Ramanagara News: ಯಾವ ಪುರುಷನಿಗೆ ತಾಾನು ವಿವಾಹವಾಗುವ ಹುಡುಗಿ ಚೆಂದವಿರಬೇಕು, ಫ್ಯಾಷನ್ ಮಾಡಬೇಕು ಅನ್ನೋ ಆಸೆ ಇರೋದಿಲ್ಲಾ. ಎಲ್ಲ ಪುರುಷರಿಗೂ ಈ ಆಸೆ ಇರತ್ತೆ. ಆದ್ರೆ ಇಲ್ಲೋರ್ವ ವ್ಯಕ್ತಿ ತನ್ನ ಪತ್ನಿ ನೋಡಲು ಭಾರೀ ಚಂದವಿದ್ದಾಳೆ ಅನ್ನೋ ಕಾರಣಕ್ಕೆ ಆಕೆಯ ಜೀವನವನ್ನೇ ಅಂತ್ಯಗೊಳಿಸಿದ್ದಾನೆ.
ರಾಮನಗರದ ಮಾಗಡಿಯಲ್ಲಿ ಈ ಘಟನೆ ನಡೆದಿದ್ದು, ದಿವ್ಯ ಎಂಬ ಮಹಿಳೆ ಉಮೇಶ್ ಎಂಬುವವನ ಪತ್ನಿಯಾಗಿದ್ದು, ಆಕೆ ನೋಡಲು ಸಿನಿಮಾ ಹಿರೋಯಿನ್ ರೇಂಜಿಗಿದ್ದಳು. ಆಕೆಯ ಫ್ಯಾಷನ್ ಸೆನ್ಸ್ ಕೂಡ ಸೂಪರ್ ಆಗಿದ್ದು, ಆಕೆ ಚೆಂದಗಾಣಿಸಲು ಮೇಕಪ್ ಮೊರೆ ಹೋಗುತ್ತಿದ್ದಳು. ಇದು ನಾರ್ಮಲ್ ಆಗಿದ್ದ ಆಕೆಯ ಸೌಂದರ್ಯವನ್ನು ಇನ್ನಷ್ಟು ಚೆಂದಗಾಣಿಸುತ್ತಿತ್ತು.
ಆದ್ರೆ ಪತಿ ಉಮೇಶ್‌ಗೆ ಆಕೆ ಫ್ಯಾಷನ್ ಮಾಡುವುದು ಇಷ್ಟವಿರಲಿಲ್ಲ. ದಿವ್ಯ ಲಿಪ್‌ಸ್ಟಿಕ್ ಬಳಸುವುದು ಮತ್ತು ಟ್ಯಾಟೂ ಹಾಕಿಸಿಕೊಳ್ಳುವುದು ಉಮೇಶ್‌ಗೆ ಇಷ್ಟವಿರಲಿಲ್ಲ. ಪದೇ ಪದೇ ಈ ಬಗ್ಗೆ ತಗಾದೆ ತೆಗೆದು, ಜಗಳವಾಡುತ್ತಿದ್ದ. ತನ್ನಾಸೆಯಂತೆ ಬದುಕಲು ಬಿಡದ ಗಂಡ ತನಗೆ ಬೇಡವೆಂದು, ದಿವ್ಯಾ ಕೆಲ ದಿನಗಳ ಹಿಂದೆ ಪತಿಯನ್ನು ತೊರೆದಿದ್ದಳು. ಅಲ್ಲದೇ, ಡಿವೋರ್ಸ್‌ಗೆ ಅರ್ಜಿ ಕೂಡ ಸಲ್ಲಿಸಿದ್ದಳು.
ಅಲ್ಲದೇ ಈ ಬಗ್ಗೆ ಚರ್ಚೆ ನಡೆದು, ಇನ್ನು ಮುಂದೆ ಹೀಗೆಲ್ಲ ಮಾಡುವುದಿಲ್ಲ, ನಿನ್ನಾಸೆಯಂತೆ ನೀನು ಬದುಕು, ನಾನು ಜಗಳವಾಡುವುದಿಲ್ಲವೆಂದು ಹೇಳಿ, ಆಕೆಯನ್ನು ಮನೆಗೆ ಕರೆದುಕೊಂಡು ಹೋಗಿದ್ದಾನೆ. ಬಳಿಕ ದೇವಸ್ಥಾನಕ್ಕೆ ಹೋಗೋಣ ಬಾ ಎಂದು ಊಜಗಲ್ಲು ಬೆಟ್ಟಕೆ ಕರೆದೊಯ್ದು, ಅಲ್ಲಿ ಸ್ನೇಹಿತರೊಂದಿಗೆ ಸೇರಿ, ಪತ್ನಿಯ ಕೊಲೆ ಮಾಡಿ, ಯಾರ ಕೈಗೂ ಸಿಗದಂತೆ ಹೆಣವನ್ನು ಬಿಸಾಕಿ ಬಂದಿದ್ದಾನೆ.
ಆದರೆ ಪೊಲೀಸರಿಗೆ ವಿಷಯ ಗೊತ್ತಾಗಿದ್ದು, ಇಬ್ಬರು ಆರೋಪಿಗಳನ್ನು ಈಗಾಗಲೇ ಅರೆಸ್ಟ್ ಮಾಡಿದ್ದಾರೆ. ಆದರೆ ಪತಿ ಉಮೇಶ್ ಮತ್ತೋರ್ವ ಆರೋಪಿ ಮಾತ್ರ ಎಸ್ಕೇಪ್ ಆಗಿದ್ದು, ಅವರ ಹುಡುಕಾಟವನ್ನು ಪೊಲೀಸರು ಈಗಾಗಲೇ ಮಾಡಿದ್ದಾರೆ. ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.