www.karnatakatv.net:ತುಮಕೂರು: ಗುಬ್ಬಿ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷಕ್ಕೆ ಪ್ರಪಂಚ ಅರಿಯದ ಹಸುಗೂಸೊಂದು ಮೃತಪಟ್ಟಿದೆ. ಮಗುವಿನ ಸಾವು ಕಂಡು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗುಬ್ಬಿ ತಾಲ್ಲೂಕಿನ ಕೋಣನಕೆರೆ ಗ್ರಾಮದ ಮಂಜಮ್ಮ ಎಂಬುವವರಿಗೆ ಸುಮಾರು 7ವರ್ಷಗಳಿಂದ ಮಕ್ಕಳಾಗಿರಲಿಲ್ಲ. ಕೊನೆಗೂ ಕಂಡ ಕಂಡ ದೇವರಿಗೆ ಮೊರೆ ಇಟ್ಟ ಬಳಿಕ ಆಕೆ ಗರ್ಭೀಣಿಯಾಗಿದ್ದರು. ತಡರಾತ್ರಿ ಹೆರಿಗೆ ನೋವು ಕಾಣಿಸಿಕೊಂಡ ಕಾರಣ ಗುಬ್ಬಿ ಸಾರ್ವಜನಿಕ ಆಸ್ಪತ್ರೆಗೆ ತಂದು ದಾಖಲಿಸಿದ್ರು. ಸಲೀಸಾಗಿ ಇಲ್ಲಿಯೇ ಹೆರಿಗೆ ಆಗುತ್ತದೆ ಎಂದು ವೈದ್ಯರು ಸಹ ಹೇಳಿದ್ದರು. ಆದರೆ ರಾತ್ರಿಯಲ್ಲಿ ಯಾವುದೇ ವೈದ್ಯರು ಗರ್ಭಿಣಿಗೆ ಚಿಕಿತ್ಸೆ ನೀಡಲೇ ಇಲ್ಲ. ಕೇವಲ ಸಿಸ್ಟರ್ ಗಳು ಮಾತ್ರ ಆಸ್ಪತ್ರೆಯಲ್ಲಿದ್ದರು. ಬೆಳಿಗ್ಗೆ 9 ಗಂಟೆಗೆ ಆಗಮಿಸಿದ ವೈದ್ಯರು ಹೆರಿಗೆಗೆಂದು ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಮಗು ಸಾವನ್ನಪ್ಪಿದೆ ಎಂದು ತಿಳಿಸಿದ್ದಾರೆ ಎಂದು ಮೃತ ಮಗುವಿನ ಪೋಷಕರು ಆರೋಪಿಸುತ್ತಿದ್ದಾರೆ.
ನಮ್ಮ ಮಗುವಿನ ಸಾವಿಗೆ ವೈದ್ಯರೇ ಕಾರಣ, ಪ್ರತಿಭಟನೆಗೆ ಕೂತು ಎರಡು ಗಂಟೆಯಾದ್ರೂ ನಮ್ಮ ಗೋಳು ಕೇಳೋರೆ ಇಲ್ಲ ಎಂದು ಪೋಷಕರು ಆರೋಪಿಸಿದ್ದಾರೆ.
ಒಟ್ನಲ್ಲಿ ಗುಬ್ಬಿ ಸಾರ್ವಜನಿಕ ಆಸ್ಪತ್ರೆ ವಿರುದ್ದ ಪದೇ ಪದೇ ದೂರು ಕೇಳಿ ಬರುತ್ತಲೇ ಇರುತ್ತದೆ. ಈ ಬಗ್ಗೆ ತನಿಖೆ ನಡೆಸಿ ನೊಂದವರಿಗೆ ನ್ಯಾಯ ಕೊಡಿಸುವ ಜವಾಬ್ದಾರಿಯನ್ನ ಜಿಲ್ಲಾ ಆರೋಗ್ಯಾಧಿಕಾರಿ ತೆಗೆದುಕೊಳ್ತಾರಾ ಎಂದು ಕಾದು ನೋಡಬೇಕು
ದರ್ಶನ್ ಕೆ.ಡಿ.ಆರ್, ಕರ್ನಾಟಕ ಟಿವಿ- ತುಮಕೂರು