ಕುಡಿದ ಮೇಲೆ ಕನಸಲ್ಲೂ ಬಸ್ ಬೇಡ!

ಕುಡಿದ ಮೇಲೆ “ನಾವು ಏನಾದ್ರೂ ಮಾಡ್ಬಹುದು” ಅನ್ನೋ ಓವರ್‌ಕಾನ್ಫಿಡೆನ್ಸ್ ಬಂದಾಗ ಏನಾಗುತ್ತೆ ಅನ್ನೋದಕ್ಕೆ ಆನೇಕಲ್‌ನಲ್ಲೇ ಲೈವ್ ಡೆಮೋ ಆಯ್ತು! ತಡರಾತ್ರಿ ನಾಲ್ವರು ಯುವಕರು—ಕಾರ್ ಅಲ್ಲ, ಬೈಕ್ ಅಲ್ಲ—ಪೂರ್ತಿ ಖಾಸಗಿ ಬಸ್‌ನೇ ಕದ್ದುಕೊಂಡು ಹೊರಟಿದ್ದಾರೆ. ಸ್ಟೀರಿಂಗ್ ಹಿಡಿದ ಕ್ಷಣಕ್ಕೆ ಬಸ್ ಡ್ರೈವಿಂಗ್ ಅನ್ನೋದು ಗೇಮ್ ಅಂತ ಭಾವಿಸಿದ್ರೋ ಏನೋ, ಬಸ್ ಅಡ್ಡಾದಿಡ್ಡಿ ಡ್ಯಾನ್ಸ್ ಶುರು. ಮೊದಲು ಪಾದಚಾರಿಗೆ “ಸರ್ಪ್ರೈಸ್,” ನಂತರ ವಿದ್ಯುತ್ ಕಂಬಕ್ಕೆ “ಹಗ್.” ಜನ ನೋಡ್ತಾರೆ ಅಂದ್ರೆ ಸಿನಿಮಾ ಶೂಟಿಂಗ್ ಅಂತಲ್ಲ—ರಿಯಲ್ ಲೈಫ್ ಕಾಮಿಡಿ-ಥ್ರಿಲ್ಲರ್. ಕೊನೆಗೆ ಪಬ್ಲಿಕ್ ಅಡ್ಡಗಟ್ಟಿ ನಿಲ್ಲಿಸಿದ್ರು; ಮೂವರು ಮಾಯ, ಒಬ್ಬ “ಹೀರೋ” ಮಾತ್ರ ಪಬ್ಲಿಕ್ ಕೈಗೆ ಸಿಕ್ಕಿ ಪೊಲೀಸರಿಗೆ. ಪಾಠ ಒಂದೇ—ಕುಡಿದ ಮೇಲೆ ಕನಸಲ್ಲೂ ಬಸ್ ಓಡಿಸ್ಬೇಡಿ… ಇಲ್ಲ ಅಂದ್ರೆ ರೀಲ್ಸ್‌ನಲ್ಲಿ ನೀವು ಸ್ಟಾರ್.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

About The Author