ದುಬೈ ದೊರೆ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತಮ್ ತಮ್ಮ 6ನೇ ಪತ್ನಿ ಪ್ರಿನ್ಸೆಸ್ ಹಯಾ ಬಿನ್ ಅಲ್ ಹುಸ್ಸೇನ್‌ಗೆ ಡಿವೋರ್ಸ್ ನೀಡಿದ್ದಾರೆ. ಈ ಬಗ್ಗೆ ಲಂಡನ್ ನ್ಯಾಯಾಲಯದಲ್ಲಿ ವಾದ ನಡೆದಿದ್ದು, ಹಯಾ ಮತ್ತು ಆಕೆಯ ಇಬ್ಬರು ಮಕ್ಕಳಿಗೆ ಜೀವನಾಂಶವಾಗಿ ದುಬೈ ದೊರೆ, 5,500 ಕೋಟಿ ರೂಪಾಯಿ ನೀಡಬೇಕೆಂದು ಲಂಡನ್ ಹೈಕೋರ್ಟ್ ಆದೇಶ ನೀಡಿದೆ.
ಶೇಖ್ ಮೊಹಮ್ಮದ್‌ಗೆ 72 ವರ್ಷ ವಯಸ್ಸಾಗಿದೆ. ಈ ಇಳಿ ವಯಸ್ಸಿನಲ್ಲಿ ಈತ ತನ್ನ 6ನೇ ಪತ್ನಿಗೆ ವಿಚ್ಛೆದನ ನೀಡುತ್ತಿದ್ದಾನೆ. ಹೀಗಾಗಿ ಇನ್ನು ಮೂರು ತಿಂಗಳೊಳಗೆ ಪತ್ನಿಗೆ 5,500 ಕೋಟಿ ಜೀವನಾಂಶ ನೀಡಬೇಕೆಂದು ಕೋರ್ಟ್ ಸೂಚಿಸಿದೆ. ಇದು ಲಂಡನ್ ಕೋರ್ಟ್ ಸೂಚಿಸಿದ ಹೆಚ್ಚಿನ ಜೀವನಾಂಶವಾಗಿದೆ. ಇಲ್ಲಿಯವರೆಗೂ ಕೋರ್ಟ್ ಯಾರಿಗೂ ಇಷ್ಟೊಂದು ಹೆಚ್ಚಿನ ಜೀವನಾಂಶ ನೀಡಬೇಕೆಂದು ಸೂಚಿಸಿಲ್ಲ.
ಅಷ್ಟಕ್ಕೂ ದುಬೈ ದೊರೆ 6ನೇ ಪತ್ನಿಗೆ ವಿಚ್ಛೆದನ ನೀಡುತ್ತಿರುವುದಕ್ಕೆ ಕಾರಣವಾದ್ರೂ ಏನು ಅಂದ್ರೆ, ಹಯಾ ಈ ಶೇಖ್ ಮೊಹಮ್ಮದ್‌ನ ಬಾಡಿಗಾರ್ಡ್ ಜೊತೆ ಸಂಬಂಧವಿರಿಸಿಕೊಂಡಿದ್ದಳಂತೆ. ಈ ವಿಷಯ ಹೊರಬಿದ್ದ ಮೇಲೆ ಆಕ್ರೋಶಗೊಂಡ ಶೇಖ್, ಪತ್ನಿಗೆ ಡಿವೋರ್ಸ್ ನೀಡೋಕ್ಕೆ ನಿರ್ಧರಿಸಿದನಂತೆ.