district tory
ಬಸ್ ನಲ್ಲಿ ಪ್ರಯಾಣಿಸುತಿದ್ದ ಮಧ್ಯವ್ಯಸನಿ ಕೂರುವ ಸೀಟಿನ ಮೇಲೆ ಮುತ್ರ ವಿಸರ್ಜನೆ
ವಿಜಯಪುರ – ಮಂಗಳೂರು ನಾನ್ ಎಸಿ ಬಸ್ಸಿನಲ್ಲಿ ಪ್ರಯಾಣಿಕ ಮೂತ್ರ ವಿಸರ್ಜನೆ ಮಾಡಿದ ದೂರಿನ ಕುರಿತು. ಮಹಿಳಾ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡಿರುವುದಿಲ್ಲ ಸ್ಪಷ್ಟಪಡಿಸಲಾಗುತ್ತಿದೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಬಸ್ ನಲ್ಲಿಪ್ರಯಾಣಿಸುತ್ತಿದ್ದವರ ಮೇಲೆ ಮೇಲೆ ಮೂತ್ರ ವಿಸರ್ಜನೆ ಮಾಡಿರುವುದು ಸತ್ಯಕ್ಕೇ ದೂರವಾಗಿರುತ್ತದೆ. ಮಾರ್ಗದಲ್ಲಿ ಬಸ್ಸನ್ನು ನಿಗಮವು ನಿಗದಿಪಡಿಸಿದ್ದ ಕಿರೇಸೂರು ಹೋಟೇಲ್ ಬಳಿ ರಾತ್ರಿ : 10:30 ಗಂಟೆ ಸಮಯದಲ್ಲಿ ಊಟ, ತಿಂಡಿ ಮತ್ತು ನೈಸರ್ಗಿಕ ಕರೆಗಾಗಿ ಬಸ್ಸನ್ನು ನಿಲ್ಲಿಸಿ, ಊಟ, ತಿಂಡಿಗಾಗಿ 15-20 ನಿಮಿಷಗಳ ಕಾಲಾವಕಾಶ ಇರುವುದಾಗಿ ನಿರ್ವಾಹಕರು ಪ್ರಯಾಣಿಕರಿಗೆ ತಿಳಿಸಿದ್ದು, ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಎಲ್ಲಾ ಪ್ರಯಾಣಿಕರು ಬಸ್ಸಿನಿಂದ ಕೆಳಗಿಳಿದು ಊಟ / ತಿಂಡಿಗೆ ಹೋಗಿರುತ್ತಾರೆ, ಆದರೆ ಬಸ್ಸನ್ನು ಹತ್ತುವ ಸಮಯದಲ್ಲಿ ಪಾನಮತ್ತ ಪ್ರಯಾಣಿಕ ಆಸನಸಂಖ್ಯೆ : 03ರ ಮೇಲೆ ಮೂತ್ರ ವಿಸರ್ಜನೆ ಮಾಡುವುದನ್ನು ನೋಡಿ , ಚಾಲಕರ ಗಮನಕ್ಕೆ ತಂದಿರುತ್ತಾರೆ. ಕೂಡಲೇ ಚಾಲಕರು, ನಿರ್ವಾಹಕರು ಮತ್ತು ಇತರೆ ಪ್ರಯಾಣಿಕರು ಸದರಿ ಪ್ರಯಾಣಿಕನನ್ನು ಬಸ್ಸಿನಿಂದ ಕೆಳಗಿಳಿಸಿ ಬೈದು ತರಾಟೆಗೆ ತೆಗೆದುಕೊಂಡಿರುತ್ತಾರೆ ಇದು ನಡೆದ ಸತ್ಯ ಸಂಗತಿಯಾಗಿರುತ್ತದೆ.
ಮೂತ್ರ ವಿಸರ್ಜನೆ ಮಾಡಿದ ಸೀಟನ್ನು ಚಾಲಕರು ಮತ್ತು ನಿರ್ವಾಹಕರು ನೀರಿನಿಂದ ತೊಳೆದು ಬಟ್ಟೆಯಿಂದ ಒರೆಸಿ ಸ್ವಚ್ಛ ಮಾಡಿರುತ್ತಾರೆ. ಸದರಿ ಪ್ರಯಾಣಿಕನನ್ನು ಬಸ್ಸಿನಲ್ಲಿ ಪ್ರಯಾಣಿಸಲು ಅವಕಾಶ ನೀಡದೆ ಅಲ್ಲಿಯೇ ಹೋಟೆಲ್ ಬಳಿ ಬಿಟ್ಟು ತಮ್ಮ ಪ್ರಯಾಣವನ್ನು ಮುಂದುವರೆಸಿರುತ್ತಾರೆ. ಆಸನ ಸಂಖ್ಯೆ : 03ರಲ್ಲಿ ಪ್ರಯಾಣಿಸುತ್ತಿದ್ದ ಮಹಿಳಾ ಪ್ರಯಾಣಿಕರನ್ನು ಆಸನ ಸಂಖ್ಯೆ : 09ರಲ್ಲಿ ಪ್ರಯಾಣಿಸಲು ನಿರ್ವಾಹಕರು ಅನುವು ಮಾಡಿಕೊಟ್ಟಿರುತ್ತಾರೆ. ಸದರಿ ಮಹಿಳಾ ಪ್ರಯಾಣಿಕರು ಮತ್ತು ಇತರೆ 06 ಜನ ಪ್ರಯಾಣಿಕರು ಹುಬ್ಬಳ್ಳಿ ಬಸ್ ನಿಲ್ದಾಣದಲ್ಲಿ ಇಳಿದುಕೊಂಡಿರುತ್ತಾರೆ.ಅನಾಗರಿಕವಾಗಿ ಬಸ್ಸಿನಲ್ಲಿ ಮೂತ್ರ ವಿಸರ್ಜನೆ ಮಾಡಿದ ಸಹ ಪ್ರಯಾಣಿಕನ ಕುರಿತು ಮಾಹಿತಿಯನ್ನು ತಿಳಿಯಲು ಪ್ರಯತ್ನಿಸಿದ್ದು, ಸದರಿ ಪ್ರಯಾಣಿಕನು ಏನು ಮಾತನಾಡದೆ ಕೈಮುಗಿದು ತಪ್ಪಾಗಿದೆ, ತಪ್ಪು ಮಾಡಿದ್ದೇ