ಮೂರು ಹೊತ್ತಿನ ಪತ್ನಿಯ ಮ್ಯಾಗಿ ಪ್ರೀತಿಗೆ ಬೇಸತ್ತು ಗಂಡ ಮಾಡಿದ್ದೇನು ಗೊತ್ತಾ.? ಈ ಸುದ್ದಿ ಓದಿ

ಮೈಸೂರು: ಒಂದೇ ಊಟ ತಿನ್ನದಕ್ಕೆ ತುಂಬಾ ಕಷ್ಟ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ. ದಿನಕ್ಕೊಂದು ಅಡುಗೆ. ಬೆಳಿಗ್ಗೆ ತಿಂಡಿಗೆ, ಮಧ್ಯಾಹ್ನ ಊಟಕ್ಕೆ ವೆರೈಟಿ ವೆರೈಟಿ ಐಟಂ ಇದ್ರೇ ಮಾತ್ರ ತಿನ್ನೋದಕ್ಕೂ ರುಚಿ. ಆದ್ರೇ.. ಇಲ್ಲೊಬ್ಬ ಪತ್ನಿ ಮಾತ್ರ ಬೆಳಿಗ್ಗೆ ತಿಡಿ, ಮಧ್ಯಾಹ್ನ ಊಟ, ರಾತ್ರಿ ಊಟಕ್ಕೂ ಮಾಡ್ತಾ ಇದ್ದದ್ದು ಮಾತ್ರ ಮ್ಯಾಗಿ.. ಈ ಪತ್ನಿಯ ಮ್ಯಾಗಿ ಪ್ರೀತಿಗೆ, ಬೇಸತ್ತ ಪತಿರಾಯ ಮಾತ್ರ, ಮಾಡಿದ್ದು ಬೇರೆಯೇ ಆಗಿತ್ತು. ಅದೇನ್ ಅಂತ ಮುಂದೆ ಓದಿ..

ಈ ಬಗ್ಗೆ ಮಾಹಿತಿ ಹಂಚಿಕೊಂಡಂತ ಮೈಸೂರು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಎಂ ರಘುನಾಥ್ ಅವರು, ಈಗಿನ ಕಾಲದ ಮಹಿಳೆಯರು, ದಂಪತಿಗಳು ರೆಡಿ ಟು ಈಟ್ ಆಹಾರದ ಮೇಲೆ ಅವಲಂಬಿತರಾಗಿದ್ದಾರೆ. ಒಬ್ಬ ಪತಿ ಬೆಳಿಗ್ಗೆ, ಮಧ್ಯಾಹ್ನ, ರಾತ್ರಿ ಊಟಕ್ಕೆ ಪತ್ನಿ ಬರೀ ಮ್ಯಾಗಿ ಮಾಡಿದ್ದರಿಂದಾಗಿ ವಿಚ್ಛೇದನ ನೀಡಿದ್ದಾನೆ ಎಂಬುದಾಗಿ ಹೇಳಿದರು. ಈ ಮೂಲಕ ತಾವು ಬಳ್ಳಾರಿಯಲ್ಲಿ ನ್ಯಾಯಾಧೀಶರಾಗಿದ್ದಾಗ ನಡೆದಂತ ಘಟನೆಯನ್ನು ನೆನಪು ಮಾಡಿಕೊಂಡರು.

ಈ ಪ್ರಕರಣ ಮ್ಯಾಗಿ ಕೇಸ್ ಎಂಬುದಾಗಿ ಹೆಸರಿಡಲಾಗಿತ್ತು. ಆ ಪತಿಯ ಪತ್ನಿ ಪ್ರಾವಿಜನ್ ಸ್ಟೋರ್ ಗೆ ಹೋದಾಗ ರೇಷನ್ ತರೋ ಬದಲು ಬರೀ ಮ್ಯಾಗಿ ತರ್ತಾ ಇದ್ದರಂತೆ. ಬೆಳಿಗ್ಗೆ ತಿಂಡಿ, ಮಧ್ಯಾಹ್ನ ಊಟ, ರಾತ್ರಿ ಊಟಕ್ಕೆ ಮ್ಯಾಗಿಯನ್ನೇ ಮಾಡ್ತಾ ಇದ್ದರಂತೆ. ಈ ಊಟಕ್ಕೆ ಬೇಸತ್ತು ತಮಗೆ ವಿಚ್ಛೇದನ ಬೇಕು ಎಂಬುದಾಗಿ ಪತಿ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣದ ವಾದ ಪ್ರತಿವಾದ ಆಲಿಸಿದ ಬಳಿಕ, ಇಬ್ಬರ ಒಪ್ಪಿಗೆ ಮೇರೆಗೆ ವಿಚ್ಛೇದನ ನೀಡಲಾಯಿತು ಎಂದು ಮೈಸೂರಿನಲ್ಲಿ ನಡೆದ ಲೋಕ್ ಅದಾಲತ್ ಸಂದರ್ಭದಲ್ಲಿ ತಿಳಿಸಿದರು.

About The Author