ವಿಶ್ವಸುಂದರಿಯಾಗಿ ಹೊರಹೊಮ್ಮಿದ ಶಿರಸಿ ಮೂಲದ ಡಾ.ಶೃತಿ ಹೆಗಡೆ

Sirsi News: ಶಿರಸಿ ತಾಲೂಕಿನಲ್ಲಿರುವ ಹುಬ್ಬಳ್ಳಿ ಮೂಲದ ಡಾ.ಶೃತಿ ಹೆಗಡಿ 2024 ವಿಶ್ವಸುಂದರಿ ಪಟ್ಟಕ್ಕೇರಿದ್ದಾರೆ.

ಹುಬ್ಬಳ್ಳಿಯಲ್ಲಿ ನೆಲೆಸಿರುವ ಕೃಷ್ಣಾ ಹೆಗಡೆ, ಕಮಲಾ ದಂಪತಿಯ ಪುತ್ರಿ ಡಾ.ಶೃತಿ ಹೆಗಡೆ ಈ ಬಾರಿ ವಿಶ್ವಸುಂದರಿಯ ಕಿರೀಟ ಧರಿಸಿದ್ದಾರೆ. ಇವರು ಈ ಮೊದಲು ಮಿಸ್ ಕರ್ನಾಟಕ ರನ್ನರ್ ಅಪ್, ಮಿಸ್ ಸೌತ್ ಇಂಡಿಯಾ ಆಗಿದ್ದರು.

ಅಲ್ಲದೇ ಮಿಸ್ ಏಷ್ಯಾ ಇಂಟರ್‌ನ್ಯಾಷನಲ್ ಇಂಡಿಯಾ ಪ್ರಶಸ್ತಿಗೂ ಭಾಜನರಾಗಿದ್ದ ಶೃತಿ, ಇದೀಗ ಅಮೆರಿಕದಲ್ಲಿ ನಡೆಸ ವಿಶ್ವಸುಂದರಿ ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ.  10 ದೇಶಗಳ ಸುಂದರಿಯರೊಂದಿಗೆ ಶೃತಿ ಪೈಪೋಟಿ ನಡೆಸಿದ್ದು, ಹಲವು ಸ್ಪರ್ಧೆಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ ಶೃತಿ ಎಂಬಿಬಿಎಸ್ ಮುಗಿಸಿದ್ದು, ಚರ್ಮ ರೋಗ ತಜ್ಞೆಯಾಗಬೇಕೆಂದು, ತುಮಕೂರಿನಲ್ಲಿ ಎಂ.ಡಿ. ಮಾಡುತ್ತಿದ್ದಾರೆ.

ಮಾತಿನಲ್ಲೇ ಇನ್ನೊಬ್ಬರನ್ನು ನೋಯಿಸುವ ರಾಶಿಯವರು ಇವರು

ಈ ಕಲರ್ ಕಲರ್ ಐಸ್‌ ಕ್ಯೂಬ್ಸ್ ಬಳಸಿ ನಿಮ್ಮ ಮುಖವನ್ನು ಅಂದಗೊಳಿಸಿ

ಕೋಪ ಬಂದರೂ ತಾಳ್ಮೆಯಿಂದ ಇರು ರಾಶಿಯವರು ಇವರು

About The Author