ಮನೆಯಲ್ಲಿ ಸಕಾರಾತ್ಮಕ ಶಕ್ತಿ ಉಳಿಸಿಕೊಳ್ಳಲು ವಾಸ್ತು ಶಾಸ್ತ್ರದ ನಿಯಮಗಳು ತುಂಬಾ ಮುಖ್ಯ. ಇಂದು ಎಲ್ಲರ ಮನೆಯಲ್ಲಿ ಇರುವ ಫ್ರಿಡ್ಜ್ ಕೂಡ ವಾಸ್ತುವಿನ ಪ್ರಕಾರ ಸರಿಯಾಗಿ ಬಳಸಿದರೆ ಮನೆಯಲ್ಲಿ ಶಾಂತಿ, ಸಮತೋಲನ ಮತ್ತು ಸುಖವನ್ನು ಹೆಚ್ಚಿಸುತ್ತದೆ. ಆದರೆ ಕೆಲ ಸಾಮಾನ್ಯ ತಪ್ಪುಗಳು ನಕಾರಾತ್ಮಕತೆಗೂ ಕಾರಣವಾಗಬಹುದು…
ಫ್ರಿಡ್ಜ್ ಅಗ್ನಿ ತತ್ತ್ವದ ಸಂಕೇತವಾಗಿರುವುದರಿಂದ, ಅದರ ಮೇಲೆ ನೀರಿನ ಅಂಶಕ್ಕೆ ಸಂಬಂಧಿಸಿದ ವಸ್ತುಗಳನ್ನು ಇಡುವುದು ವಾಸ್ತು ಪ್ರಕಾರ ತಪ್ಪು. ಅಕ್ವೇರಿಯಂ, ನೀರಿನ ಸಸ್ಯಗಳು, ಮನಿ ಪ್ಲಾಂಟ್ ಮುಂತಾದ ವಸ್ತುಗಳನ್ನು ಫ್ರಿಡ್ಜ್ ಮೇಲೆ ಇಟ್ಟರೆ ಕುಟುಂಬದಲ್ಲಿ ಜಗಳ, ಆರ್ಥಿಕ ಸಮಸ್ಯೆಗಳು ಮತ್ತು ಮನಸ್ತಾಪಗಳು ಹೆಚ್ಚುವ ಸಾಧ್ಯತೆ ಇದೆ.
ಅದೇ ರೀತಿ ಔಷಧಿಗಳನ್ನು ಫ್ರಿಡ್ಜ್ ಮೇಲ್ಭಾಗದಲ್ಲಿ ಇಡುವುದನ್ನೂ ತಪ್ಪಿಸಬೇಕು. ಫ್ರಿಡ್ಜ್ ಮೇಲಿನ ಬಿಸಿ ತಾಪಮಾನದಿಂದ ಔಷಧಿಗಳು ಹಾಳಾಗುವಷ್ಟೇ ಅಲ್ಲ, ವಾಸ್ತು ಪ್ರಕಾರ ಆರೋಗ್ಯದ ಸಮಸ್ಯೆಗಳಿಗೂ ಕಾರಣವಾಗಬಹುದು. ತಾಪಮಾನ ಕಡಿಮೆ ಬೇಕಾದ ಔಷಧಿಗಳು ಇದ್ದರೆ ಅವನ್ನು ಫ್ರಿಡ್ಜ್ ಒಳಗೆ ಇಡುವುದು ಸೂಕ್ತ.
ಹಳೆಯ, ಹಾನಿಯಾದ ಅಥವಾ ಅನಗತ್ಯ ವಸ್ತುಗಳನ್ನು ಫ್ರಿಡ್ಜ್ ಮೇಲೆ ಇಡುವುದು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ದೇವರ ಚಿತ್ರ, ಬಿದಿರಿನ ಗಿಡ, ಹಣ, ಭಾರವಾದ ವಸ್ತುಗಳು, ಧಾನ್ಯದ ಪೆಟ್ಟಿಗೆ, ಪ್ರಶಸ್ತಿಗಳು, ಮೊಬೈಲ್ ಚಾರ್ಜರ್ ಮುಂತಾದವುಗಳನ್ನು ಫ್ರಿಡ್ಜ್ ಮೇಲೆ ಇಡುವುದನ್ನು ತಪ್ಪಿಸಿ. ಮನೆ ಶಾಂತವಾಗಿರಲು ಫ್ರಿಡ್ಜ್ ಮೇಲೆ ಹಗುರವಾದ ಅಲಂಕಾರ ವಸ್ತುಗಳನ್ನು ಮಾತ್ರ ಬಳಸಿ ಎಂದು ಶಾಸ್ತ್ರಜ್ಞರು ಹೇಳ್ತಾರೆ …..
ವರದಿ : ಗಾಯತ್ರಿ ನಾಗರಾಜ್




