- Advertisement -
ಬೆಂಗಳೂರು: ಡ್ರಗ್ಸ್ ಸೇವನೆಯ ಬಗ್ಗೆ ಮಾಹಿತಿ ತಿಳಿದು ಎನ್ ಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಉತ್ತರ ಭಾರತದ ಮೂವರು ಯುವತಿಯರನ್ನು ವಶಕ್ಕೆ ಪಡೆಯಲಾಗಿದೆ. ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯ ಅಪಾರ್ಟ್ ಮೆಂಟ್ ಮೇಲೆ ಡ್ರಗ್ಸ್ ಸೇವನೆಯ ಖಚಿತ ಮಾಹಿತಿ ತಿಳಿದು ಎನ್ ಸಿಬಿ ಅಧಿಕಾರಿಗಳು ದಾಳೆ ನಡೆಸಿದ್ದಾರೆ. ಓರ್ವ ಯುವತಿ ಡಾರ್ಕ್ ವೆಬ್ ಮೂಲಕ ಡ್ರಗ್ಸ್ ತರಿಸಿಕೊಳ್ಳುತ್ತಿದ್ದಳು. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯ ಮೇಲೆ ಡ್ರಗ್ಸ್ ಡೀಲ್ ಶಂಕೆ ಇದ್ದು, ಹೆಚ್ಚಿನ ತನಿಖೆಗಾಗಿ ಯುವತಿಯನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ಮೂವರು ಯುವತಿಯರನ್ನು ಎನ್ ಸಿಬಿ ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ.
ಪ್ರಮೋದ್ ನಟನೆಯ ‘ಬಾಂಡ್ ರವಿ’ ಡಿಸೆಂಬರ್ 9ಕ್ಕೆ ರಿಲೀಸ್
‘ನಾನೇನು ಜ್ಯೋತಿಷಿ ಅಲ್ಲಪ್ಪ, ಪಾಪ ಕುಮಾರಸ್ವಾಮಿ ಅವರು ಹೇಳಿದ್ದಾರೆ..’
- Advertisement -