ಸಿನಿಮಾ ಸುದ್ದಿ: ತಮಿಳಿನ ಸೂಪರ್ ಸ್ಟಾರ್ ರಜಿನಿಕಾಂತ ಅವರ 171 ಸಿನಿಮಾವನ್ನು ಲಿಯೋ ಸಿನಿಮಾ ನಿರ್ದೇಶಕ ಲೋಕೇಶ್ ಕನಕರಾಜ ಅವರು ನಿರ್ದೇಶನ ಮಾಡಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದ್ದು ಆದರೆ ಇನ್ನೊಂದು ಸ್ಪೆಶಲ್ ಸುದ್ದಿ ಹರಿದಾಡುತ್ತಿದ್ದೆ.
ಅದೇನೆಂದರೆ ಸೂಪರ್ ಸ್ಟಾರ್ ಜೊತೆ ಕನ್ನಡದ ಕರಿಜಿರತೆ ದುನಿಯಾ ವಿಜಿ ಕಳನಾಯಕನಾಗಿ ನಟಿಸುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಆದರೆ ಇದು ಎಷ್ಟು ಮಟ್ಟಿಗೆ ಸತ್ಯ ಅಥವಾ ಸುಳ್ಳು ಎನ್ನುವುದು ತಿಳಿದಿಲ್ಲ ಆದರೆ ಇದನ್ನು ಸುಳ್ಳು ಎಂದು ಅಲ್ಲೆಗಳೆಯುವ ಹಾಗಿಲ್ಲ.
ಹೌದು ಈ ಹಿಂದೆ ತೆಲುಗಿನ ಬಾಲಕೃಷ್ಣ ನಟನೆಯ ವೀರ ಸಿಂಹ ರೆಡ್ಡಿ ಸಿನಿಮಾದಲ್ಲಿ ಕಳನಟನಾಗಿ ನಟಿಸಿರುವ ದುನಿಯಾ ವಿಜಿಯವರು ಪರಭಾಷೆಯ ಸಿನಿಮಾದಲ್ಲಲಿ ನಟಿಸುತ್ತಾರೆ ಎಂಬುದನ್ನು ಸಾಭಿತುಪಡಿಸಿದರು. ಅಂತಹದರಲ್ಲಿ ಸೂಪರ್ ಸ್ಟಾರ್ ಜೊತೆ ನಟಿಸಲು ಕೇಳಿದರು ಇಲ್ಲ ಎನ್ನುವುದಿಲ್ಲ ಎನ್ನುವ ಕಾರಣಕ್ಕೆ ಈ ಗಾಳಿ ಸುದ್ದಿಯನ್ನು ಸುಳ್ಳು ಸುದ್ದಿ ಎಂದು ತಳ್ಳಿ ಹಾಕುವ ಹಾಗಿಲ್ಲ.
ಇನ್ನು ಲಿಯೋ ಸಿನಿಮಾ ಸಕ್ಸಸ್ ನಂತರ ನಿರ್ದೇಶಕ ಲೋಕೇಶ್ ಕನಕರಾಜ ಅವರು ಮುಂದಿನ ಸಿನಿಮಾದ ಶೂಟಿಂಗ್ ಲೋಕೇಶನ್ ಗಳ ಹುಡುಕಾಟದಲ್ಲಿ ನಿರತರಾಗಿದ್ದಾರೆ. ಈಗ ದುನಿಯಾ ವಿಜಯ್ ಅವರು ರಜಿನಿಕಾಂತ ಜೊತೆ ಕಳನಾಯಕನಾಗಿ ನಟಿಸಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿವೆ. ಆದರೆ ಇಲ್ಲಿಯವರೆಗೂ ಯಾವುದೇ ಅಧಿಕೃತ ಘೋಷಣೆಗಳು ಹೊರಬಿದ್ದಿಲ್ಲ.
ಭರ್ಜರಿ ಬೇಟೆಯಾಡಿದ ಹುಬ್ಬಳ್ಳಿ ಉಪನಗರ ಪೊಲೀಸರು; ಸ್ಕೂಟರ್ ನಿಂದ ಕಾಣೆಯಾಗಿದ್ದ ಹಣ ಪತ್ತೆ..!
ಸರ್ಕಾರಿ ಬಸ್ ನ್ನು ಬಿಡದ ಕದೀಮರು..! ರಾತ್ರಿ ನಿಲ್ದಾಣದಲ್ಲಿ ನಿಲ್ಲಿಸಿದ್ದ ಬಸ್ ಬೆಳಗಾಗೊದರೊಳಗೆ ಮಾಯ..!