Thursday, December 12, 2024

Latest Posts

35 ಲಕ್ಷ ಮೌಲ್ಯದ ಡ್ರಗ್ಸ್ ವಶ..!

- Advertisement -

www.karnatakatv.net :ಬೆಂಗಳೂರು: ರಾಜಸ್ಥಾನ ಮೂಲದ ಡ್ರಗ್ ಪೆಡ್ಲರ್ ನ್ನು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

ಬೆಂಗಳೂರಿನಲ್ಲಿ ಸ್ಟೀಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ರಾಜಸ್ಥಾನ ಮೂಲದ ವ್ಯಕ್ತಿಯೊಬ್ಬ 1 ವರ್ಷದಿಂದ ತಮ್ಮ ಕೆಲಸವನ್ನು ಬಿಟ್ಟು ಡ್ರಗ್ಸ್ ಸಪ್ಲೈ ಮಾಡ್ತಿದ್ದ ಎಂದು ಮಾಹಿತಿ ತಿಳಿದು ಪೊಲೀಸರು ಕೂಡಲೇ ಆರೋಪಿನ್ನು ಬಂಧಿಸಲಾಗಿದೆ. ಆ ವ್ಯಕ್ತಿಯಿಂದ 35 ಲಕ್ಷ ಮೌಲ್ಯದ 440 ಗ್ರಾಂ ಹೆರಾಯಿನ್ ಜಪ್ತಿಮಾಡಲಾಗಿದೆ.

ಆತ ರಾಜಸ್ಥಾನದಿಂದ ಹೆರಾಯಿನ್ ತಂದು ಇಲ್ಲಿ ಮಾರಾಟಮಾಡುತ್ತಿದ್ದು, ಆರೋಪಿಯಿಂದ 35 ಲಕ್ಷ ಮೌಲ್ಯದ ಡ್ರಗ್ಸ್, 440 ಗ್ರಾಂ ಹೆರಾಯಿನ್, ಬೈಕ್, ಮೊಬೈಲ್ ಜಪ್ತಿಮಾಡಲಾಗಿದೆ. ಅಕ್ರಮ ಹಣ ಸಂಪಾದನೆಗೆ ಡ್ರಗ್ಸ್ ದಂಧೆಕೋರರ ಜತೆ ಸಂಪರ್ಕವನ್ನು ಇಟ್ಟುಕೊಂಡಿದ್ದ, ಹೆಬ್ಬಗೋಡಿ ಪೊಲೀಸರು ಆರೋಪಿ ವಿಚಾರಣೆ ಮಾಡ್ತಿದ್ದಾರೆ ಎಂದು ಬೆಂಗಳೂರು ಕೇಂದ್ರ ವಲಯ ಐಜಿಪಿ ಚಂದ್ರಶೇಖರ್ ಹೇಳಿಕೆ ನೀಡಿದ್ದಾರೆ.

ಈ ಡ್ರಗ್ ಹಣದಿಂದ ಸಂಪಾದಿಸಿದ ಆರೋಪಿಯ ಆಸ್ತಿಯನ್ನು ಜಪ್ತಿ ಮಾಡಲಾಗಿದೆ. ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಡ್ರಗ್ ಕೇಸ್ ನಲ್ಲಿ ಆರೋಪಿಯ ಆಸ್ತಿಯನ್ನು ಜಪ್ತಿ ಮಾಡಲಾಗಿದ್ದು, ಆದೇಶದ ಪ್ರಕಾರ ಆರೋಪಿ ಅಂಜಯ್ ಕುಮಾರ್ ಅಕ್ರಮ ಚರ ಮತ್ತು ಸ್ಥಿರ ಆಸ್ತಿಗಳ ಮೇಲೆ ಯಾವುದೇ ವಹಿವಾಟು ನಡೆಸುವಂತಿಲ್ಲ. ವಿಲೇವಾರಿ, ಪರಬಾರೆ ಯಾವುದೇ ಉದ್ದೇಶಕ್ಕೆ ಬಳಸಿಕೊಳ್ಳುವಂತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕರ್ನಾಟಕ ಟಿವಿ- ಬೆಂಗಳೂರು


- Advertisement -

Latest Posts

Don't Miss