Thursday, April 17, 2025

Latest Posts

Bengaluru ; ಬಯಲಾಯ್ತು ಔಷಧಿ ಮಾಫಿಯಾ ; ರಾಜ್ಯದಲ್ಲಿ 400 ಕಳಪೆ ಔಷಧಿ!

- Advertisement -

ಬಳ್ಳಾರಿಯಲ್ಲಿ ಇತ್ತೀಚೆಗೆ ಸಂಭವಿಸಿದ ಬಾಣಂತಿಯರ ಸರಣಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ‘ಪಶ್ಚಿಮ್ ಬಂಗಾ ಫಾರ್ಮಾಸ್ಯುಟಿಕಲ್ಸ್’ ಕಂಪನಿ ಪೂರೈಸಿದ್ದ ‘ರಿಂಗರ್ ಲ್ಯಾಕ್ಟೇಟ್’ ಐವಿ ದ್ರಾವಣವನ್ನು ರಾಜ್ಯದಲ್ಲಿ ನಿಷೇಧ ಮಾಡಲಾಗಿದೆ. ರಾಜ್ಯದ ಔಷಧ ನಿಯಂತ್ರಕರು ನಡೆಸಿದ ಪರೀಕ್ಷೆಯಲ್ಲಿ ಈ ದ್ರಾವಣದ 22 ಬ್ಯಾಚ್‌ಗಳು ಪ್ರಮಾಣಿತ ಗುಣಮಟ್ಟ ಹೊಂದಿಲ್ಲ ಎಂಬ ವರದಿ ಬಂದಿತ್ತು. ಇದರಿಂದಾಗಿ ಕಂಪನಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯದ ಒಂಬತ್ತು ಜಿಲ್ಲಾ ವೃತ್ತಗಳಲ್ಲಿ ಹೆಚ್ಚುವರಿ ಔಷಧ ನಿಯಂತ್ರಕರು ದೂರು ದಾಖಲಿಸಿಕೊಂಡಿದ್ದಾರೆ.ಇದೇ ರೀತಿ, ರಾಜ್ಯ ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳು ವಿವಿಧ ಔಷಧಗಳ ಮಾದರಿಗಳನ್ನು ಸಂಗ್ರಹಿಸಿ, ಪ್ರಯೋಗಾಲಯಗಳಲ್ಲಿ ಗುಣಮಟ್ಟ ಪರೀಕ್ಷೆಗೆ ಒಳಪಡಿಸಿದ್ದರು. ಹಲವು ಔಷಧಗಳು ಪ್ರಮಾಣಿತ ಗುಣಮಟ್ಟ ಹೊಂದಿಲ್ಲ ಎನ್ನುವುದು ಪರೀಕ್ಷಾ ವರದಿಗಳಿಂದ ಖಚಿತಪಟ್ಟಿದೆ.

 

ರಾಜ್ಯ ಔಷಧ ನಿಯಂತ್ರಣ ಇಲಾಖೆ ನಡೆಸಿದ ಪರೀಕ್ಷೆಯಲ್ಲಿ 400 ಔಷಧಿಗಳ ಗುಣಮಟ್ಟ ಕಳಪೆ ಎಂಬುದು ಬಹಿರಂಗವಾಗಿದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಔಷಧಿಗಳ ಗುಣಮಟ್ಟ ಪರೀಕ್ಷೆ ಮಾಡಲಾಗಿತ್ತು. ರಾಜ್ಯದ ಆಸ್ಪತ್ರೆಗಳು, ನರ್ಸಿಂಗ್ ಹೋಂಗಳು ಮತ್ತು ಕ್ಲಿನಿಕ್‌ಗಳಲ್ಲಿ ಬಳಸುವ ಔಷಧಿಗಳ ಗುಣಮಟ್ಟ ಪರೀಕ್ಷಿಸಲಾಗಿತ್ತು.2023-24ನೇ ಸಾಲಿನಲ್ಲಿ 7,420 ಔಷಧಿಗಳ ಮಾದರಿಗಳನ್ನ ಪರೀಕ್ಷೆಗೆ ಒಳಪಡಿಸಲಾಗಿದೆ. 285 ಔಷಧಿಗಳು ಪ್ರಮಾಣಿತ ಗುಣಮಟ್ಟ ಇಲ್ಲ ಅಂತಾ ವರದಿಯಲ್ಲಿ ತಿಳಿಸಲಾಗಿದೆ.2024-25ನೇ ಸಾಲಿನಲ್ಲಿ 3,636 ಔಷಧಿಗಳ ಪರೀಕ್ಷೆಗೆ ಒಳಪಡಿಸಲಾಗಿದೆ. ಅದರಲ್ಲಿ 177 ಔಷಧಿಗಳು ಪ್ರಮಾಣಿತ ಗುಣಮಟ್ಟ ಇಲ್ಲ ಅಂತಾ ವರದಿ ಬಂದಿದೆ.

ಔಷಧಿಗಳನ್ನ ಮಾರುಕಟ್ಟೆಗೆ ಸರಬರಾಜು ಮಾಡುವ ಮುನ್ನ ಕಂಪನಿಗಳು ಪ್ರಮಾಣಿತ ಗುಣಮಟ್ಟ ಪರೀಕ್ಷೆ ಮಾಡಿಸಬೇಕು.ಆದರೆ, ಕೆಲ ಕಂಪನಿಗಳು ಪರೀಕ್ಷೆಗೆ ಒಳಪಡಿಸದೇ ನಿರ್ಲಕ್ಷ್ಯ ತೋರಿವೆ. ಔಷಧದ ಪ್ರಮಾಣಿತ ಗುಣಮಟ್ಟ ಹೊಂದಿರದ ಕಂಪನಿಗಳ ವಿರುದ್ಧ ಕ್ರಮಕ್ಕೆ ಚಿಂತನೆ ನಡೆಸಲಾಗಿದೆ.

- Advertisement -

Latest Posts

Don't Miss