www.karnatakatv.net ದುನಿಯಾ ವಿಜಯ್ ಅವರ ತಾಯಿಯ ಆರೋಗ್ಯ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಕೊರೊನಾದಿಂದ ಚೇತರಿಸಿಕೊಂಡಿದ್ದ ವಿಜಯ್ ಅವರ ತಾಯಿಗೆ ಬ್ರೈನ್ ಸ್ಟ್ರೋಕ್ ಆಗಿದ್ದು, ಕಳೆದ 22 ದಿನಗಳಿಂದ ಚಿಕಿತ್ಸೆ ನಡೆಯುತ್ತಿದೆ. ಆಸ್ಪತ್ರೆಗೆ ಹೋಗಲಿಕ್ಕೆ ಒಪ್ಪದ ಕಾರಣ ಮನೆಗೆ ವೈದ್ಯರನ್ನ ಕರೆಸಿಕೊಂಡು ಚಿಕಿತ್ಸೆ ಕೊಡಿಸುತ್ತಿದ್ದಾರೆ. ಆದರೆ, ಆರೋಗ್ಯದಲ್ಲಿ ಸುಧಾರಣೆ ಕಂಡುಬರ‍್ತಿಲ್ಲ, ದಿನೇ ದಿನೇ ವೀಕ್ ಆಗ್ತಿದ್ದು ಚಲನವಲನ ನಿಂತುಹೋಗಿದೆ. ಈ ಬಗ್ಗೆ ಭಾವುಕರಾಗಿ ಮಾತನಾಡುವ ವಿಜಯ್, ಅವ್ವನ ಸ್ಥಿತಿಯನ್ನ ನೋಡಿದ್ರೆ ಕೊನೆದಿನಗಳನ್ನ ಎಣಿಸುತ್ತಿದ್ದಾರಾ ಅನಿಸುತ್ತೆ ಜೊತೆಗೆ ಅಮ್ಮ ಹುಷಾರಾಗ್ತಾರೆ ಎನ್ನುವ ನಂಬಿಕೆ ಇದೆ. ಅಂದ್ಹಾಗೇ, ಅಮ್ಮ ಮತ್ತೆ ಸಿಗೋದಿಲ್ಲ, ಇರುವಷ್ಟು ದಿನ ಚೆನ್ನಾಗಿ ನೋಡಿಕೊಳ್ಳಬೇಕು ಅನ್ನೋದು ನನ್ನಾಸೆ ಹೀಗಾಗಿ ಅಮ್ಮನ ಪಕ್ಕದಲ್ಲಿ ಇದ್ದು ಹಾರೈಕೆ ಮಾಡುತ್ತಿದ್ದೇನೆ ಅಂತಾರೇ. ವಿಜಯ್ ಹೆತ್ತವರನ್ನು ಹೇಗೆ ಆರೈಕೆ ಮಾಡ್ತಾರೆ ಅನ್ನೋದು ಇಡೀ ಕರ್ನಾಟಕಕ್ಕೆ ಗೊತ್ತು. ಕೊರೊನಾ ಬಂದಂತಹ ಸಂದರ್ಭದಲ್ಲಿ ಮಕ್ಕಳಂತೆ ಪೋಷಕರನ್ನ ಆರೈಕೆ ಮಾಡಿದನ್ನ ಎಲ್ಲರೂ ನೋಡಿದ್ದಾರೆ. ಮಗನ ಆರೈಕೆಯಿಂದಲೇ ಹೆತ್ತವರು ಕೊರೊನಾ ಗೆದ್ದುಬಂದರು. ಇದೀಗ ವಿಜಯ್ ಅಮ್ಮನ ಆರೋಗ್ಯ ಮತ್ತೆ ಹದೆಗೆಟ್ಟಿದೆ. ಗುಣಮುಖರಾಗಿ ಬರಲೆಂದು ವಿಜಯ್ ಕುಟುಂಬ ಮಾತ್ರವಲ್ಲ ಅಭಿಮಾನಿ ಬಳಗದವರು ಕೂಡ ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳಬೇಕಿದೆ.