Monday, August 4, 2025

Latest Posts

ರಾಹುಲ್ ಗಾಂಧಿ ಆರೋಪಕ್ಕೆ ಡಾ.ಮಂಜುನಾಥ್ ಟಾಂಗ್

- Advertisement -

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮಾಡಿರುವ ಮತಗಳ್ಳತನದ ಆರೋಪ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ರಾಹುಲ್ ಗಾಂಧಿ ಮಾತಿಗೆ ಬಿಜೆಪಿ ಸಂಸದ ಡಾ.ಸಿ.ಎನ್. ಮಂಜುನಾಥ್ ಅವರು ತಿರುಗೇಟು ಕೊಟ್ಟಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನವಾಗಿದೆ ಎಂಬ ಗಂಭೀರ ಆರೋಪ ಕಾಂಗ್ರೆಸ್ ನಾಯಕರಿಂದ ಬಂದಿದೆ. ಕಾಂಗ್ರೆಸ್ ಕಡೆಯಿಂದ –EVM ಗಳು, ಮತದಾರರ ಪಟ್ಟಿ ಹಾಗೂ ಚುನಾವಣಾ ಪ್ರಕ್ರಿಯೆ ಕುರಿತಾಗಿ ಅನುಮಾನ ವ್ಯಕ್ತಪಡಿಸಲಾಗಿದೆ.

ಈ ಆರೋಪಗಳ ಮೇಲೆ ಬಿಜೆಪಿ ಸಂಸದ ಡಾ. ಸಿ.ಎನ್. ಮಂಜುನಾಥ್ ಕಿಡಿಕಾರಿದ್ದಾರೆ. ಮತಗಳ್ಳತನದ ಮೂಲಕ ಯಾರಾದರೂ ಅಧಿಕಾರಕ್ಕೆ ಬಂದಿದ್ದರೆ, ಅಂಥವರು ಮಾತ್ರ ಈ ರೀತಿ ಗಂಭೀರ ಆರೋಪ ಮಾಡಬಲ್ಲರು ಎಂದು ಕಿವಿಮಾತು ಹೇಳಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಎಲ್ಲವೂ ಸರಿಯಿರುತ್ತೆ, ಸೋತಾಗ ಮಾತ್ರ ಯಂತ್ರಗಳಲ್ಲಿ ದೋಷ ಕಾಣುತ್ತೆ. ವಿಧಾನಸಭೆ ಚುನಾವಣೆಯಲ್ಲಿ 135 ಸ್ಥಾನ ಗೆದ್ದಾಗ ಯಾವ ಮತಗಳ್ಳತನ ಆಗಿರಲಿಲ್ಲವೇ? ಎಂದು ತೀವ್ರ ಪ್ರಶ್ನೆ ಎಸೆದಿದ್ದಾರೆ.

ನಾನು 2.70 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದೇನೆ. ಇದು ಜನರ ಆಶೀರ್ವಾದ. ಈಷ್ಟು ದೊಡ್ಡ ಅಂತರವನ್ನು ಕಳವು ಮಾಡುವುದು ಸಾಧ್ಯವೇ? ಅದು ಸಾಧ್ಯವಿಲ್ಲ ಎಂದೇ ಮಂಜುನಾಥ್ ಹೇಳಿದ್ದಾರೆ. ಅವರು ಸ್ಪಷ್ಟಪಡಿಸಿದಂತೆ, ಚುನಾವಣೆ ನಡೆಸುವ ಪ್ರಕ್ರಿಯೆ ಪಾರದರ್ಶಕವಾಗಿದೆ, ಮತ್ತು ಚುನಾವಣೆ ಆಯೋಗದ ಮೇಲೆಯೇ ಜನರ ನಂಬಿಕೆ ಇದೆ. ಜನ ತಾವು ತೀರ್ಮಾನಿಸಿರುವುದನ್ನೇ ಬೆಂಬಲಿಸುತ್ತಾರೆ ಅನ್ನೊದಾಗಿದೆ.

ಈ ಎಲ್ಲಾ ಬೆಳವಣಿಗೆಗಳನ್ನು ನೋಡಿದಾಗ, ಮುಂದಿನ ದಿನಗಳಲ್ಲಿ ಚುನಾವಣಾ ರೀತಿ-ರಿವಾಜುಗಳ ಬಗ್ಗೆ ಸಾರ್ವಜನಿಕನಲ್ಲಿ ಅನುಮಾನ ಮೂಡುವ ಸಾಧ್ಯತೆಯಿದೆ. ಆದರೆ, ಚುನಾವಣಾ ಆಯೋಗ, ಪಾರದರ್ಶಕತೆ ಹಾಗೂ ಮತದಾರರ ಬುದ್ಧಿವಂತಿಕೆಯ ಮೇಲೆ ವಿಶ್ವಾಸ ಇಡಬೇಕಾಗುತ್ತದೆ.

- Advertisement -

Latest Posts

Don't Miss