ರಾಜ್ಯ ಸರ್ಕಾರಕ್ಕೆ ಡಬಲ್ ಶಾಕ್: ಹೆಣ್ಮಕ್ಳಿಗೆ ಖುಷಿ , ಕುಡುಕರಿಗೆ ತಲೆ ಬಿಸಿ!

ರಾಜ್ಯದಲ್ಲಿ ಏಪ್ರಿಲ್‌ ನಿಂದ ನವೆಂಬರ್‌ವರೆಗೆ ಮದ್ಯ ಮಾರಾಟ ನಿರೀಕ್ಷಿತ ಮಟ್ಟಕ್ಕಿಂತ ಬಹಳ ಕಡಿಮೆಯಾಗಿದೆ. ಇದರಿಂದ ಸರ್ಕಾರದ ಪ್ರಮುಖ ಆದಾಯ ಮೂಲವಾದ ಅಬಕಾರಿ ಇಲಾಖೆಯ ಸಂಗ್ರಹ ಕೂಡ ದೊಡ್ಡ ಪ್ರಮಾಣದಲ್ಲಿ ಕುಸಿದಿದ್ದು, ಸರ್ಕಾರ ಆರ್ಥಿಕ ಒತ್ತಡಕ್ಕೆ ಸಿಲುಕಿದೆ.

ಗ್ಯಾರಂಟಿ ಯೋಜನೆಗಳ ಭಾರ ಮತ್ತು ರಾಜಕೀಯ ಅಸಮಾಧಾನದ ನಡುವೆ ಸರ್ಕಾರ ಈಗ ಮತ್ತೊಂದು ತಲೆನೋವಿಗೆ ಗುರಿಯಾಗಿದೆ. ಈ ಬಾರಿ ಮದ್ಯಪ್ರಿಯರೇ ಸರ್ಕಾರಕ್ಕೆ ಶಾಕ್ ನೀಡಿದ್ದಾರೆ. ರಾಜ್ಯದಲ್ಲಿ ಬಿಯರ್ ಮತ್ತು IML ಮಾರಾಟ ಕಳೆದ ವರ್ಷಕ್ಕೆ ಹೋಲಿಸಿದರೆ ಗಣನೀಯವಾಗಿ ಇಳಿಕೆ ಕಂಡಿದೆ.

ಕಳೆದ ವರ್ಷ ಇದೇ ಅವಧಿಯಲ್ಲಿ 279 ಲಕ್ಷ ಬಿಯರ್ ಬಾಕ್ಸ್ ಮಾರಾಟವಾಗಿತ್ತು. ಈ ವರ್ಷ (ಏಪ್ರಿಲ್–ನವೆಂಬರ್) ಕೇವಲ 228 ಲಕ್ಷ ಬಾಕ್ಸ್ ಮಾರಾಟವಾಗಿದೆ. ಅಂದರೆ 51 ಲಕ್ಷ ಬಾಕ್ಸ್ ಮಾರಾಟ ಕುಸಿತ ಕಂಡಿದೆ.
ಒಂದು ಬಾಕ್ಸ್ ಗೆ 8 ಲೀಟರ್ ಇದ್ದರೆ, ಬಿಯರ್ ಖರೀದಿ ಕೋಟ್ಯಾಂತರ ಲೀಟರ್‌ಗಳಷ್ಟು ಕಡಿಮೆಯಾಗಿದೆ.

7 ತಿಂಗಳಿಂದ ರಾಜ್ಯದಲ್ಲಿ ಬಿಯರ್, IML ಮಾರಾಟ ಫುಲ್​​ ಡಲ್ ಆಗಿದೆ. ಇದೇ ರೀತಿ ವಿಸ್ಕಿ, ಬ್ರಾಂದಿ, ರಮ್ ಸೇರಿ ಎಲ್ಲಾ ಇಂಡಿಯನ್ ಮೇಡ್ ಲಿಕ್ಕರ್ ಮಾರಾಟದಲ್ಲೂ ಇಳಿಕೆ ಕಂಡುಬಂದಿದೆ. 2024ರ ನವೆಂಬರ್​ ಅವಧಿಯವರೆಗೆ 407 ಲಕ್ಷ ಬಾಕ್ಸ್ IML​ ಮಾರಾಟ ಆಗಿದ್ರೆ ಈ ವರ್ಷ 403 ಲಕ್ಷ ಬಾಕ್ಸ್‌ಗಳಿಗೆ ಇಳಿದಿದೆ. ಅಂದರೆ 4.36 ಲಕ್ಷ ಬಾಕ್ಸ್‌ಗಳ ಮಾರಾಟ ಕುಸಿದಿದೆ.

ಎಣ್ಣೆ ಮಾರಾಟ ಕುಸಿತದಿಂದ ಅಬಕಾರಿ ಇಲಾಖೆ ತಲೆ ಕೆಡಿಸಿಕೊಂಡಿದೆ. ಸರ್ಕಾರ ಅವಾಗವಾಗ ಮದ್ಯದ ಬೆಲೆ ಏರಿಸುವುದರಿಂದ ಮದ್ಯಪ್ರಿಯರು ಪರ್ಯಾಯ ಮಾರ್ಗ ಹುಡುಕಿಕೊಂಡ್ರಾ ಅನ್ನೋ ಪ್ರಶ್ನೆಯೂ ಎದುರಾಗಿದೆ. ಅಲ್ಲದೇ ಗಾಂಜಾ-ಅಫೀಮು ಹಾವಳಿಯಿಂದ ಮದ್ಯ ಮಾರಾಟ ಕುಸಿದಿದೆ ಎನ್ನಲಾಗ್ತಿದೆ.

ವರದಿ : ಲಾವಣ್ಯ ಅನಿಗೋಳ

About The Author