Friday, November 21, 2025

Latest Posts

ಅಂಗೈಯಲ್ಲಿ ‘A’ ಆಕಾರದ ರೇಖೆ ? ಅರ್ಥವೇನು ಗೊತ್ತಾ ?

- Advertisement -

ನಿಮ್ಮ ಅಂಗೈಯ್ಯಲ್ಲಿ A ಅಖಾರದ ರೇಖೆ ಇದ್ಯಾ ? ಹಾಗಿದ್ರೆ ನಿಮಗೊಂದು ಸಿಹಿ ಸುದ್ಧಿ, ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಅಂಗೈಯಲ್ಲಿ ‘A’ ಆಕಾರದ ರೇಖೆ ಅಪರೂಪದ ದೈವಿಕ ಅನುಗ್ರಹದ ಸಂಕೇತವಾಗಿದೆ. ಇದು ಅತೀವ ಅದೃಷ್ಟ, ಯಶಸ್ಸು, ಸಮೃದ್ಧಿ ಮತ್ತು ಆತ್ಮವಿಶ್ವಾಸವನ್ನು ಸೂಚಿಸುತ್ತದೆ. ಈ ಗುರುತು ಇರುವವರು ಬುದ್ಧಿವಂತರು, ಶ್ರಮಜೀವಿಗಳು, ಪ್ರಾಮಾಣಿಕರು ಮತ್ತು ತಾಳ್ಮೆಯುಳ್ಳವರಾಗಿರುತ್ತಾರೆ. ವ್ಯವಹಾರದಲ್ಲಿ ಲಾಭದಾಯಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿದ್ದು, ಎಲ್ಲಾ ಸಮಸ್ಯೆಗಳನ್ನು ಬುದ್ಧಿವಂತಿಕೆಯಿಂದ ಪರಿಹರಿಸುತ್ತಾರೆ.

ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಅಂಗೈಯಲ್ಲಿ ‘A’ ಚಿಹ್ನೆ ಇರುವುದು ಬಹಳ ಅಪರೂಪವೆಂದು ಪರಿಗಣಿಸಲಾಗಿದೆ. ಇದು ದೇವರ ವಿಶೇಷ ಅನುಗ್ರಹ ನಿಮ್ಮ ಮೇಲಿದೆ ಎಂಬುದನ್ನು ಸೂಚಿಸುತ್ತದೆ. ಇದು ಬಹಳ ಶುಭ ಸಂಕೇತವಾಗಿದ್ದು, ಆ ವ್ಯಕ್ತಿಯು ತುಂಬಾ ಅದೃಷ್ಟಶಾಲಿಯಾಗಿರುತ್ತಾನೆ ಎಂದು ಹೇಳಲಾಗುತ್ತದೆ. ಈ ಗುರುತು ಹೊಂದಿರುವ ಜನರು ಬುದ್ಧಿವಂತರು, ಕಠಿಣ ಪರಿಶ್ರಮಿಗಳು, ಪ್ರಾಮಾಣಿಕರು ಮತ್ತು ಜೀವನದಲ್ಲಿ ಎದುರಿಸುವ ಕಷ್ಟಗಳನ್ನು ತಾಳ್ಮೆಯಿಂದ ಎದುರಿಸುತ್ತಾರೆ.

ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ನಿಮ್ಮ ಅಂಗೈಯ ಮಧ್ಯದಲ್ಲಿ ‘A’ ಗುರುತು ರೂಪುಗೊಂಡಿದ್ದರೆ, ಅದು ತುಂಬಾ ಶುಭವೆಂದು ಪರಿಗಣಿಸಲಾಗುತ್ತದೆ. ಈ ಗುರುತು ನೀವು ತುಂಬಾ ಬುದ್ಧಿವಂತರು ಎಂದು ಸೂಚಿಸುತ್ತದೆ, ಈ ಗುರುತು ಹೊಂದಿರುವ ಜನರು ತಮ್ಮ ಬುದ್ಧಿವಂತಿಕೆಯಿಂದ ಎಲ್ಲಾ ರೀತಿಯ ಸಮಸ್ಯೆಗಳನ್ನು ಪರಿಹರಿಸುತ್ತಾರೆ.

ಅಂಗೈಯಲ್ಲಿ A ಚಿಹ್ನೆ ಇರುವ ವ್ಯಕ್ತಿಯೊಂದಿಗೆ ವ್ಯವಹಾರ ಮಾಡುವುದು ತುಂಬಾ ಲಾಭದಾಯಕ. ಅವರು ಯಾವುದೇ ವ್ಯವಹಾರವನ್ನು ಚೆನ್ನಾಗಿ ನಿರ್ವಹಿಸುತ್ತಾರೆ. ಜೊತೆಗೆ ತಮ್ಮ ವ್ಯಾಪಾರ ಪಾಲುದಾರರಿಗೆ ಎಂದಿಗೂ ಮೋಸ ಮಾಡುವುದಿಲ್ಲ. ಅವರು ಅತ್ಯುತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎಂದು ಹೇಳಲಾಗಿದೆ.

ವರದಿ : ಗಾಯತ್ರಿ ಗುಬ್ಬಿ

- Advertisement -

Latest Posts

Don't Miss