Dharwad News: ಧಾರವಾಡ: ಹಣ ನೀಡದೇ ಇದ್ದಿದ್ದಕ್ಕೆ ವಿದ್ಯಾರ್ಥಿಯೊಬ್ಬ ಕೋಚಿಂಗ್ ಸೆಂಟರ್ ಮಾಲೀಕನಿಗೆ ಚಾಕು ಇರಿದ ಘಟನೆ ಧಾರವಾಡದ ಸಪ್ತಾಪುರದಲ್ಲಿ ನಡೆದಿದೆ. ಕಲಬುರ್ಗಿ ಮೂಲದ ಬೀರಪ್ಪ ಎಂಬ ವಿದ್ಯಾರ್ಥಿಯೇ ಸ್ಪೂರ್ತಿ ಕರಿಯರ್ನ ಮಾಲೀಕ ರಮೇಶ ಕಾಖಂಡಕಿ ಅವರಿಗೆ ಚಾಕು ಇರಿದ ವಿದ್ಯಾರ್ಥಿ.
ಬೀರಪ್ಪ ಸೆಂಟರ್ಗೆ ಸೇರುವ ಮೊದಲೇ ರಮೇಶ ಅವರಿಗೆ 40 ಸಾವಿರ ಹಣ ನೀಡಿದ್ದ. ಆ ಪೈಕಿ ಎರಡು ಸಾವಿರ ಹಣ ನೀಡುವಂತೆ ಬೀರಪ್ಪ ರಮೇಶ ಅವರಿಗೆ ಕೇಳಿದ್ದ. ಆದರೆ, ರಮೇಶ ಅವರು ನಾಳೆ ಬೆಳಿಗ್ಗೆ ಹಣ ಕೊಡುವುದಾಗಿ ಹೇಳಿದ್ದಕ್ಕೆ ಕೋಪಗೊಂಡ ಬೀರಪ್ಪ ರಮೇಶ ಅವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ.
ಸದ್ಯ ರಮೇಶ ಪ್ರಾಣಾಪಾಯದಿಂದ ಪಾರಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತ ಪರಾರಿಯಾಗಿರುವ ಬೀರಪ್ಪನಿಗೆ ಪೊಲೀಸರು ಶೋಧ ನಡೆಸಿದ್ದಾರೆ. ಧಾರವಾಡ ಉಪನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಸಂಗಮೇಶ್ ಶೆಟ್ಟಿಗಾರ್, ಕಿತ್ತೂರು ಕರ್ನಾಟಕ ಬ್ಯೂರೋ ಮುಖ್ಯಸ್ಥರು



