Monday, April 14, 2025

Latest Posts

ಇನ್‌ಸ್ಟಾಗ್ರಾಮ್‌ನಲ್ಲಿಯೇ ಪತಿಗೆ ತಲಾಖ್ ನೀಡಿದ ದುಬೈ ರಾಜಕುಮಾರಿ

- Advertisement -

International News: ದುಬೈ ರಾಜಕುಮಾರಿ ತನ್ನ ಪತಿಗೆ ಇನ್‌ಸ್ಟಾಗ್ರಾಮ್‌ನಲ್ಲಿಯೇ ಡಿವೋರ್ಸ್ ನೀಡಿದ್ದಾರೆ. ನಿಮಗೆ ಬೇರೆ ಜೊತೆಗಾರ್ತಿ ಸಿಕ್ಕಿದ್ದಾರೆಂಬ ವಿಚಾರ ಗೊತ್ತಾದ ಕಾರಣ, ನಾನು ನಮ್ಮ ವೈವಾಹಿಕ ಜೀವನವನ್ನು ಇಲ್ಲೇ ಕೊನೆಗೊಳಿಸುತ್ತಿದ್ದೇನೆ. ತಲಾಖ್, ತಲಾಖ್, ತಲಾಖ್ ಎಂದು ಇಂಗ್ಲೀಷಿನಲ್ಲಿ ಡಿವೋರ್ಸ್ ಘೋಷಣೆ ಮಾಡಿದ್ದಾರೆ.

ದುಬೈ ರಾಜಕುಮಾರಿ ಶೈಖಾ ಮೋಹ್ರಾ ಮೊಹಮ್ಮದ್ ಅವರು ತಮ್ಮ ಪತಿಯಾಗಿದ್ದ ಶೇಖ್ ಮನ್‌ಬಿನ್ ಮೊಹಮ್ಮದ್ ಅವರಿಗೆ ಈ ರೀತಿ ಡಿವೋರ್ಸ್ ನೀಡಿದ್ದಾರೆ. ಇಸ್ಲಾಂ ಧರ್ಮದಲ್ಲಿ, ಅದರಲ್ಲೂ ಹೊರ ದೇಶಗಳಲ್ಲಿ ತ್ರಿವಳಿ ತಲಾಖ್ ಇನ್ನೂ ಜಾರಿಯಲ್ಲಿದೆ. ಅದರಲ್ಲೂ ಕೆಲವು ಗಂಡಸರು ನಿಂತಲ್ಲೇ ಮೂರು ಬಾರಿ ತಲಾಖ್ ಅಂತಾ ಹೇಳಿ, ಎಷ್ಟೋ ಹೆಣ್ಣು ಮಕ್ಕಳ ಬಾಳನ್ನು ಹಾಳು ಮಾಡಿದ್ದಾರೆ.

ಆದರೆ ಹೆಚ್ಚಾಗಿ ಇದೇ ಮೊದಲ ಬಾರಿ ಇರಬೇಕು, ಹೆಣ್ಣೊಬ್ಬಳು ಈ ರೀತಿ ಮೂರು ಬಾರಿ ತಲಾಖ್ ಅಂತಾ ಡಿವೋರ್ಸ್ ನೀಡಿರುವುದು. ಇನ್ನು ಇವರಿಬ್ಬರು ಇನ್‌ಸ್ಟಾಗ್ರಾಮ್‌ನಲ್ಲಿ ಪರಸ್ಪರ ಅನ್‌ಫಾಲೋ ಮಾಡಿದ್ದಾರೆ. ಇವರಿಬ್ಬರು 2023ರಲ್ಲಿ ವಿವಾಹವಾಗಿದ್ದರು. ರಾಜಕುಮಾರಿ ತನ್ನ ಸೌಂದರ್‌ಯದಿಂದಲೇ ಹೆಸರುವಾಸಿಯಾಗಿದ್ದರು. ವಿವಾಹವಾಗಿ ಒಂದು ವರ್ಷದಲ್ಲಿ ಇವರಿಗೆ ಹೆಣ್ಣು ಮಗು ಜನಿಸಿತ್ತು. ಇದೀಗ ಒಂದೇ ವರ್ಷಕ್ಕೆ ಮದುವೆ ಮುರಿದು ಬಿದ್ದಿದೆ.

- Advertisement -

Latest Posts

Don't Miss