Saturday, July 5, 2025

Latest Posts

ಪ್ರೀತಿಯ ನಾಯಿ ತಿಥಿ ಕಾರ್ಯ ನೆರವೇರಿಸಿದ ರೈತ

- Advertisement -

ಮದ್ದೂರು : ಮನುಷ್ಯನಿಗೆ ಅತಿ ಪ್ರೀತಿ ಪಾತ್ರ ಪ್ರಾಣಿಗಳಲ್ಲಿ ನಾಯಿಯೂ ಒಂದು. ಹೀಗೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕುಂದನಕುಪ್ಪೆ ಗ್ರಾಮದಲ್ಲಿ ರಾಮಲಿಂಗಣ್ಣ ಎಂಬುವರು ಸಾಕಿದ್ದ ಕೆಂದ ಎಂಬ ನಾಯಿ ಮೃತಪಟ್ಟಿತ್ತು.. ನಾಯಿ ಸತ್ತಾಗ ಅದನ್ನ ಎಲ್ಲರಂತೆ ಬಿಸಾಡದ ರಾಮಲಿಂಗಣ್ಣ ಕೆಂದನಿಗೆ ಮನುಷ್ಯರು ಸತ್ತ್ಆಗ ಮಣ್ಣು ಮಾಡುವಂತೆಯೇ ಅಂತ್ಯ ಸಂಸ್ಕಾರ ಮಾಡಿದ್ರು. ಇಂದು ಕೆಂದನ 11 ನೇ ದಿನದ ತಿಥಿ ಹಿನ್ನೆಲೆ ಹಾಲು ತುಪ್ಪವನ್ನ ಎರೆದು ತಿಥಿ ಕಾರ್ಯ ಮಾಡಿದ್ದಾರೆ. ಇನ್ನು ನಾಯಿ ಕೆಂದನ ತಿಥಿ ಕಾರ್ಯದಲ್ಲಿ ರಾಮಲಿಂಗಣ್ಣನ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಭಾಗಿಯಾಗಿದ್ರು.. ಹತ್ತಾರು ವರ್ಷಗಳಿಂದ ಕೆಂದ ರಾಮಲಿಂಗಣ್ಣನ ಕುಟುಂಬಸ ಸದಸ್ಯನಂತೆ ಇತ್ತು.. ಸದಾ ರಾಲಿಂಗಣ್ಣನ ಜೊತೆ ಸುತ್ತಾಡ್ತಿದ್ದ ಕೆಂದ ಹೊಲ, ಗದ್ದೆ ಎಲ್ಲಾ ಕಡೆಯೂ ಓಡಾಡ್ತಿತ್ತು..

- Advertisement -

Latest Posts

Don't Miss