ನವದೆಹಲಿ: ರಾಷ್ಟ್ರಪತಿ ಆಯ್ಕೆಗೆ ನಡೆದಿದ್ದಂತ ಚುನಾವಣೆಯ ಮತಏಣಿಕೆ ಕಾರ್ಯ ಇಂದು ಆರಂಭಗೊಂಡಿದೆ. ಮೊದಲ ಸುತ್ತಿನಲ್ಲಿಯೇ ಎನ್ ಡಿಎ ಬೆಂಬಲಿತ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ಮುನ್ನಡೆ ಸಾಧಿಸಿದ್ದಾರೆ.
ಇದೀಗ ಆರಂಭಗೊಂಡಿರುವಂತ ರಾಷ್ಟ್ರಪತಿ ಚುನಾವಣೆಯ ಮತಏಣಿಕೆಯ ಮೊದಲ ಸುತ್ತಿನಲ್ಲಿ ಮುರ್ಮು ಮುನ್ನಡೆ ಸಾಧಿಸಿದ್ದಾರೆ. ಅವರು 540 ಮತಗಳನ್ನು ಪಡೆದಿದ್ದರೇ, ಅವರ ಪ್ರತಿಸ್ಪರ್ಧಿ ಸಿನ್ಹಾ ಅವರು 208 ಮತಗಳನ್ನು ಪಡೆದಿದ್ದಾರೆ.




