www.karnatakatvಮಹಾಮಾರಿ ಕೊರೊನಾ ಎರಡನೇ ಅಲೆಯು ಕಡಿಮೆ ಯಾಗುತ್ತಿದ್ದಂತೆ ಎಲ್ಲೆಡೆ ಮೂರನೇ ಅಲೆಯ ಭೀತಿ ಶುರುವಾಗಿಯ್ತು, ಆದರೆ ಈಗ ಅದರ ಭಯವಿಲ್ಲ ಕ್ರಮೇಣವಾಗಿ ಕಡಿಮೆಯಾಗುತ್ತಿದೆ.
ಹೌದು, ಕೊರೊನಾ ಎರಡನೇ ಅಲೆಯು ಡಿಸೆಂಬರ್ ಅಂತ್ಯದಲ್ಲಿ ಸಂಪೂರ್ಣ ಕೊನೆಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಮೂರನೇ ಅಲೆಯು ಸೆಪ್ಟಂಬರ್ ಮತ್ತು ಅಕ್ಟೋಬರ್ ತಿಂಗಳಿನಲ್ಲಿ ಮೂರನೇ ಅಲೆ ಭಾರತದಲ್ಲಿ ಶುರುವಾಗುವ ಸಾಧ್ಯತೆಗಳಿವೆ ಎಂದು ಅನೇಕ ತಜ್ಞರು ಹೇಳೀದ್ದರು. ಸಾಕಷ್ಟು ಮುಂಜಾಗ್ರತಾ ಕ್ರಮಗಳ ಬಗ್ಗೆ ಗಮನವಹಿಸುವಂತೆ ಸಲಹೆಗಳನ್ನು ನೀಡಲಾಗಿತ್ತು ಆದರೆ ಈಗ ಅದು ಬದಲಾಗಿದೆ ಏಕೆಂದರೆ, ಸದ್ಯಕ್ಕೆ ಮೂರನೇ ಅಲೆಯ ಭಯವಿಲ್ಲ.
ಕೊರೊನಾ ಮೂರನೇ ಅಲೆಯು ಮಕ್ಕಳ ಮೇಲೆ ತುಂಬಾ ಪರಿಣಾಮವನ್ನು ಬೀರಲಿದೆ ಎಂದು ಹೇಳಲಾಗಿತ್ತು, ಆದರೆ ಈಗ ಕೊರೊನಾ ಸೋಂಕಿಗೆ ಲಸಿಕೆ ದೊರೆತಿದ್ದು, ಆತಂಕವನ್ನು ದೂರಮಾಡಿದೆ. ಮೂರನೇ ಅಲೆಯು ಅಷ್ಟೋಂದು ಪರಿಣಾಮಕಾರಿ ಅಲ್ಲ, ಲಸಿಕೆಯು ಎಲ್ಲರಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿದೆ ಆದಕಾರಣ ತಜ್ಞರು ಮೂರನೇ ಅಲೆಯ ಬಗ್ಗೆ ಭಯಬೇಡ ಅಂದಿದ್ದಾರೆ. ಭಾರತದಲ್ಲಿ ಲಸಿಕೆಯು ಪೂರ್ಣಪ್ರಮಾಣದಲ್ಲಿ ಕೆಲಸವನ್ನು ಮಾಡುತ್ತಿದೆ ಎಂದು ತಜ್ಞರು ಹೇಳಿದ್ದಾರೆ.
ಆದರೆ ಮೂರನೇ ಅಲೆಯು ಬರುವುದಿಲ್ಲ ಎಂದು ನಿರ್ಲಕ್ಷ್ಯ ಮಾಡುವುದು ಬೇಡ, ಎರಡನೇ ಅಲೆಯು ಬಂದಹಾಗೇ ಮೂರನೇ ಅಲೆಯು ಯಾವಾಗ ಬರುವುದೊ ತಿಳಿಯುವದಿಲ್ಲ ಆದಕಾರಣ ಕೊರೊನಾ ನಿಯಮಗಳನ್ನು ಯಾರು ಮೀರುವಂತಿಲ್ಲ ಎಂದು ತಜ್ಞರು ತಿಳಿಸಿದ್ದಾರೆ.