ಬೆಂಗಳೂರು: ಡಾ. ರಾಜ್ ಕುಟುಂಬದ ಮೇಲೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಹೇಳಿಕೆ ನೀಡಿದ ಹಿನ್ನಲೆ ಡಾ. ರಾಜ್ ಕುಮಾರ್ ಅಭಿಮಾನಿಗಳ ಬಳಗ ಹಾಗೂ ಎನ್.ಆರ್.ರಮೇಶ್ ವತಿಯಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಫಿಲಂ ಚೇಂಬರ್ ಗೆ ದೂರು ನೀಡಲು ಅಪ್ಪು ಫ್ಯಾನ್ಸ್ ಆಗಮಿಸಿದ್ದಾರೆ. ಡಾ ರಾಜ್ ಕುಮಾರ್ ಕುಟುಂಬ ಪರವಾಗಿ ನ್ಯಾಯ ಬೇಕು ಎಂದು ಘೋಷಣೆ ಕೂಗುತ್ತಾ ಫ್ಯಾನ್ಸ್ ಸಿಡಿದೆದ್ದಿದ್ದಾರೆ. ರಾಜ್ ಕುಮಾರ್ ಕುಟುಂಬದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಗೇಡಿಗಳು ಟ್ರೋಲ್ ಮಾಡಿದ್ದರು. ಅವರನ್ನು ಗಡಿಪಾರು ಮಾಡಬೇಕು, ಬಂಧಿಸಬೇಕು ಎಂದು ಕನ್ನಡ ಪರ ಸಂಘಟನೆಗಳು ಒತ್ತಾಯಿಸುತ್ತಿದ್ದಾರೆ.
ಪ್ರಧಾನಿ ಮೋದಿ ಅವರ ತಾಯಿ ಆರೋಗ್ಯದಲ್ಲಿ ಚೇತರಿಕೆ
ಇನ್ನು ಪ್ರತಿಭಟನೆಯಲ್ಲಿ 50ಕ್ಕೂ ಹೆಚ್ಚು ಸಂಘಟನೆಗಳ ಸೇರಿದ್ದು, ಯಾರೇ ಆಗಲಿ ಡಾ. ರಾಜ್ ಕುಮಾರ್ ಕುಟುಂಬಕ್ಕೆ ಗೌರವ ಕೊಡಬೇಕು ಎಂದು ಹೇಳುತ್ತಿದ್ದಾರೆ. ಈಗಾಗುತ್ತಿರುವ ಎಲ್ಲ ಬೆಳವಣಿಗೆಗಳನ್ನು ಕೂಡಲೇ ನಿಲ್ಲಿಸಿ, ಇಲ್ಲವಾದರೆ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡುತ್ತಿದ್ದಾರೆ. ಜ.26ಕ್ಕೆ ಬೆಂಗಳೂರು ಬಂದ್ ಮಾಡುತ್ತೇವೆ ಎಲ್ಲವನ್ನು ಇಲ್ಲಿಗೆ ಬಿಟ್ಟುಬಿಡಿ ಇಲ್ಲವಾದಲ್ಲಿ ಬೆಂಗಳೂರು ಬಂದ್ ಮಾಡುತ್ತೇವೆ ಎಂದು ಎಚ್ಚರಿಕೆ ನೀನಿಡುತ್ತಿದ್ದಾರೆ.
ಪ್ರಾಂತ್ಯವಾರು ಯಾವ ಪಕ್ಷಕ್ಕೆ ಎಷ್ಟು ಸೀಟು.? ಕಿತ್ತೂರು ಕರ್ನಾಟಕ
ಫಿಲಂ ಚೇಂಬರ್ ಮುಂದೆ ನಟ ಸುಂದರ್ ರಾಜ್ ಅವರು ಮಾತನಾಡಿದ್ದು, ರಾಜ್ ಕುಟುಂಬಕ್ಕೆ ರಾಜ್ಯದಲ್ಲಿ ಬಹಳ ಗೌರವ ಇದೆ. ರಾಜ್ ಕುಮಾರ್ ಅಂದ್ರೆ ಕನ್ನಡ, ಕನ್ನಡ ಎಂದ್ರೆ ರಾಜ್ ಕುಮಾರ್. ದಯವಿಟ್ಟು ಎಲ್ಲರೂ ತಾಳ್ಮೆಯಿಂದ ಇರಿ ಎಂದು ಮನವಿ ಮಾಡಿದ್ದಾರೆ.
ಬೈಯ್ಯಪ್ಪನಹಳ್ಳಿ-ಚಿಕ್ಕಬಾಣಾವರ ಉಪನಗರ ರೈಲು ಯೋಜನೆ: 268 ಮರ ಕಡಿಯಲು ಬಿಬಿಎಂಪಿ
ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇ ಪರಿಶೀಲನೆಗೆ ಆಗಮಿಸಲಿರುವ ನಿತಿನ್ ಗಡ್ಕರಿ