Wednesday, August 20, 2025

Latest Posts

ದಸರಾ ಅಂಬಾರಿ11,600 ಆಸನ ಕಡಿತ – VIPಗೂ ಅಡಚಣೆ!

- Advertisement -

ಈ ಬಾರಿ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧತೆ ಜೋರಾಗಿದೆ. ಜಂಬೂಸವಾರಿ ವೇಳೆ ಅರಮನೆ ಆವರಣದಲ್ಲಿ ಸುಮಾರು 11,600 ಆಸನಗಳ ಕಡಿತ ಮಾಡಲಾಗುತ್ತಿದೆ. ಕಳೆದ ವರ್ಷಗಳಿಗೆ ಹೋಲಿಸಿದರೆ ಈ ಕ್ರಮವು ಗಣನೀಯವಾಗಿದೆ. ಆಸನಗಳ ಈ ಕಡಿತಕ್ಕೆ ಕಾರಣವೆಂದರೆ, ಆರ್‌ಸಿಬಿ ವಿಜಯೋತ್ಸವ ವೇಳೆ ಬೆಂಗಳೂರಿನಲ್ಲಿ ಸಂಭವಿಸಿದ ಕಾಲ್ತುಳಿತ ಘಟನೆ.

ಆ ಘಟನೆಯ ಹಿನ್ನೆಲೆ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಪ್ರಮಾಣೀಕೃತ ಕಾರ್ಯಾಚರಣೆ ವಿಧಾನ ರೂಪಿಸಿದ್ದು, ಈ ಹೊಸ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಜಿಲ್ಲಾಡಳಿತ ನಿರ್ಧಾರ ತೆಗೆದುಕೊಂಡಿದೆ. ಇದರ ಫಲವಾಗಿ, 2023ರ 38,000 ಆಸನಗಳಿಗಿಂತ ಮತ್ತು 2024ರ 59,600 ಆಸನಗಳಿಗಿಂತ ಈ ಬಾರಿ seating ವ್ಯವಸ್ಥೆ 48,000ಕ್ಕೆ ಸೀಮಿತವಾಗಲಿದೆ.

ಈ ಬಾರಿ VVIP ಹಾಗೂ VIPಗಳಿಗೆ ಹಂಚಲಾಗುವ ಆಸನಗಳಲ್ಲೂ ಸುಮಾರು 1,000 ಆಸನ ಕಡಿತ ಮಾಡಲಾಗುತ್ತಿದೆ. ಪ್ರತಿಯೊಂದು ಎನ್‌ಕ್ಲೋಸರ್‌ನಲ್ಲಿ ಸರಾಸರಿ 500ರಿಂದ 1,000 ಆಸನಗಳಷ್ಟು ಕಡಿತವಾಗಲಿದೆ. ಕಳೆದ ವರ್ಷ ಆನೆಗಳ ಮೆರವಣಿಗೆಗಾಗಿ ಅರಮನೆ ಆವರಣದಲ್ಲಿ ಮಾರ್ಗ ಬದಲಾಯಿಸಲಾಗಿತ್ತು. ಹೊಸ ಮಾರ್ಗದಲ್ಲಿ ಸಾರ್ವಜನಿಕರಿಗಾಗಿ 11,000ಕ್ಕೂ ಹೆಚ್ಚು ಆಸನಗಳ ವ್ಯವಸ್ಥೆ ಮಾಡಲಾಗಿತ್ತು. ಈ ಮಾರ್ಗವನ್ನು ಈ ಬಾರಿ ಮುಂದುವರಿಸಬೇಕೇ ಅಥವಾ ಹಳೆಯ ಮಾರ್ಗಕ್ಕೆ ಮರುಬರಬೇಕೇ ಎಂಬ ಬಗ್ಗೆ ಇನ್ನೂ ಅಂತಿಮ ತೀರ್ಮಾನವಾಗಿಲ್ಲ.

ಈ ಬಾರಿ ಮೈಸೂರು ದಸರಾ ಸೆಪ್ಟೆಂಬರ್ 22ರಿಂದ ಅಕ್ಟೋಬರ್ 2ರವರೆಗೆ ನಡೆಯಲಿದೆ. ಅಕ್ಟೋಬರ್ 2ರಂದು ವಿಜಯದಶಮಿ ದಿನ ಜಂಬೂಸವಾರಿ ಮೆರವಣಿಗೆ ಜರುಗಲಿದೆ. 750 ಕೆ.ಜಿ ತೂಕದ ಚಿನ್ನದ ಅಂಬಾರಿಯಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿ ಮೆರವಣಿಗೆಯಲ್ಲಿ ಸಾಗಲಿದೆ.

- Advertisement -

Latest Posts

Don't Miss