್ಬಕ್ಕೆ ಕಲೆಯನ್ನು ನೀಡುತ್ತೆ.

ಹೋಳಿ ಹಬ್ಬವನ್ನು ವಸಂತ ಋತುವಿನ ವಿಷುವತ್ ಸಂಕ್ರಾಂತಿಯ ಸಮೀಪದಲ್ಲಿ ಆಚರಿಸಲಾಗುತ್ತದೆ, ಇದು ಫಾಲ್ಗುಣ ಪೂರ್ಣಿಮೆಯಂದು ಮತ್ತು ಸಾಮಾನ್ಯವಾಗಿ ಫೆಬ್ರವರಿ ಕೊನೆಯಲ್ಲಿ ಅಥವಾ ಮಾರ್ಚ್ ಆರಂಭದಲ್ಲಿ ಈ ಹಬ್ಬವನ್ನು ಆಚರಣೆ ಮಾಡಲಾಗುತ್ತೆ. ಹಬ್ಬವು ಕೆಟ್ಟದ್ದರ ಮೇಲೆ ಒಳ್ಳೆಯದ ವಿಜಯ, ವಸಂತಕಾಲದ ಆಗಮನ ಮತ್ತು ಚಳಿಗಾಲದ ಅಂತ್ಯ ಮತ್ತು ಇತರರನ್ನು ಭೇಟಿ ಮಾಡುವ ಅವಕಾಶವನ್ನು ಸೂಚಿಸುತ್ತೆ. ಜನರನ್ನು ಆಟವಾಡಲು ಮತ್ತು ನಗಿಸಲು, ನೋವನ್ನು ಮರೆಯಲು , ಮುರಿದ ಸಂಬಂಧಗಳನ್ನು ಸರಿಪಡಿಸಲು ಈ ಹಬ್ಬವನ್ನು ಆಚರಣೆ ಮಾಡಲಾಗುತ್ತೆ.

ಹೋಳಿಗೆ ಎಂಟು ದಿನಗಳ ಮೊದಲು ನರಸಿಂಹನನ್ನು ಪೂಜಿಸುವ ನಿಯಮವನ್ನು ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದ್ದು, ಇದು ಕಾಯಿಲೆಗಳನ್ನು ಗುಣಪಡಿಸುತ್ತದೆ ಎನ್ನುವ ನಂಬಿಕೆ ಇದೆ. ಈ ದಿನಗಳಲ್ಲಿ ವಿಷ್ಣು ಮತ್ತು ಶ್ರೀಕೃಷ್ಣನ ಆರಾಧನೆಯನ್ನು ಮಾಡಿದ್ರೆ, ಒಳ್ಳೆಯದಾಗುತ್ತೆ ಅಂತ ಪುರಾಣಗಳಲ್ಲಿ ಹೇಳಲಾಗುತ್ತೆ. ಹೋಲಾಷ್ಟಕ ಸಮಯದಲ್ಲಿ ವಿಷ್ಣು ಸಹಸ್ತ್ರನಾಮವನ್ನು ಪಠಿಸುವುದರಿಂದ  ಇಷ್ಟಾರ್ಥಗಳು ಈಡೇರುತ್ತವೆ. ಇಷ್ಟೇ ಅಲ್ಲದೇ, ಈ ದಿನಗಳಲ್ಲಿ ಶಿವಶಕ್ತಿಯನ್ನು ಪೂಜಿಸುವ ಪದ್ಧತಿಯೂ ಇದೆ. ಹಾಗೆಯೇ, ಈ ದಿನಗಳಲ್ಲಿ ಯಾವುದೇ ಶುಭ ಕಾರ್ಯಗಳು ನಡೆಯುವುದಿಲ್ಲ.

ಇನ್ನು ಹೋಳಿ ಹಬ್ಬದ ಪ್ರಯುಕ್ತ ಬಳಸುವ ಬಣ್ಣ ಗಳಿಗೂ ತನ್ನದೇ ಆದ ವಿಶೇಷತೆಗಳಿರೋದನ್ನು ಕಾಣಬಹುದು. ನೀಲಿ ಬಣ್ಣ ವು ಪ್ರಶಾಂತತೆಯ ಪ್ರತೀಕವಾಗಿದ್ದು,  ಆನಂದ ಮತ್ತು ಮನಸ್ಸಿಗೆ ಉಲ್ಲಾಸ ನೀಡುತ್ತೆ, ಹಸಿರು ಬಣ್ಣ ದ ಪ್ರಭಾವ ನಿಧಾನವಾದರೂ ಈ ಬಣ್ಣದಿಂದ ಶಾಂತಿ, ನೆಮ್ಮದಿ, ವಿಶ್ರಾಂತಿ ಲಭ್ಯವಾಗುತ್ತೆ. ನೇರಳೆ ಬಣ್ಣ ಮನಸ್ಸಿಗೆ ಪ್ರಶಾಂತತೆಯ ಅನುಭವ ನೀಡುತ್ತದೆ.ಹಳದಿ ಬಣ್ಣವು  ಶಕ್ತಿಶಾಲಿಯ ಸಂಕೇತ ಮತ್ತು ವ್ಯಾಮೋಹ ವರ್ಧನೆಯಾಗಿದ್ದು,  ಮನಸ್ಥಿತಿ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಕೆಂಪು ಬಣ್ಣಭಾವೋಗ್ವೇದದ ಸಂಕೇತವಾಗಿದ್ದು, ಕಿತ್ತಳೆ ಬಣ್ಣ ತೀಕ್ಷ್ಣ ಸ್ವಭಾವ ಹಾಗೂ ಸೌಹಾರ್ದ ರೂಪವನ್ನು ಪಡೆದಿದೆ. ಇದರಿಂದ ವ್ಯಾಮೋಹ ಕೂಡ ಹೆಚ್ಚಾಗುತ್ತದೆ.

- Advertisement -

Latest Posts

Don't Miss