ಜೇಮ್ಸ್ ಚಿತ್ರ ಥಿಯೇಟರ್ ಗಳಿಂದ ತೆರವು ಸಮಸ್ಯೆಗೆ ‘ದೊಡ್ಮನೆ’ ಎಂಟ್ರಿ : ಈ ಅನ್ಯಾಯ ಸಹಿಸೋದಿಲ್ಲವೆಂದ ನಟ ಶಿವರಾಜ್ ಕುಮಾರ್

ಬೆಂಗಳೂರು: ಜೇಮ್ಸ್ ಚಿತ್ರವನ್ನು ಚಿತ್ರಮಂದಿರಗಳಲ್ಲಿ ತೆರವು ಗೊಳಿಸುವಂತ ಸಮಸ್ಯೆ ವಿಚಾರಕ್ಕೆ, ಈಗ ದೊಡ್ಮನೆ ಕುಟುಂಬ ಎಂಟ್ರಿಕೊಟ್ಟಿದೆ. ನಟ ಶಿವರಾಜ್ ಕುಮಾರ್, ಈ ಅನ್ಯಾಯವನ್ನು ಸಹಿಸೋದಿಲ್ಲವೆಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಇಂದು ಸಿಎಂ ಬಸವರಾಜ ಬೊಮ್ಮಾಯಿಯವರನ್ನು ಭೇಟಿಯಾದ ಬಳಿಕ ಮಾತನಾಡಿದಂತ ಅವರು, ಸಿಎಂ ಭರವಸೆ ಕೊಟ್ಟಿದ್ದಾರೆ, ಅದು ನನ್ನ ತಮ್ಮನ ಸಿನಿಮಾವಾಗಿದೆ. ನನೆಗೆ ಜಾಸ್ತಿ ಕನೆಕ್ಟ್ ಇರುತ್ತೆ 100% ಯಾವುದೇ ಸಮಸ್ಯೆ ಆಗಲು ಬಿಡೋದಿಲ್ಲ. ಅಭಿಮಾನಿಗಳು ಆತಂಕ ಪಡುವ ಅಗತ್ಯವಿಲ್ಲ. ನಿಮ್ಮ ನೆಚ್ಚಿನ ನಟನ ಸಿನಿಮಾಗೆ ಸಮಸ್ಯೆ ಆಗಲ್ಲ. ಸಮಸ್ಯೆ ಆಗಲು ನಾವು ಬಿಡಲ್ಲ ಎಂಬುದಾಗಿ ಅಪ್ಪು ಅಭಿಮಾನಿಗಳಿಗೆ ಮನವಿ ಮಾಡಿದರು.

ಕನ್ನಡ ಚಿತ್ರಗಳಿಗೆ ಪಾರಭಾಷೆ ಚಿತ್ತಗಳಿಂದ ಅನ್ಯಾಯವಾದ ವಿಚಾರವಾಗಿ ಮಾತನಾಡಿದ ಅವರು, ಕನ್ನಡ ಸಿನಿಮಾಗೆ ಅನ್ಯಾಯವಾಗಬಾರದು, ಕನ್ನಡ ಸಿನಿಮಾ ಜೊತೆ ನಾವ್ ಇದ್ದೇ ಇರುತ್ತೇವೆ. ಥಿಯೇಟರ್ ಕಡಿಮೆಯಾಗಿದ್ರೆ ಕೊಡೋಣ. ಅಭಿಮಾನಿಗಳ ಹತ್ತಿರ ನಾವು ಕೇಳಿಕೊಳ್ಳೋದು ಇಷ್ಟೇನೆ‌. ಇಷ್ಟು ಒಳ್ಳೆಯ ಚಿತ್ರವನ್ನ ಹೇಗೆ ಬಿಡ್ತೀರಾ ? ಬಿಡಬಾರದು, ಒಗ್ಗಟೂ ತೊರಿಸಬೇಕು ಯಾರನ್ನು ಬ್ಲೇಮ್ ಮಾಡೋದ್ ಅಲ್ಲ ಎಂದು ಹೇಳಿದರು.

About The Author