Health tips:
ಮೊಳಕೆ ಕಾಳುಗಳು ನಿಮ್ಮ ಆರೋಗ್ಯಕ್ಕೆ ಸಂಪೂರ್ಣವಾದ ಪೋಷಕಾಂಶಗಳು ಹಾಗೂ ಜೀವಸತ್ವಗಳನ್ನು ಒದಗಿಸುತ್ತದೆ . ಇದು ನಿಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಆದಕಾರಣ ಅನೇಕ ಜನರು ಪ್ರತಿದಿನ ಬೆಳಗ್ಗೆ ಮೊಳಕೆ ಕಾಳುಗಳನ್ನು ಸೇವಿಸುತ್ತಾರೆ .ಆದರೆ ಯಾವುದನ್ನೂ ಅತಿಯಾಗಿ ತಿನ್ನುವುದು ಒಳ್ಳೆಯದಲ್ಲ ಕೆಲವೊಂದು ಆರೋಗ್ಯ ಸಮಸ್ಯೆ ಇರುವವರು ಮೊಳಕೆ ಕಾಳುಗಳನ್ನು ತಿನ್ನುವುದರಿಂದ ಆರೋಗ್ಯ ಕೆಡುವ ಸಾಧ್ಯತೆ ಇದೆ ಎನ್ನುತ್ತಾರೆ ಆರೋಗ್ಯ ತಜ್ಞರು. ಹಾಗಾದರೆ ಯಾವ ಆರೋಗ್ಯ ಸಮಸ್ಯೆ ಇರುವವರಿಗೆ ಮೊಳಕೆ ಕಾಳುಗಳನ್ನೂ ತಿನ್ನುವುದು ಒಳ್ಳೆಯದಲ್ಲ ಎನ್ನುವುದನ್ನು ತಿಳಿಯೋಣ ಬನ್ನಿ…
ಮೊಳಕೆ ಕಾಳುಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು, ಅದರಲ್ಲಿ ಪ್ರೋಟೀನ್, ಫೈಬರ್, ಕ್ಯಾಲ್ಸಿಯಂ, ವಿಟಮಿನ್ ಎ ಮತ್ತು ವಿಟಮಿನ್ ಸಿ ಹೇರಳವಾಗಿರುತ್ತದೆ .ಆದರೆ ಈ ಕಾಳುಗಳನ್ನು ಅತಿಯಾಗಿ ಸೇವಿಸುವುದರಿಂದ ಕೆಲವೊಮ್ಮೆ ಹೊಟ್ಟೆ ಉಬ್ಬರ, ಗ್ಯಾಸ್ ಮತ್ತು ಆ್ಯಸಿಡಿಟಿ ಮಲಬದ್ಧತೆ, ಪೈಲ್ಸ್ ನಂತಹ ಹಲವು ಸಮಸ್ಯೆಗಳು ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ . ಮೊದಲೇ ಈ ಸಮಸ್ಯೆಯಿಂದ ಬಳಲುತ್ತಿರುವವರು ಈ ಕಾಲುಗಳನ್ನು ಸೇವಿಸದೇ ಇದ್ದರೆ ಒಳ್ಳೆಯದು .
ಹಾಗು ರೋಗನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಯಾವುದೇ ಆಹಾರ ಇಡೀ ದೇಹವನ್ನು ತಲುಪಿ ಜೀರ್ಣಿಸಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ ಆಗ ಇದು ಗ್ಯಾಸ್ಟ್ರಿಕ್ ಕಿರಿಕಿರಿ ಮತ್ತು ಆಮ್ಲೀಯತೆಯನ್ನು ಉಂಟುಮಾಡುತ್ತದೆ ಕಡಿಮೆ ರೋಗನಿರೋಧಕ ಶಕ್ತಿ ಹೊಂದಿರುವವರು ಮೊಳಕೆ ಕಾಳುಗಳನ್ನು ಅತಿ ಕಡಿಮೆ ಪ್ರಮಾಣದಲ್ಲಿ ತಿನ್ನುವುದು ಉತ್ತಮ .
ರ್ಹೂಮಟಾಯ್ಡ್ ಸಂಧಿವಾತ,ಸೋರಿಯಾಸಿಸ್ ,ಈ ತರಹ ಆಟೋ ಇಮ್ಯೂನ್ ಸಮಸ್ಯೆ ಇದ್ದರೆ ಖಂಡಿತ ನೀವು ಮೊಳಕೆ ಬಂದಿರುವಂತಹ ಕಾಳುಗಳನ್ನು ತಿನ್ನಬಾರದು , ಈ ಪ್ರೊಟೀನ್ ಅಂಶ ಕೆಲವೊಮ್ಮೆ ಆಟೋ ಇಮ್ಯೂನ್ ಸಮಸ್ಯೆಯನ್ನು ಜಾಸ್ತಿ ಮಾಡುತ್ತದೆ .
ಮೊಳಕೆಯಲ್ಲಿ ಪೋಷಕಾಂಶಗಳು ಸಮೃದ್ಧವಾಗಿವೆ ಎಷ್ಟೇ ಆರೋಗ್ಯವಂತರೆ ಆಗಿರಲಿ ಕೆಲವೊಮ್ಮೆ ಎಲ್ಲಾ ಪೋಷಕಾಂಶಗಳನ್ನು ಹೀರಿಕೊಳ್ಳುವುದಿಲ್ಲ ಹಾಗಾಗಿ ಮೊಳಕೆ ಕಾಳುಗಳನ್ನು ಹಸಿಯಾಗಿ ತಿನ್ನುವ ಬದಲು ಸ್ವಲ್ಪ ಬೇಯಿಸಿ ನಂತರ ಸೇವಿಸುವುದು ಉತ್ತಮ ಹೀಗೆ ಮಾಡುವುದರಿಂದ ದೇಹವು ಮೊಳಕೆ ಕಾಳುಗಳಲ್ಲಿರುವಂತಹ ಪೋಷಕಾಂಶಗಳನ್ನು ಹೀರಿಕೊಳ್ಳುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು.
ಡೈಲಿ ಹೆಲ್ತ್ ಕೇರ್ ಟಿಪ್ಸ್ ನಿಮ್ಮ ಜೀವನ ಶೈಲಿಯನ್ನು ಆರೋಗ್ಯವಾಗಿಡುತ್ತದೆ :