ಭೂ ಹಕ್ಕು ಪತ್ರ, ದಾಖಲೆಗಾಗಿ ಕಚೇರಿಗಳ ಅಲೆದಾಟ ಹಾಗೂ ದಾಖಲೆ ಕಳೆದುಹೋಗುವ ಭೀತಿಗೆ ಕರೆದ ಭೂ-ಸುರಕ್ಷಾ ಯೋಜನೆ ಪರಿಹಾರ ನೀಡಿದೆ. ರಾಜ್ಯದಲ್ಲಿ ಈಗ 45 ಕೋಟಿ ಪುಟಗಳ ಕಂದಾಯ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಲಭ್ಯವಾಗುವಂತೆ ಡಿಜಿಟಲೀಕರಣ ಮಾಡಲಾಗಿದೆ. ಕಂದಾಯ ಇಲಾಖೆ ಪ್ರಕಾರ ಈಗಾಗಲೇ 65 ಲಕ್ಷ ಭೂ ಕಡತಗಳು ಹಾಗೂ 8.2 ಲಕ್ಷ ಹಳೆಯ ರಿಜಿಸ್ಟರ್‌ಗಳು ಡಿಜಿಟಲ್ ರೂಪಕ್ಕೆ ಬದಲಾಯಿಸಲ್ಪಟ್ಟಿವೆ. ನಾಗರಿಕರು ಈ ದಾಖಲೆಗಳನ್ನು ಸೇವಾ ಸಿಂಧು ಪೋರ್ಟಲ್ ಮೂಲಕ ಸುಲಭವಾಗಿ ವೀಕ್ಷಿಸಬಹುದು.
ಇದು ಕೇವಲ ದಾಖಲೆಗಳ ಛಾಯಾಪ್ರತಿ ಅಲ್ಲ. ಪ್ರತಿ ಫೈಲ್‌ಗೆ ಕೀವರ್ಡ್ ಹಾಗೂ ಡಿಜಿಟಲ್ ಟ್ಯಾಗ್‌ಗಳನ್ನು ನೀಡಲಾಗಿದೆ. ಈಗ 50 ವರ್ಷ ಹಳೆಯ ದಾಖಲೆ ಕೂಡ ಇಂದಿನ ದಾಖಲೆಗಳಷ್ಟೇ ಸುಲಭವಾಗಿ ಸಿಗುತ್ತದೆ ಎಂದು ಕಂದಾಯ ಇಲಾಖೆ ತಿಳಿಸಿದೆ. ಇನ್ನು ಇದರ ಮುಖ್ಯ ಉದ್ದೇಶ ವಿಳಂಬ, ದಾಖಲೆಗಳ ತಿರುಚುವಿಕೆ ಮತ್ತು ಕಳೆದುಹೋಗುವಿಕೆಯನ್ನು ತಡೆಯುವುದು ಹೊಸ ಡಿಜಿಟಲ್ ದಾಖಲೆ ಕೊಠಡಿಗಳು ಶೀಘ್ರದಲ್ಲೇ ಸಿದ್ಧವಾಗುತ್ತವೆ.
ನಾಗರಿಕರು ಸೇವಾ ಸಿಂಧು ಮೂಲಕ ಈ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ನೋಡಬಹುದು. ಇದು ಭೂ ದಾಖಲೆ ನಿರ್ವಹಣೆಯನ್ನು ಆಧುನೀಕರಿಸುವ ದೊಡ್ಡ ಹೆಜ್ಜೆಯಾಗಿದೆ ಎಂದು ಕಂದಾಯ ಇಲಾಖೆ ತಿಳಿಸಿದೆ. ಹೊಸ ಡಿಜಿಟಲ್ ದಾಖಲೆ ಕೊಠಡಿಗಳು ಬಯೋಮೆಟ್ರಿಕ್ ಪ್ರವೇಶವನ್ನು ಹೊಂದಿರುತ್ತವೆ. ಸ್ಕ್ಯಾನರ್‌ಗಳು ಮತ್ತು ಕಣ್ಗಾವಲು ಕ್ಯಾಮೆರಾಗಳು ಇರುತ್ತವೆ. ಈ ಕೊಠಡಿಗಳು ಡಿಜಿಟಲ್ ಗ್ರಂಥಾಲಯಗಳಂತೆ ಕೆಲಸ ಮಾಡುತ್ತವೆ.
ಈ ಎಲ್ಲಾ ಕ್ರಮಗಳು ಕ್ರಮೇಣ ನಗರ ಭೂ ನಿರ್ವಹಣಾ ವ್ಯವಸ್ಥೆ ಯಲ್ಲಿ ಸಂಯೋಜಿಸಲಾಗುತ್ತಿದೆ. ಇದರ ಮುಖ್ಯ ಗುರಿ ಕಂದಾಯ, ನೋಂದಣಿ, ಸಮೀಕ್ಷೆ ಮತ್ತು ನಗರ ಯೋಜನೆಗೆ ಒಂದೇ ಮೂಲದ ಮಾಹಿತಿಯನ್ನು ಸೃಷ್ಟಿಸುವುದು. ದಾಖಲೆಗಳನ್ನು ಡಿಜಿಟಲೀಕರಣಗೊಳಿಸಿ ಪರಸ್ಪರ ಜೋಡಿಸಿದರೆ ಅಕ್ರಮಗಳಿಗೆ ಅವಕಾಶ ಇರುವುದಿಲ್ಲ. ಅನೇಕ ದಾಖಲೆಗಳು ನಾಗರಿಕರಿಗೆ ಅತ್ಯಂತ ಸುಲಭವಾಗಿ ಲಭ್ಯವಾಗುತ್ತವೆ ಎಂದು ಕಟಾರಿಯಾ ಹೇಳಿದ್ದಾರೆ.
ವರದಿ : ಲಾವಣ್ಯ ಅನಿಗೋಳ