ಗ್ರಾಮೀಣ ಭಾಗದಲ್ಲಿ ಹಾಸು ಹೊಕ್ಕಾಗಿರುವ ಜನಪದ ಕಲೆ ಡೊಳ್ಳಿನ ಮಹತ್ವ ಸಾರುವ ಕಥಾಹೂರಣ ಡೊಳ್ಳು ಚಿತ್ರ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಬಾಚಿಕೊಂಡಿದೆ. ಅತ್ಯುತ್ತಮ ಕನ್ನಡ ಚಿತ್ರ ಪ್ರಶಸ್ತಿ ಪಡೆದಿದೆ. ಈ ಖುಷಿಯ ಸುದ್ದಿಯನ್ನ ಡೊಳ್ಳು ಚಿತ್ರದ ನಿರ್ಮಾಪಕ ಪವನ್ ಒಡೆಯರ್ ಮೊದಲ ಬಾರಿಗೆ ಕರ್ನಾಟಕ ಟಿವಿ ಜೊತೆ ಖುಷಿ ಹಂಚಿಕೊAಡಿದ್ದಾರೆ.
ಕನ್ನಡದಲ್ಲಿ ಕಮರ್ಷಿಯಲ್, ಹೊಡಿಬಡಿ, ಪ್ರೀತಿ-ಪ್ರೇಮ ಸಿನಿಮಾಗಳ ಮಧ್ಯೆ ಪ್ರಯೋಗಾತ್ಮಕ ಸಿನಿಮಾಗಳು ಪ್ರೇಕ್ಷಕರನ್ನು ಗಮನಸೆಳೆಯುತ್ತಿದೆ. ಇದರ ಮುಂದುವರೆದ ಭಾಗವಾಗಿ ತಯಾರಾಗಿರುವ ಸಿನಿಮಾ ಡೊಳ್ಳು. ಗ್ರಾಮೀಣ ಭಾಗದಲ್ಲಿ ಹಾಸು ಹೊಕ್ಕಾಗಿರುವ ಜನಪದ ಕಲೆ ಡೊಳ್ಳಿನ ಮಹತ್ವ ಸಾರುವ ಕಥಾಹೂರಣ ಡೊಳ್ಳು ಚಿತ್ರ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಬಾಚಿಕೊಂಡಿದೆ. ಅತ್ಯುತ್ತಮ ಕನ್ನಡ ಚಿತ್ರ ಪ್ರಶಸ್ತಿ ಪಡೆದಿದೆ.
ಜನಪದ ಕಲೆ ಮತ್ತು ಕಲಾವಿದರು ಗ್ರಾಮೀಣ ಭಾರತದ ತಾಯಿ ಬೇರುಗಳಿದ್ದಂತೆ. ಜನಜೀವನ ಮತ್ತು ಉನ್ನತ ಸಾಂಸ್ಕೃತಿಕ ಪರಂಪರೆ ಬಿಂಬಿಸುವ ಜನಪದ ಕಲೆಗಳು ಗ್ರಾಮೀಣ ಭಾರತದ ಜೀವಾಳ ಎಂಬ ಸಾರಂಶದೊಂದಿಗೆ ಹಳ್ಳಿಯಲ್ಲಿ ತೆರೆದುಕೊಳ್ಳುವ ಟೀಸರ್ ನಲ್ಲಿ ಡೊಳ್ಳಿನ ಮಹತ್ವದ ಬಗ್ಗೆ ತಿಳಿಸಲಾಗಿದೆ. ಕೈಲಾಸದಲ್ಲಿ ಕುಳಿತಿರುವ ಶಿವಪ್ಪನನ್ನು ಒಲಿಸಿಕೊಳ್ಳುವ ಭಕ್ತಿ ಮಾರ್ಗ ಕೂಡ ಡೊಳ್ಳು ಅಂತಾ ನಂಬಿರುವ ಹಳ್ಳಿ ಮಂದಿ ಸುತ್ತಾ, ಜನಪದ ಕಲೆ ಡೊಳ್ಳಿನ ಸುತ್ತಾ ಟೀಸರ್ ನ್ನು ಕಟ್ಟಿಕೊಡಲಾಗಿದೆ.
ಡೊಳ್ಳು ಕುಣಿತ ಕಂಟೆಂಟ್ ಹೊಂದಿರುವ ಈ ಸಿನಿಮಾ ಈಗಾಗಲೇ ಹಲವು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಅಲ್ಲದೇ ಹಲವು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿಯೂ ಪ್ರದರ್ಶನಗೊಂಡಿದೆ. ಗೋವಿಂದಾಯ ನಮಃ, ಗೂಗ್ಲಿ, ರಣ ವಿಕ್ರಮ, ಜೆಸ್ಸಿ, ನಟರಾಜ ಸರ್ವೀಸ್ ಮತ್ತು ನಟ ಸಾರ್ವಭೌಮ ಸಿನಿಮಾಗಳನ್ನು ನಿರ್ದೇಶಿಸಿರುವ ಪವನ್ ಒಡೆಯರ್, ತಮ್ಮದೇ ಒಡೆಯರ್ ಮೂವಿಸ್’ ನಿರ್ಮಾಣ ಸಂಸ್ಥೆಯಡಿ ಡೊಳ್ಳು ಚಿತ್ರ ನಿರ್ಮಾಣ ಮಾಡಿದ್ದಾರೆ.
ಪವನ್ ಒಡೆಯರ್
ಡೊಳ್ಳು ಸಿನಿಮಾಗೆ ರಾಷ್ಟ್ರೀಯ ಪ್ರಶಸ್ತಿ ಸಿಕ್ಕಿರೋದು ಬಹಳ ಖುಷಿಯಿದೆ. ಯಾವುದೇ ನಿರೀಕ್ಷೆ ಇಲ್ಲದೇ ಶುರುಮಾಡಿದಂತ ಸಿನಿಮಾ ಇದು. ಯಾಕಂದ್ರೆ ಕರ್ನಾಟಕದ ಜನ, ಕಲೆ, ಸಂಸ್ಕೃತಿ ನನಗೆ ತುಂಬಾ ಕೊಟ್ಟಿದೆ. ಬೆಂಗಳೂರಿಗೆ ನಾನು ಬಂದಾಗ ಜೇಬಲ್ಲಿ ೧೦೦ರೂ ಇಟ್ಕೊಂಡ್ ಬಂದಿದ್ದೆ..ಆಗಿನಿAದಲೂ ಹಿಡಿದೂ ಇಲ್ಲಿಯವರೆಗೂ ಈ ಕರ್ನಾಟಕದ ಜನರು ನನಗೆ ದೊಡ್ಡ ಹೆಸರು, ಜೀವನ ಕೊಟ್ಟಿದೆ. ಹೀಗಾಗಿ ನಮ್ಮ ಚಿತ್ರರಂಗಕ್ಕೆ, ನಮ್ಮ ಕನ್ನಡ ಸಂಸ್ಕೃತಿಗೆ ಏನಾದ್ರೂ ನಾನು ವಾಪಸ್ ಮಾಡ್ಬೇಕು ಅಂದಾಗ ನನಗೆ ಹೊಳೆದಿದ್ದೇ “ಡೊಳ್ಳು”. ಮಹಾನ್ ಹುತಾತ್ಮ ಎಂಬ ಕಿರುಚಿತ್ರ ನಿರ್ದೇಶಿಸಿದ್ದ ಸಾಗರ್ ಪುರಾಣಿಕ್ ಅವರ ನರೇಶನ್‌ಗೆ ನಾನು ತುಂಬಾನೆ ಇಂಪ್ರೆಸ್ ಆಗಿದ್ದೆ. ಹೀಗಾಗಿ ಡೊಳ್ಳು ಸಿನಿಮಾನ ಸಾಗರ್ ಅವರೇ ನಿರ್ದೇಶನ ಮಾಡೋದಾಗಿ ನಾನು ಬಯಸಿದೆ. ಅಲ್ಲಿಂದ ಶುರುವಾಗಿದ್ದೇ ಡೊಳ್ಳು ಅದ್ಭುತ ಜರ್ನಿ. ವಿಶೇಷ ಅಂದ್ರೆ ಈ ಸಿನಿಮಾಗೆ ನನ್ನ ಸ್ನೇಹಿತರು, ನನ್ನ ಪತ್ನಿಯ ಸ್ನೇಹಿತರು ನಮ್ಮ ಜೊತೆ ಕೈ ಜೋಡಿಸಿ ಒಡೆಯರ್ ಮೂವೀಸ್ ಸಂಸ್ಥೆ ಮಾಡಿದ್ವಿ. ಈ ಸಂಸ್ಥೆಯ ಮೊದಲ ನಿರ್ಮಾಣದ ಸಿನಿಮಾ ಡೊಳ್ಳು. ಈ ಎಲ್ಲಾ ಶ್ರಮಕ್ಕೂ ಈಗ ರಾಷ್ಟç ಪ್ರಶಸ್ತಿ ಲಭಿಸಿರೋದಕ್ಕೂ ಸಾರ್ಥಕತೆ ಎನಿಸುತ್ತಿದೆ ಜೊತೆಗೆ ಮತ್ತಷ್ಟು ಜವಾಬ್ದಾರಿ ಹೆಚ್ಚಿದೆ ಎಂದಿದ್ದಾರೆ ನಿರ್ಮಾಪಕ ಪವನ್ ಒಡೆಯರ್.
ಕರ್ನಾಟಕ ಟಿವಿ, ಬೆಂಗಳೂರು