www.karnatakatv.net: ಯಳಂದೂರು ತಾಲೂಕಿನ ಬನ್ನಿಸಾರಿಗೆ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ತಟ್ಟೆ ಲೋಟ ಪುಸ್ತಕ ಪೆನ್ ಮುಂತಾದ ವಸ್ತುಗಳ ವಿತರಣೆ ಮಾಡಿದರು.
ಬೆಂಗಳೂರು ಮೂಲದ ಉದ್ಯಮಿ ಸಂದೇಶ್ ಮತ್ತು ಬಾಬುರವರಿಂದ ಶಾಲೆಯ ಮಕ್ಕಳಿಗೆ ದಾನ ಮಾಡಲಾಯಿತು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬನ್ನಿ ಸಾರಿಗೆಯಲ್ಲಿ ಇಂದು ಬೆಂಗಳೂರಿನ ಉದ್ಯಮಿಗಳಾದ ಸಂದೇಶ್ ಅವರು ಶಾಲಾ ಮಕ್ಕಳಿಗೆ 45000 ಮೌಲ್ಯದ ತಟ್ಟೆ ಮತ್ತು ಲೋಟಗಳನ್ನು ನೀಡಿದರು. ನ್ಯಾಷನಲ್ ಸ್ಕೂಲ್ ನ 1982-85ನೇ ಬ್ಯಾಚಿನ ಹಳೆಯ ವಿದ್ಯಾರ್ಥಿಗಳ ಸಂಘದ ಅದ್ಯಕ್ಷರಾದ ಬಾಬುರವರು, ನೋಟ್ ಬುಕ್, ಜಾಮಿಟ್ರಿ, ಪೆನ್ಗಳು, ಪೆನ್ಸಿಲ್, ಕಾಪಿರೈಟ್ ಬುಕ್ ಗಳನ್ನು 135 ವಿದ್ಯಾರ್ಥಿಗಳಿಗೆ ವಿತರಿಸಿದರು.
ಇಂಡಿಯನ್ ಗ್ಯಾಸ್ ಮಾಲಿಕರಾದ ಸಂಜಯ್ ಅವರು ಮಕ್ಕಳಿಗೆ ಬಿಸಿನೀರು ನೀಡುವ ಸಲುವಾಗಿ ಗ್ಯಾಸ್ ಮತ್ತು ಸಿಲಿಂಡರ್ ಕೊಡುಗೆಯಾಗಿ ನೀಡಿದರು, ಶ್ರೀಮತಿ ಶೋಭ ಕೇಶವಮೂರ್ತಿ ಅವರು 20000 ಮೌಲ್ಯದ ಬೀರುವನ್ನು ನೀಡಿದರು. ಬಿ ಇ ಒ ತಿರುಮಲಾಚಾರಿ ರವರು ಮಾತನಾಡುತ್ತಾ ನಮ್ಮ ಸರ್ಕಾರಿ ಶಾಲೆಗಳು ಉತ್ತಮ ರೀತಿಯಲ್ಲಿ ಕೆಲಸ ಮಾಡತ್ತಿವೆ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುತ್ತಿವೆ ಇಂತಹ ಸಂಧಭ9ದಲ್ಲಿ ದಾನಿಗಳು ಈ ರೀತಿ ಕೊಡುಗೆ ನೀಡುತ್ತಿರುವುದು ಸಂತಸ ತಂದಿದೆ. ಈ ರೀತಿ ಸರ್ಕಾರಿ ಶಾಲೆಗಳ ಸಬಲೀಕರಣ ಮಾಡುತ್ತಿರುವುದು ಉತ್ತಮ ಕೆಲಸ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು
ಈ ಸಂದoರ್ಭದಲ್ಲಿ ಬಿ.ಇ.ಓ ತಿರುಮಲಚಾರಿ , ಬಿ.ಆರ್ ಸಿ ಮಹೇಶ್ ರವರು, ಸಿ. ಆರ್ ಪಿ ಪ್ರಕಾಶ್, ಗ್ರಾ.ಪಂ ಅಧ್ಯಕ್ಷೆ ಅಶ್ವಿನಿ ಶ್ರೀನಿವಾಸ, ಸದಸ್ಯರಾದ ಉಮೇಶ್, ಗಾಯತ್ರಿ , ಎಸ್.ಡಿ.ಎಂ ಸಿ ಅದ್ಯಕ್ಷರಾದ ಗೋವಿಂದನಾಯಕ ಸದಸ್ಯರಾದ ನಾಗೇಂದ್ರ, ಹರೀಶ್, ಮು.ಶಿ ಜಯಮ್ಮ, ಶಿಕ್ಷಕರಾದ ಅಮ್ಮನಪುರ ಮಹೇಶ್, ಸೌಮ್ಯ, ವಿಜಯ, ಉಷಾ ಮತ್ತು ಗ್ರಾಮಸ್ಥರು ಮಕ್ಕಳು ಹಾಜರಿದ್ದರು.
ಪ್ರಸಾದ್, ಕರ್ನಾಟಕ ಟಿವಿ- ಚಾಮರಾಜನಗರ