Bangalore News : ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು (ಅಕ್ಟೋಬರ್ 26) ಬೆಂಗಳೂರಿಗೆ ಆಗಮಿಸಲಿದ್ದಾರೆ. ಐಐಎಂ ಬೆಂಗಳೂರಿನ ಸ್ಥಾಪನಾ ಸುವರ್ಣ ಮಹೋತ್ಸವ ಸಪ್ತಾಹ ಆಚರಣೆಗೆ ಚಾಲನೆ ನೀಡಲಿದ್ದಾರೆ. ಇಂದು ಮಧ್ಯಾಹ್ನ 3.20ಕ್ಕೆ ಬೆಂಗಳೂರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದೆಹಲಿಯಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಬಳಿಕ ಸಂಜೆ 4 ಗಂಟೆಗೆ ಬನ್ನೇರುಘಟ್ಟ ರಸ್ತೆಯಲ್ಲಿ ಐಐಎಂ ಸಂಸ್ಥಾಪನಾ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ನಂತರ 6.05ಕ್ಕೆ ಬೆಂಗಳೂರಿನಿಂದ ಚೆನ್ನೈಗೆ ತೆರಳಲಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸುವರ್ಣ ಮಹೋತ್ಸವ ಆಚರಣೆಗ ಚಾಲನೆ ನೀಡಿ ಮಾತನಾಡಲಿದ್ದಾರೆ. ಅದೇ ಕಾರ್ಯಕ್ರಮದಲ್ಲಿ ಐಐಎಂ ಬಿ ಕ್ಯಾಂಪಸ್ ಕುರಿತ ಪುಸ್ತಕ ಬಿಡುಗಡೆ ಮತ್ತು ಐಐಎಂಬಿ ಕುರಿತಾದ ಸಾಕ್ಷ್ಯಚಿತ್ರವನ್ನೂ ಪ್ರದರ್ಶಿಸಲಾಗುತ್ತದೆ ಎಂದು ಐಐಎಂ ಬೆಂಗಳೂರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಬೆಂಗಳೂರಿನ ಸಂಸ್ಥಾಪನಾ ದಿನ ಅಕ್ಟೋಬರ್ 28 ಆಗಿದ್ದು, ಅಂದು ಕಾರ್ಪೊರೇಟ್ ಎಕ್ಸಲೆನ್ಸ್ ಕುರಿತು ಹಳೆ ವಿದ್ಯಾರ್ಥಿಗಳ ನಾಯಕತ್ವದ ಶೃಂಗ ನಡೆಯಲಿದೆ. ಸಂಸ್ಥೆಯ ಸಭಾಂಗಣದಲ್ಲಿ ನಿರ್ದೇಶಕರ ಸಂಸ್ಥಾಪನಾ ದಿನದ ಭಾಷಣ ಇರಲಿದೆ.
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಬೆಂಗಳೂರಿನ ಸಂಸ್ಥಾಪನಾ ದಿನದ ಸುವರ್ಣ ಮಹೋತ್ಸವದ ನಿಮಿತ್ತವಾಗಿ ಐಐಎಂ ಬಿ ಯ ಪಿಜಿಪಿ ಹಳೆಯ ವಿದ್ಯಾರ್ಥಿ ಮತ್ತು ಪ್ರಸಿದ್ಧ ಶಾಸ್ತ್ರೀಯ ಗಾಯಕಿ ಮಾನಸಿ ಪ್ರಸಾದ್ ಮತ್ತು ಅವರ ತಂಡವು ‘ಸುವರ್ಣ ಸಂಗೀತ’ವನ್ನು ಪ್ರಸ್ತುತಪಡಿಸಲಿದೆ. 50-ಸದಸ್ಯರ ಮೇಳದಿಂದ ಸಂಗೀತ ಪ್ರಸ್ತುತಿ, ಭಾರತೀಯ ಶಾಸ್ತ್ರೀಯದಿಂದ ಪಾಶ್ಚಾತ್ಯ ಶಾಸ್ತ್ರೀಯವರೆಗೆ ಸಮ್ಮಿಳನ ಮತ್ತು ವಿಶ್ವ ಸಂಗೀತದ ಅಂಶಗಳೊಂದಿಗೆ ವ್ಯಾಪಕ ಶ್ರೇಣಿಯ ಸಂಗೀತ ಪ್ರಕಾರಗಳನ್ನು ಒಟ್ಟುಗೂಡಿಸುತ್ತದೆ ಎಂದು ಐಐಎಂಬಿ ಹೇಳಿದೆ.
Dhananjay : ಹುಲಿ ಉಗುರು ಪ್ರಕರಣ : ಧನಂಜಯ್ ಗುರೂಜಿ ಮನೆ ಮೇಲೆ ಅರಣ್ಯಾಧಿಕಾರಿಗಳ ರೇಡ್..!
Devara Gudda : ಮಹಿಳೆಯ ಹಸ್ತಕ್ಷೇಪದಿಂದ ಇಕ್ಕಟ್ಟಿಗೆ ಸಿಲುಕಲಿದೆ ಸರ್ಕಾರ ; ದೇವರಗುಡ್ಡ ಕಾರ್ಣಿಕ ನುಡಿ