Shivamogga News:
ಶಿವಮೊಗ್ಗ : ನಗರದ ಪ್ರತಿಷ್ಠಿತ ಸರ್ಜಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಮಕ್ಕಳ ತೀವ್ರ ನಿಗಾ ಘಟಕದ ತಜ್ಞ ವೈದ್ಯರು ಹಾಗು ಆಸ್ಪತ್ರೆಯ ಮೆಡಿಕಲ್ ಸೂಪರಿಂಟೆಂಡೆಂಟ್ ಆದ ಡಾ.ಸತೀಶ್ (46) ಅವರು ಅನಾರೋಗ್ಯ ದಿಂದ ಬುಧವಾರ ಬೆಳಗ್ಗೆ ನಿಧನ ಹೊಂದಿದರು. ಮೃತರು ಪತ್ನಿ ಡಾ.ಚೇತನಾ, ಸ್ತ್ರೀ ರೋಗ ಮತ್ತು ಪ್ರಸೂತಿ ತಜ್ಞೆ (ಸರ್ಜಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ) ಹಾಗೂ ಒಬ್ಬ ಪುತ್ರ, ಒಬ್ಬ ಪುತ್ರಿ ಅಪಾರ ಬಂಧು ಬಳಗ, ಸ್ನೇಹಬಳಗವನ್ನು ಅಗಲಿದ್ದಾರೆ.
ಕಳೆದ ಏಳೆಂಟು ವರ್ಷಗಳಿಂದ ಸರ್ಜಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಮೃತರು ಮೂಲತಃ ದಾವಣಗೆರೆ ಜಿಲ್ಲೆಯ ತ್ಯಾವಣಗಿ ಗ್ರಾಮದವರು. ಹಿತಮಿತ, ಮೃದು ಮಾತು, ಗಾಂಭೀರ್ಯ ಹಾಗೂ ಸರಳ, ಸಜ್ಜನಿಕೆಯೊಂದಿಗೆ ಅತ್ಯುತ್ತಮ ಚಿಕಿತ್ಸೆಯ ಮೂಲಕ ಮಲೆನಾಡಿನ ಮಾತಾಗಿದ್ದರು. ಸಹದ್ಯೋಗಿ ಮಿತ್ರರು, ಹಿರಿಯರು, ಕಿರಿಯರೊಂದಿಗೆ ಅತ್ಯಂತ ಆಪ್ರತವಾಗಿದ್ದರು.
ಅಂತಿಮ ದರ್ಶನ ಮತ್ತು ಅಂತ್ಯಸಂಸ್ಕಾರ
ಗೋಪಾಳದ ರಂಗನಾಥ ಬಡಾವಣೆಯ ಮೊದಲ ತಿರುವಿನ ಶ್ರೀನಿಧಿ ಶಾಮಿಯಾನ ಪಕ್ಕದ ಸೌಪರ್ಣಿಕಾ ನಿಲಯದಲ್ಲಿ ಬೆಳಗ್ಗೆ 7 ರಿಂದ 9 ಗಂಟೆಯವರೆಗೆ ಮೃತರ ಪಾರ್ಥೀವ ಶರೀರದ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಂತರ 9 ರಿಂದ 9.30 ರವರೆಗೆ ಸರ್ಜಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ದರ್ಶನಕ್ಕೆ ಅವಕಾಶವಿದೆ. ಬಳಿಕ ಸ್ವಗ್ರಾಮವಾದ ದಾವಣಗೆರೆ ಜಿಲ್ಲೆಯ ತ್ಯಾವಣಗಿಗೆ ತೆರಳಿ, ಮಧ್ಯಾಹ್ನ 2 ಗಂಟೆಗೆ ಅಂತಿಮ ಸಂಸ್ಕಾರ ನಡೆಸಲಾಗುವುದು.
ಕಾನ್‌ಸ್ಟೇಬಲ್ ಪತ್ರ ಫುಲ್ ವೈರಲ್..! ಏನಿತ್ತು ಗೊತ್ತಾ ಆ ಪತ್ರದಲ್ಲಿ..?!