ಬೆಂಗಳೂರು: ‘ಅನುಭವ’ ಚಿತ್ರದ ಖ್ಯಾತಿಯ ಸ್ಯಾಂಡಲ್ ವುಡ್ ನಟಿ ಅಭಿನಯ ಅವರಿಗೆ 2 ವರ್ಷ ಜೈಲು ಶಿಕ್ಷೆ ನೀಡಿ ಹೈ ಕೋರ್ಟ್ ಆದೇಶ ಹೊರಡಿಸಿದೆ. ಕುಟುಂಬದ ಜೊತೆ ಸೇರಿ ವರದಕ್ಷಿಣೆಗಾಗಿ ಅತ್ತಿಗೆಗೆ ಕಿರುಕುಳ ನೀಡುತ್ತಿದ್ದರು ಎಂಬ ಆರೋಪದ ಮೇಲೆ ಹೈಕೋರ್ಟ್ ನ್ಯಾ. ಹೆಷ್.ಬಿ ಪ್ರಭಾಕರ್ ಶಾಸ್ತ್ರಿ ಅವರ ಏಕಸದಸ್ಯ ಪೀಠವು 2 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಕಿರುತೆರೆಯಲ್ಲೂ ನಟಿಸಿ ಸೈ ಎನಿಸಿಕೊಂಡಿರುವ ನಟಿ ಅಭಿನಯ ಅವರು 1983 ರಲ್ಲಿ ಕಾಶೀನಾಥ್ ಅವರ ಜೊತೆ ಅನುಭವ ಸಿನಿಮಾದಲ್ಲಿ ನಟಿಸುವುದರ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಸದ್ಯ ಕಿರುತೆರೆಯಲ್ಲಿ ಪ್ರಸಾರವಾಗುವ ‘ಹಿಟ್ಲರ್ ಕಲ್ಯಾಣ’ ಧಾರಾವಾಹಿಯಲ್ಲಿ ಪೋಷಕ ಪಾತ್ರದಲ್ಲಿ ನಟಿಸುತ್ತಿದ್ದರು.
ಮಲೆ ಮಹದೇಶ್ವ ಬೆಟ್ಟಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಸಿಎಂ ಬೊಮ್ಮಾಯಿ
ವಿಮಾನ ನಿಲ್ದಾಣದಲ್ಲಿ ಜನದಟ್ಟಣೆ ತಪ್ಪಿಸಲು ಮೂರುವರೆ ಗಂಟೆ ಮೊದಲೇ ಪ್ರಯಾಣಿಕರಿಗೆ ನಿಲ್ದಾಣ ತಲುಪಲು ಸೂಚನೆ
ಆರೋಗ್ಯ ಇಲಾಖೆ ರೂಪಿಸಿರುವ 114 ‘ನಮ್ಮ ಕ್ಲಿನಿಕ್’ಗಳು ಇಂದಿನಿಂದ ಕಾರ್ಯಾರಂಭ