Tuesday, January 14, 2025

Latest Posts

ಸ್ಮೂಥಿ ಕುಡಿಯಿರಿ, ಫಲಿತಾಂಶ ಕಂಡುಕೊಳ್ಳಿರಿ.!

- Advertisement -

ದೇಹದ ತೂಕವನ್ನು ಸರಿಯಾಗಿ ನಿರ್ವಹಿಸದೆ ಇದ್ದರೆ ಅನೇಕ ರೋಗಗಳು ಬರಬಹುದು. ಹಾಗಾಗಿ ಆರೋಗ್ಯ ಮತ್ತು ಸೌಂದರ್ಯದ ಬಗ್ಗೆ ಹೆಚ್ಚು ಗಮನ ವಹಿಸುವುದು ಉತ್ತಮ. ಆದರೆ ಪ್ರೋಟೀನ್‌ ಪೌಡರ್‌ಗಳನ್ನು ಹೆಚ್ಚಾಗಿ ಬಳಸುವುದರ ಬದಲು ಮನೆಯಲ್ಲಿಯೇ ಕೆಲವು ಸ್ಮೂಥಿಗಳನ್ನು ತಯಾರಿಸಿ ಅದನ್ನೇ ಕುಡಿಯಬಹುದು. ಈ ಸ್ಮೂಥಿಗಳು ಸಣ್ಣಗಾಗಲು ಅತಿ ಹೆಚ್ಚು ಪರಿಣಾಮಕಾರಿಯಾಗಿದೆ.

ಯಾವ ರೀತಿಯ ಸ್ಮೂಥಿಗಳನ್ನು ಸೇವನೆ ಮಾಡಿದರೆ ಒಳ್ಳೆಯದು ಎಂಬಿದರ ಬಗ್ಗೆ ಮಾಹಿತಿ ಇಲ್ಲಿದೆ. ಅಮೇರಿಕನ್‌ ಜರ್ನಲ್ ಆಫ್ ಕ್ಲಿನಿಕಲ್‌ ನ್ಯೂಟ್ರಿಷನ್ ನ ಅಧ್ಯಯನದ ಪ್ರಕಾರ, ಹೆಚ್ಚಿನ ಪ್ರೋಟೀನ್‌ ಆಹಾರವು ಆಲೂಗಡ್ಡೆ ಚಿಪ್ಸ್‌ ಮತ್ತು ಚಾಕೊಲೇಟ್‌ನಂತಹ ಅನಾರೋಗ್ಯಕರ ಆಹಾರದ ಕಡುಬಯಕೆಯನ್ನು ತಡೆಯಲು ಸಹಾಯ ಮಾಡುತ್ತದೆ. ಹಾಗೂ ವರ್ಕೌಟ್‌ನ ನಂತರ ದೇಹಕ್ಕೆ ಪ್ರೋಟೀನ್‌ನ ಅಗತ್ಯವಿದೆ.

ಹಾಗಿದ್ರೆ ವರ್ಕೌಟ್‌ ಮಡಿದ ನಂತರ ಏನನ್ನ ಸೇವಿಸಿದರೆ ಬೆಸ್ಟ್ ಎನ್ನುವುದರ ಬಗ್ಗೆ ಡೀಟೇಲ್ಸ್ ಇಲ್ಲದೆ. ಸಣ್ಣಗಾಗಲು ಬಾಳೆ ಹಣ್ಣಿನ ಸ್ಮೂಥಿ ಬೆಸ್ಟ್‌. ಏಕೆಂದರೆ ಇದು ನಿಮ್ಮ ಸ್ನಾಯುಗಳಿಗೆ ಬಲವನ್ನು ನೀಡುತ್ತದೆ ಹಾಗೂ ಹೊಟ್ಟೆಯನ್ನು ತುಂಬಿಸುತ್ತದೆ ಹಾಗಾಗಿ ಬಲೇ ಹಣ್ಣಿನ ಸ್ಮೂಥಿ ಒಳ್ಳೆಯದು.

ಇದಕ್ಕೆ ಬೇಕಾಗುವ ಪದಾರ್ಥಗಳು, ಕಡಲೆಕಾಯಿ, ಬಾಳೆ ಹಣ್ಣು, ಹಾಲು, ಜೇನುತುಪ್ಪ

ಮತ್ತೊಂದು ಸ್ಮೂಥಿ ಅಂದರೆ ಅದು ಸ್ಟ್ರಾಬೆರಿಯ ರಸಭರಿತ ಸ್ಮೂಥಿ. ಇದನ್ನು ಬೆಳಗಿನ ತಿಂಡಿಯನ್ನಾಗಿ ಕುಡಿಯಬಹುದು. ಇದರಿಂದ ನಿಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಅದಷ್ಟೇ ಅಲ್ಲದೆ, ಇದು ರುಚಿಕರವಾಗಿರುತ್ತದೆ.

ಇದಕ್ಕೆ ಬೇಕಾಗುವ ಪದಾರ್ಥಗಳು, ಸ್ಟ್ರಾಬೆರಿ, ಓಟ್‌ ಮೀಲ್‌, ಜೇನುತುಪ್ಪ

ಬರಿ ಹಣ್ಣುಗಳ ಸ್ಮೂಥಿ ಅಷ್ಟೇ ಅಲ್ಲ ಸೊಪ್ಪಿನ ಸ್ಮೂಥಿ ಕೂಡ ಇದೆ. ಯಾವುದಪ್ಪಾ ಆ ಸೊಪ್ಪು ಅಂತೀರಾ, ಅದು ಪಾಲಕ್‌ ಸೊಪ್ಪು. ಇದನ್ನು ತಿನ್ನುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ಇದರಲ್ಲಿ ವಿಟಮಿನ್‌ ಎ, ಸಿ, ಕೆ, ಕಬ್ಬಿಣ, ಪೊಟ್ಯಾಶಿಯಮ್‌ ಮತ್ತು ಫೋಲೇಟ್‌ ಸೇರಿದಂತೆ ಇನ್ನೂ ಅನೇಕ ಪೋಷಕಾಂಶಗಳು ಇದರಲ್ಲಿವೆ. ಹಾಗೂ ಪಾಲಕ್‌ ಸೊಪ್ಪಿನಲ್ಲಿ ನಾರಿನಂಶವಿದ್ದು, ಇದರಿಂದ ಅನೇಕ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯಬಹುದು.

ರುಚಿ ಬೇಕಾದರೆ ಪಾಲಕ್‌ ಸೊಪ್ಪಿನ ಜೊತೆ ಬಾಳೆಹಣ್ಣು, ಕಡಲೆಕಾಯಿ, ಬೆಣ್ಣೆಯನ್ನು ಸೇರಿಸಿ ಸ್ಮೂಥಿಯನ್ನು ತಯಾರಿಸಿಕೊಳ್ಳಬಹುದು. ಇದು ತೂಕವನ್ನು ಇಳಿಸಿಕೊಳ್ಳಲು ಪ್ರೋಟೀನ್‌ ಪಾನೀಯವಾಗಿ ಕೆಲಸ ಮಾಡುತ್ತದೆ. ಏಕೆಂದರೆ ದೀರ್ಘಕಾಲದವರೆಗೆ ಹೊಟ್ಟೆಯನ್ನು ತುಂಬಿಸುವ ಕಾರಣ ಪದೇ ಪದೇ ಹಸಿವಾಗುವುದನ್ನು ನಿಯಂತ್ರಿಸುತ್ತದೆ.

ಪ್ರಕೃತಿ ಪ್ರಭಾಕರ್, ಕರ್ನಾಟಕ ಟಿವಿ, ಸಿನಿಮಾ ಬ್ಯುರೋ

 

 

- Advertisement -

Latest Posts

Don't Miss