www.karnatakatv.net : ಹುಬ್ಬಳ್ಳಿ: ಆ ನಗರದಲ್ಲಿ ಲಾಕ್ ಡೌನ್ ಓಪನ್ ಆಗ್ತಿದ್ದಂತೆ ಕ್ರೈಂ ರೇಟ್ ಹೆಚ್ಚಾಗುತ್ತಿದೆ. ಒಂದೆಡೆ ರೌಡಿ ಶೀಟರ್ ಗಳು ಮಚ್ಚು ಲಾಂಗು ಹಿಡಿದುಕೊಂಡು ಅಬ್ಬರಿಸುತ್ತಿದ್ದರೇ, ಮತ್ತೊಂದು ಕಡೆ ಇನ್ನೂ ಕಾಲೇಜು ಮುಗಿಸಿ ಬಂದಿರೋ ಯುವ ಸಮೂಹ ಚಾಕು ಚೂರಿ ಹಿಡಿದುಕೊಂಡು ಕೊಲೆ ಮಾಡುವ ಹಂತಕ್ಕೆ ಹೋಗಿದೆ. ಅದು ಸದ್ಯ ಇಷ್ಟೆಲ್ಲಾ ಆಗುತ್ತಿರುವುದು ಗಾಂಜಾ ಗುಂಗಲ್ಲಿ ಎನ್ನೋದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

ಹೌದು…ಹಿಂದೆ ಹುಬ್ಬಳ್ಳಿಯಲ್ಲಿ ಗ್ಯಾಂಗ್ ವಾರ್ ಗಳು ನಡೆಯುತ್ತಿದ್ದವು, ರೌಡಿಗಳ ಅಟ್ಟಹಾಸವೂ ಇತ್ತು. ಆದರೆ, ರೌಡಿಗಳು ಇದೀಗ ಬಹುತೇಕ ತೆರೆಮರೆಗೆ ಸರಿದಿದ್ದಾರೆ. ಹಳೆಯ ಹೆಸರಿನಲ್ಲಿಯೇ ರಿಯಲ್ ಎಸ್ಟೇಟ್ ಮಾಫಿಯಾಕ್ಕೆ ಇಳಿದಿದ್ದಾರೆ. ಆದರೀಗ ಹದಿಹರೆಯದವರ ಕೈಯಲ್ಲಿ ಮಚ್ಚು ಲಾಂಗು ಸಿಗುತ್ತಿರುವುದು ಗಂಭೀರ, ಕಳೆದವಾರ ವಾಣಿಜ್ಯ ನಗರಿಯಲ್ಲಿ ನಡೆದ ಆ ಎರಡು ಕೊಲೆಗಳನ್ನೇ ನೋಡಿದರೆ ಅಲ್ಲಿ ಕೊಲೆಯ ಉದ್ದೇಶ ಅಂಥದ್ದೇನೂ ಮಹಾ ಇದ್ದಿರಲಿಲ್ಲ ಅನ್ಸುತ್ತೆ. ಒಂದ್ಕೆಡೆ ಕಾರಿನ ಗಾಜು ಒಡೆದರು ಎನ್ನುವ ಕಾರಣಕ್ಕಾಗಿಯೇ ಜಗಳ ನಡೆದು ಅದು ಭೀಕರ ಕೊಲೆಯಲ್ಲಿ ಅಂತ್ಯಗೊಂಡಿತ್ತು. ಕೊಲೆಯಾದವ ಬಿಜೆಪಿ ಮುಖಂಡ ಈಶ್ವರಗೌಡ ಅವರ ಸಂಬಂಧಿ ಎನ್ನೋದ್ರಿಂದ ಸಾಕಷ್ಟು ಸುದ್ದಿಯಾಗಿತ್ತು. ಸದ್ಯ ಇದೇ ಕೊಲೆ ಪ್ರಕರಣ ಹಲವು ಅನುಮಾನಗಳಿಗೆ ಕಾರಣವಾಗಿದೆ. ಕೊಲೆ ಮಾಡಿದ ಹುಡುಗರು ಗಾಂಜಾದಂತಹ ಚಟಕ್ಕೆ ಅಂಟಿಕೊಂಡಿದ್ದಾರಾ ಎನ್ನೋ ಅನುಮಾನ ಕಾಡುತ್ತಿದೆ. ಮತ್ತಿನಲ್ಲಿಯೇ ಕೊಲೆ ಮಾಡಲಾಗಿದೆ ಎನ್ನಲಾಗುತ್ತಿದೆ. ಅಭಿಷೇಕಗೌಡ 18ರ ಆಸುಪಾಸಿನ ಹುಡುಗ, ಆದರೆ ಆತನ್ನ ಕೊಲೆ ಮಾಡಿದ ಪ್ರದೀಪ, ಕುಮಾರ್ ಗಾಂಜಾಗುಂಗಲ್ಲಿದ್ದರು ಎನ್ನುವ ಮಾಹಿತಿ ಪೊಲೀಸರಿಂದ ತಿಳಿದು ಬಂದಿದ್ದು, ಸದ್ಯ ಇಲ್ಲಿನ ಜನರನ್ನು ಮತ್ತಷ್ಟು ಆತಂಕ್ಕಿಡು ಮಾಡಿದೆ.

ಈ ಹಿಂದೇಯೂ ಅದೇ ಏರಿಯಾದಲ್ಲಿ ಯುವಕರಿಬ್ಬರ ಡಬಲ್ ಮರ್ಡರ್ ನಡೆದಿತ್ತು. ಈ ಕೊಲೆ ಮಾಡುವವರೂ ಸಹ ಗಾಂಜಾ ಸೇವಿಸಿದ್ದರು ಎನ್ನಲಾಗಿತ್ತು. ಸ್ವತಃ ಈ ವಿಚಾರವಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸಿಡಿಮಿಡಿಗೊಂಡಿದ್ದರು. ಗಾಂಜಾದಂಥದ ಪದಾರ್ಥಗಳು ಯುವಕರ ಕೈಗೆ ಹೇಗೆ ಸಿಗುತ್ತಿದೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಗೃಹ ಸಚಿವರು ಅಬ್ಬರಿಸಿದರು ಎನ್ನುವ ಕಾರಣಕ್ಕೆ ಅಧಿಕಾರಿಗಳು ಜಿದ್ದಿಗೆ ಬಿದ್ದವರಂತೆ ದಾಳಿ ನಡೆಸಿದರು. ಒಂದರ ಮೇಲೊಂದರಂತೆ ದಾಳಿ ನಡೆದು ಅಪಾರ ಪ್ರಮಾಣದಲ್ಲಿ ಗಾಂಜಾ ಇತ್ಯಾದಿ ನಶೆಯ ಪದಾರ್ಥ ವಶಕ್ಕೆ ಪಡೆದು ಆರೋಪಿಗಳನ್ನು ಕಂಬಿಯ ಹಿಂದೆ ತಳ್ಳಲಾಗಿತ್ತು. ಆದರೆ, ಇದಾದ ಬಳಿಕ ಗಾಂಜಾ ಹುಬ್ಬಳ್ಳಿ ಪ್ರವೇಶಿಸುತ್ತಿಲ್ಲ ಎನ್ನುವ ರೀತಿಯಲ್ಲಿ ಪೊಲೀಸರು ಕೈ ಕಟ್ಟಿ ಕುಳಿತಿದ್ದಾರೆ ಎನ್ನುವ ಆರೋಪ ಕೇಳೀ ಬರುತ್ತಿದೆ ಈ ಬಗ್ಗೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರನ್ನ ಕೇಳಿದರೆ ಹೇಳೋದು ಹೀಗೆ.
ಇನ್ನೂ ಜುಲೈ 08ರಂದು ಲ್ಯಾಂಡ್ ಡೀಲಿಂಗ್ ವಿಚಾರವಾಗಿ ರೌಡಿಗಳಾದ ಅಲ್ತಾಫ್ ಬೇಪಾರಿ, ಮುನ್ನಾ ಬೇಪಾರಿ ಗ್ಯಾಂಗ್‍ನಿಂದ ವೀರೇಶ ಹೆಗಡಾಳ ಎಂಬಾತನ ಕೊಲೆ ಮಾಡಲಾಗಿದೆ. ಅಲ್ಲೂ ಗಾಂಜಾ ಘಾಟು ಇತ್ತು ಎನ್ನಲಾಗುತ್ತಿದೆ, ಯಾಕೆಂದರೆ ನಟೋರಿಯಸ್ ರೌಡಿ ಶೀಟರ್ ಅಲ್ತಾಫ್ ಗಾಂಜಾಗೆ ಸಿಗೋದು ಅಷ್ಟು ಕಷ್ಟವೆನಲ್ಲಾ, ಹೀಗಾಗೇ ಸದ್ಯ ಅವಳಿನಗರಕ್ಕೆ ಹೇರಳವಾಗಿ ಮಾದಕ ದ್ರವ್ಯದ ನಂಟಿದೇಯಾ ಎನ್ನುವ ಅನುಮಾನ ಕಾಡುತ್ತಿರೋದಂತು ಸುಳ್ಳಲ್ಲ.




