Saturday, May 25, 2024

Latest Posts

ಕುರುಬರ ಸಂಘಗಳಲ್ಲಿ ಕಾಂಗ್ರೆಸ್ ವಿರೋಧಿ ಭಾವವಿದೆ..!

- Advertisement -

political news :

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ರಾಜ್ಯದಲ್ಲಿ ಸಂಚಾರ ನಡಸುತ್ತಿದ್ದಾರೆ., ಚುನಾವಣಾ ಸಲುವಾಗಿ ಕಸರತ್ತು ನಡೆಸುತ್ತಾ ಬಿಜೆಪಿ ಸರ್ಕಾರ  ರಾಜ್ಯ ನಾಯಕರಿಗೆ ಮಹತ್ವದ ಸೂಚನೆ ನೀಡಿದ್ದಾರೆ. ಪ್ರತಿ ಜಿಲ್ಲೆಯಲ್ಲಿಯೂ ಸಭೆ ನಡೆಸಿ ಅಗತ್ಯ ಕ್ರಮಗಳನ್ನ ವಹಿಸುವಂತೆ ತಾಕೀತು ಮಾಡಿದ್ದಾರೆ. ಹೀಗೆ ಕೋಲಾರ ಸಭೆಯಲ್ಲಿ ಮಾತನಾಡಿದ ಬಿ ಎಲ್ ಸಂತೋಷ್,  ಕೋಲಾರದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪರ್ಧಿಸುವ ಬಗ್ಗೆ ಹೆಚ್ಚಿನ ಒತ್ತಡ ಬೇಡ ಎಂದಿದ್ದಾರೆ.  ಯಾರೇ ಬಂದರೂ ನಮ್ಮ ಸಂಘಟನೆ ಗಟ್ಟಿ ಇದ್ದರೆ ಗೆಲುವು ನಮ್ಮದೆ. ಮನೆ ಮನೆಗೂ ಪಕ್ಷದ ಕಾರ್ಯಕರ್ತರು ಹೋಗಬೇಕು. ಪ್ರತಿ ಮನೆಯ ಮೇಲೂ ಬಿಜೆಪಿ ಬಾವುಟ ನೆಟ್ಟಿ ಎಂದು ಕಾರ್ಯಕರ್ತರಿಗೆ ಸೂಚಿಸಿದ್ದಾರೆ.  ಜಿಲ್ಲೆಯಲ್ಲಿ ಎಲ್ಲ ಸಮುದಾಯಗಳ ಸಭೆ ನಡೆಸಿ. ಸಮುದಾಯದ ಪ್ರಮುಖರನ್ನು ಭೇಟಿಯಾಗಿ ಚರ್ಚಿಸಿ. ಸಣ್ಣ ಸಮುದಾಯಗಳನ್ನೂ ಕಡೆಗಣಿಸವುದು ಬೇಡ. ಹೋಬಳಿ ಮಟ್ಟದಲ್ಲಿ ಜಾತಿ ಸಮಾವೇಶಗಳನ್ನು ಮಾಡಿ. ಕಾಂಗ್ರೆಸ್ ಹಾಗೂ ಜೆಡಿಎಸ್​ನ ಸ್ಥಳಿಯ ನಾಯಕರನ್ನು ಗುರುತಿಸಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಿ. ಈಗಾಗಲೇ ಜಿಲ್ಲಾ ಕುರುಬರ ಸಂಘ ಸೇರಿದಂತೆ ಸ್ಥಳೀಯವಾಗಿ ಸಂಘಗಳಲ್ಲಿ ಕಾಂಗ್ರೆಸ್ ವಿರೋಧಿ ಭಾವನೆ ಇದೆ. ಅದನ್ನು ಸೂಕ್ತ ರೀತಿಯಲ್ಲಿ ರಾಜಕೀಯವಾಗಿ ಬಳಸಿಕೊಳ್ಳಲು ಹೇಳಿದರು.

ಪ್ರಧಾನಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಟ್ವೀಟ್

ಸಿಎಂ ಬೊಮ್ಮಾಯಿ ಭೇಟಿ ಮಾಡಿದ ಹಳ್ಳಿ ಹಕ್ಕಿ..!

ಸಿಎಂ ನೇತೃತ್ವದಲ್ಲಿ ಬಜೆಟ್​ ಪೂರ್ವಭಾವಿ ಸಭೆ..!

- Advertisement -

Latest Posts

Don't Miss