Friday, November 22, 2024

Latest Posts

ನಿಮಗೆ ಈ ಸಮಸ್ಯೆ ಕಾಡುತ್ತಿದ್ದರೆ ಬಾದಾಮಿಯನ್ನು ತಿಂದರೆ ಅಪಾಯ ತಪ್ಪಿದಲ್ಲ…..!

- Advertisement -

Health tips:

ಬಾದಾಮಿ ತಿನ್ನುವುದರಿಂದ ಆರೋಗ್ಯಕ್ಕೆ ತುಂಬಾ ಪ್ರಯೋಜನಗಲಳಿದೆ ಎಂದು ಹೇಳಬಹುದು, ಆದರೆ ಕೆಲವೊಂದು ಸಮಸ್ಯೆ ಇರುವವರು ಬಾದಾಮಿ ಸೇವಿಸಿದರೆ ಖಂಡಿತ ನಿಮ್ಮ ಶರೀರಕ್ಕೆ ಹಾನಿ ಉಂಟಾಗುತ್ತದೆ ,ಇದು ನಿಮ್ಮ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸಬಹುದು, ಹಾಗಾದರೆ ಯಾವ ಸಮಸ್ಯೆ ಇರುವವರು ಬಾದಾಮಿಯನ್ನು ಸೇವಿಸ ಬಾರದು ಎಂದು ತಿಳಿದು ಕೊಳ್ಳೋಣ ಬನ್ನಿ .

ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆ ಇರುವವರು ,ಬಾದಾಮಿಯನ್ನು ತಿನ್ನದಿದ್ದರೆ ಒಳ್ಳೆಯದು ಎಂದು ಹೇಳಬಹುದು. ಇದರಲ್ಲಿ ಸಾಕಷ್ಟು ಫೈಬರ್ ಇರುವುದರಿಂದ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಇದು ಅಸಿಡಿಟಿ ಮತ್ತು ಮಲಬದ್ಧತೆಗೆ ಕಾರಣವಾಗಬಹುದು. ನಾರಿನಂಶವಿರುವ ಬಾದಾಮಿಯನ್ನು ಸೇವಿಸುವುದರಿಂದ ಮೆಗ್ನೀಸಿಯಮ್, ಕಬ್ಬಿಣ, ಕ್ಯಾಲ್ಸಿಯಂ ದೇಹದಲ್ಲಿ ಹೀರಿಕೊಳ್ಳುವುದನ್ನು ತಡೆಯುತ್ತದೆ. ಇದು ನಿಮಗೆ ಸಂಪೂರ್ಣ ಪೋಷಣೆಯನ್ನು ನೀಡುವುದಿಲ್ಲ.

ಪಿತ್ತಕೋಶದ ಸಮಸ್ಯೆಯಿದ್ದರೆ ಬಾದಾಮಿ ಸೇವನೆಯು ನಿಮಗೆ ಹಾನಿ ಮಾಡುತ್ತದೆ ಹಾಗು ಅಧಿಕವಾಗಿ ಔಷಧಿಗಳನ್ನು ಸೇವಿಸುವ ರಕ್ತದೊತ್ತಡ ರೋಗಿಗಳಿಗೆ ಬಾದಾಮಿ ಸೇವನೆಯು ಹಾನಿಕಾರಕವಾಗಿದೆ. ಅಧಿಕ ರಕ್ತದೊತ್ತಡದ ಸಮಸ್ಯೆಯಲ್ಲಿ ಬಾದಾಮಿ ಸೇವನೆಯನ್ನು ತಪ್ಪಿಸಿ.

ಬಾದಾಮಿಯಲ್ಲಿ ಹೆಚ್ಚಿನ ಕ್ಯಾಲೋರಿ ಮತ್ತು ಕೊಬ್ಬಿನಂಶವಿದೆ. ಇದು ತೂಕ ಹೆಚ್ಚಾಗಲು ಕಾರಣವಾಗಬಹುದು ನೀವು ತೂಕ ಇಳಿಸಿಕೊಳ್ಳುವ ಯೋಚನೆಯಲ್ಲಿದ್ದರೆ ಬಾದಾಮಿಯನ್ನು ಸೇವಿಸಬೇಡಿ. ಬುದ್ಧಿಮಾಂದ್ಯತೆ, ಪಾರ್ಕಿನ್ಸನ್ ಕಾಯಿಲೆ ಮತ್ತು ಕಡಿಮೆ ಚಲನಶೀಲತೆಯಿಂದ ಬಳಲುತ್ತಿರುವ ಜನರಿಗೆ ಇದು ಹೆಚ್ಚು ಅಪಾಯಕಾರಿ.

ಕೆಲವರಿಗೆ ನಟ್ಸ್​ಗಳ ಅಲರ್ಜಿ ಇರುತ್ತದೆ ಅಂಥಹವರು ಬಾದಾಮಿಯನ್ನು ಸೇವನೆ ಮಾಡಬಾರದು ಬಾದಾಮಿ ಸೇವನೆ ಮಾಡಿದಲ್ಲಿ ಕೆಲವರಿಗೆ ಉಸಿರಾಟದ ಸಮಸ್ಯೆ, ಅನಾಫಿಲ್ಯಾಕ್ಸಿಸ್ಗೆ ಕಾರಣವಾಗಬಹುದು ಇದು ಜೀವಕ್ಕೆ ಅಪಾಯಕಾರಿ.

ಬಾದಾಮಿಯಲ್ಲಿ ಅಧಿಕ ಪ್ರಮಾಣದ ವಿಟಮಿನ್ ಇ ಇರುತ್ತದೆ 28 ಗ್ರಾಂ ಬಾದಾಮಿಯಲ್ಲಿ 7.4 ಮಿಲಿಗ್ರಾಂ ವಿಟಮಿನ್ ಇ ಅಂಶವಿರುತ್ತದೆ. ಹಾಗಾಗಿ ವಿಟಮಿನ್ ಇ ಮಾತ್ರೆಗಳನ್ನು ತೆಗೆದುಕೊಳ್ಳುವವರು ಬಾದಾಮಿಯನ್ನು ಸೇವಿಸುವುದರಿಂದ ವಿಟಮಿನ್ ಇ ಮಿತಿ ಮೀರುತ್ತದೆ ಅದರ ಪರಿಣಾಮ ,ದೃಷ್ಟಿ ಮಂದವಾಗುವುದು, ಅತಿಯಾದ ತಲೆನೋವು, ಅತಿಸಾರ ಮತ್ತು ವಾಯು ಸಮಸ್ಯೆಗೆ ಕಾರಣವಾಗಬಹುದು.

ಹಾಗೆಯೆ ಯಾರೇ ಆಗಲಿ ಬಾದಾಮಿಯನ್ನು ಹೆಚ್ಚು ಸೇವಿಸಿದರೆ ಮೂತ್ರಪಿಂಡದಲ್ಲಿ ಕಲ್ಲುಗಳ ಸಮಸ್ಯೆ ಉಂಟಾಗುತ್ತದೆ ದೇಹದಲ್ಲಿ ಹೆಚ್ಚಿನ ಕ್ಯಾಲ್ಸಿಯಂ ಆಕ್ಸಲೇಟ್‌ಗಳು ಉಳಿದಿರುವಾಗ ಮೂತ್ರಪಿಂಡದ ಕಲ್ಲುಗಳು ರೂಪುಗೊಳ್ಳುತ್ತವೆ ಬಾದಾಮಿಯು ಆಕ್ಸಲೇಟ್‌ಗಳಿಂದ ಸಮೃದ್ಧವಾಗಿದೆ ಹಾಗಾಗಿ ಹೆಚ್ಚಿನ ಬಾದಾಮಿ ಸೇವನೆ ಅಪಾಯಕಾರಿ .

BPಗೆ ಇಲ್ಲಿದೆ ಮನೆ ಮದ್ದು….!

ಡೈಲಿ ಹೆಲ್ತ್ ಕೇರ್ ಟಿಪ್ಸ್ ನಿಮ್ಮ ಜೀವನ ಶೈಲಿಯನ್ನು ಆರೋಗ್ಯವಾಗಿಡುತ್ತದೆ :

ನಿಮ್ಮ ದೇಹದ ತೂಕ ಇಳಿಸಲು ಶುಂಠಿ ರಾಮಬಾಣ ….!

 

- Advertisement -

Latest Posts

Don't Miss